Indian Budget History: ʼಬಜೆಟ್ʼ ಪದ್ದತಿ ಯಾವಾಗ ಪ್ರಾರಂಭವಾಯಿತು, ಇದರ ಇತಿಹಾಸದ ಬಗ್ಗೆ ನಿಮ್ಗೆ ಗೊತ್ತೆ..? ಇಲ್ಲಿದೆ ಮಾಹಿತಿ

Historical Indian Budget Overview : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಇಂದು ಬಜೆಟ್ ಮಂಡಿಸಿದ್ದಾರೆ. ಸೀತಾರಾಮನ್‌ ಅವರ 6ನೇ ಬಜೆಟ್ ಇದಾಗಿದೆ. ಇನ್ನು ಭಾರತದಲ್ಲಿ ʼಬಜೆಟ್‌ʼ ಘೋಷಣೆ ಪದ್ದತಿ ಯಾವಾಗಿನಿಂದ ಜಾರಿಗೆ ಬಂತು, ಅದರ ಹಿನ್ನೆಲೆ ಏನು, ಮೊದಲಿಗೆ ಯಾರು ಬಜೆಟ್‌ ಮಂಡನೆ ಮಾಡಿದರು ಎನ್ನುವ ಸಂಪೂರ್ಣ ವಿವರ ಇಲ್ಲಿದೆ ನೋಡಿ..

Written by - Krishna N K | Last Updated : Feb 1, 2024, 01:24 PM IST
  • ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ.
  • ಭಾರತದಲ್ಲಿ ʼಬಜೆಟ್‌ʼ ಘೋಷಣೆ ಪದ್ದತಿ ಯಾವಾಗಿನಿಂದ ಜಾರಿಗೆ ಬಂತು ಅಂತ ಗೊತ್ತೆ..?
  • ಮೊದಲಿಗೆ ಯಾರು ಬಜೆಟ್‌ ಮಂಡನೆ ಮಾಡಿದರು ಎನ್ನುವ ಸಂಪೂರ್ಣ ವಿವರ ಇಲ್ಲಿದೆ ನೋಡಿ..
Indian Budget History: ʼಬಜೆಟ್ʼ ಪದ್ದತಿ ಯಾವಾಗ ಪ್ರಾರಂಭವಾಯಿತು, ಇದರ ಇತಿಹಾಸದ ಬಗ್ಗೆ ನಿಮ್ಗೆ ಗೊತ್ತೆ..? ಇಲ್ಲಿದೆ ಮಾಹಿತಿ title=

Historical perspective on Indian budget : ಕೇಂದ್ರ ವಿತ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು ಬಜೆಟ್‌ ಮಂಡನೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಸರ್ಕಾರದ ಕೊನೆಯ ಬಜೆಟ್ ಇದು. ಇಂದು ಬೆಳಗ್ಗೆ 11 ಗಂಟೆಗೆ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ ಮಂಡನೆ ಮಾಡಿದರು. ಭಾರತೀಯ ಬಜೆಟ್‌ ಇತಿಹಾಸದ ಬಗ್ಗೆ ಕಿರು ಪರಿಚಯ ಇಲ್ಲಿದೆ..

ಈ ಬಾರಿಯ ಬಜೆಟ್‌ನಲ್ಲಿ ಏನಿದೆ ಅಂತ ತಿಳಿಯುವ ಮುನ್ನ, ಬಜೆಟ್‌ ಕುರಿತ ಕೆಲವು ಕುತೂಹಲಕಾರಿ ಸಂಗತಿಗಳನ್ನು ತಿಳಿದುಕೊಳ್ಳಬೇಕು. ಚುನಾವಣಾ ವರ್ಷದಲ್ಲಿ ಇದನ್ನು ಪರಿಚಯಿಸುವುದರಿಂದ ಇದನ್ನು ಮಧ್ಯಂತರ ಬಜೆಟ್ ಅಥವಾ ವೋಟ್ ಆನ್ ಅಕೌಂಟ್ ಬಜೆಟ್ ಎಂದು ಕರೆಯಲಾಗುತ್ತದೆ. ಇದು ಕೇವಲ ಮೂರು ತಿಂಗಳು ಇರುತ್ತದೆ. ಹೊಸ ಸರ್ಕಾರ ರಚನೆಯಾದ ನಂತರ 2024-25ನೇ ಸಾಲಿಗೆ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗಲಿದೆ. 

ಇದನ್ನೂ ಓದಿ:ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ.! ಮಹತ್ವದ ನಿರ್ಧಾರ ಪ್ರಕಟ

ದೇಶದಲ್ಲಿ ಇದುವರೆಗೆ 77 ಪೂರ್ಣ ಪ್ರಮಾಣದ ಬಜೆಟ್‌ಗಳು ಮತ್ತು 14 ತಾತ್ಕಾಲಿಕ ಬಜೆಟ್‌ಗಳನ್ನು ಪರಿಚಯಿಸಲಾಗಿದೆ. ಸ್ವತಂತ್ರ ಭಾರತದ ಮೊದಲ ಬಜೆಟ್ ಅನ್ನು 26 ನವೆಂಬರ್ 1947 ರಂದು ಮಂಡಿಸಲಾಯಿತು. ಅದು ಮೊದಲ ಮಧ್ಯಂತರ ಬಜೆಟ್ ಕೂಡ. 171 ಕೋಟಿ ರೂ. ಬಜೆಟ್‌ ಅನ್ನು ಮೊದಲ ಹಣಕಾಸು ಸಚಿವ ಷಣ್ಮುಗ ಶೆಟ್ಟಿ ಈ ಮಂಡಿಸಿದರು. ಅದರ ನಂತರ 1 ಏಪ್ರಿಲ್ 1948 ರಂದು ಪೂರ್ಣ ಪ್ರಮಾಣದ ಬಜೆಟ್ ಅನ್ನು ಪರಿಚಯಿಸಲಾಯಿತು. 

ಭಾರತದ ಮೊದಲ ಬಜೆಟ್ ಅನ್ನು 1860 ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಪರಿಚಯಿಸಲಾಯಿತು. ಆಗ ಇನ್‌ಕಾಂಟ್ಯಾಕ್ಟ್ ಪ್ರಯೋಗವನ್ನು ಮೊದಲ ಬಾರಿಗೆ ಮಾಡಲಾಯಿತು. ಈ ಹಿಂದೆ ಯುಕೆ ಸರ್ಕಾರದ ಸಮಯದ ಪ್ರಕಾರ ಸಂಜೆ 5 ಗಂಟೆಗೆ ಬಜೆಟ್ ಮಂಡನೆ ಮಾಡಲಾಗುತ್ತಿತ್ತು. ಫೆಬ್ರವರಿ ಕೊನೆಯ ದಿನದಲ್ಲಿ ಬಜೆಟ್ ಇತ್ತು. 

ಇದನ್ನೂ ಓದಿ:ಕೃಷಿ ಕ್ಷೇತ್ರಕ್ಕೆ ಮಹತ್ವದ ಘೋಷಣೆ, ಡೇರಿ ರೈತರಿಗಾಗಿ ಹೊಸ ಯೋಜನೆ, ನ್ಯಾನೋ ಡಿಎಪಿ ಬಳಕೆಗೆ ಒತ್ತು!

ಬ್ರಿಟಿಷರು ಆರಂಭಿಸಿದ ಬಜೆಟ್ ಅನ್ನು ಸಂಜೆ 5 ಗಂಟೆಗೆ ಮಂಡಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಅಂತ 1999ರಲ್ಲಿ ಅಂದಿನ ಹಣಕಾಸು ಸಚಿವ ಯಶವಂತ್ ಸಿನ್ಹಾ ಸ್ವಸ್ತಿ ಹೇಳಿದ್ದರು. ಬಿಜೆಪಿ ಸರ್ಕಾರ ರಚನೆಗೂ ಮುನ್ನ ಅಂದರೆ 2014ರ ವರೆಗೆ ರೈಲ್ವೆ ಬಜೆಟ್ ಮತ್ತು ಸಾಮಾನ್ಯ ಬಜೆಟ್ ಬೇರೆ ಬೇರೆಯಾಗಿತ್ತು. ಅದರ ನಂತರ, ಸಾಮಾನ್ಯ ಬಜೆಟ್‌ನೊಂದಿಗೆ ರೈಲ್ವೆ ಬಜೆಟ್ ಅನ್ನು ಪರಿಚಯಿಸಲಾಯಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News