ಸ್ವದೇಶಿ ಜಲಾಂತರ್ಗಾಮಿ ನೌಕೆ ಐಎನ್ಎಸ್ ಕಲ್ವರಿ ಲೋಕಾರ್ಪಣೆ

ದೇಶದ ಮೊದಲ ಸ್ವದೇಶಿ ನಿರ್ಮಿತ ಸ್ಕೋರ್ಪೀನ್-ಶ್ರೇಣಿಯ ಜಲಾಂತರ್ಗಾಮಿ ನೌಕೆ 'ಐಎನ್ಎಸ್ ಕಲ್ವಾರಿ'ಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲೋಕಾರ್ಪಣೆಗೊಳಿಸಿದರು. 

Last Updated : Dec 14, 2017, 11:02 AM IST
  • 'ಐಎನ್ಎಸ್ ಕಲ್ವಾರಿ' ದೇಶದ ಮೊದಲ ಸ್ವದೇಶಿ ನಿರ್ಮಿತ ಸ್ಕೋರ್ಪೀನ್-ಶ್ರೇಣಿಯ ಜಲಾಂತರ್ಗಾಮಿ ನೌಕೆ.
  • ಮಜಗಾನ್ ಡಾಕ್ಯಾರ್ಡ್ ಲಿಮಿಟೆಡ್ ತನ್ನ ಪ್ರಾಜೆಕ್ಟ್ 75 ಅಡಿಯಲ್ಲಿ ಫ್ರಾನ್ಸ್ನ ಡಿಸಿಎನ್ಎಸ್ ತಾಂತ್ರಿಕ ಸಹಯೋಗದೊಂದಿಗೆ ನಿರ್ಮಿಸಲಾಗಿದೆ.
  • ಈ ನೌಕೆ ಯುದ್ಧ ವಿರೋಧಿ, ಜಲಾಂತರ್ಗಾಮಿ ಯುದ್ಧ ವಿರೋಧಿ, ಗುಪ್ತಚರ ಸಂಗ್ರಹಣೆ, ಗಣಿ ಹಾಕುವಿಕೆ ಮತ್ತು ಪ್ರದೇಶದ ಕಣ್ಗಾವಲು ಮುಂತಾದ ವಿವಿಧ ರೀತಿಯ ಕಾರ್ಯಾಚರಣೆಗಳನ್ನು ಕೈಗೊಳ್ಳಬಲ್ಲದು.
ಸ್ವದೇಶಿ ಜಲಾಂತರ್ಗಾಮಿ ನೌಕೆ ಐಎನ್ಎಸ್ ಕಲ್ವರಿ ಲೋಕಾರ್ಪಣೆ title=

ಮುಂಬೈ: ದೇಶದ ಮೊದಲ ಸ್ವದೇಶಿ ನಿರ್ಮಿತ ಸ್ಕೋರ್ಪೀನ್-ಶ್ರೇಣಿಯ ಜಲಾಂತರ್ಗಾಮಿ ನೌಕೆ 'ಐಎನ್ಎಸ್ ಕಲ್ವಾರಿ'ಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲೋಕಾರ್ಪಣೆಗೊಳಿಸಿದರು. 

ಸ್ಕೋರ್ಪೀನ್ ನ ಆಗಮನದಿಂದಾಗಿ `ಮೇಕ್ ಇನ್ ಇಂಡಿಯಾ' ಯೋಜನೆ ಮತ್ತಷ್ಟು ಬಲ ನೀಡಲಿದೆ. ಸುಮಾರು 17 ವರ್ಷಗಳ ನಂತರ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳುತ್ತಿರುವ ಮೊದಲ ಸಾಂಪ್ರದಾಯಿಕ ಜಲಾಂತರ್ಗಾಮಿ ಇದಾಗಿದೆ. 

ಸ್ಕೋರ್ಪೀನ್ ಪ್ರವೇಶವು 'ಮೇಕ್ ಇನ್ ಇಂಡಿಯಾ' ಯೋಜನೆಗೆ ಬೃಹತ್ ವರ್ಧಕವಾಗಿದೆ. ಇದು 17 ವರ್ಷಗಳ ನಂತರ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳುವ ಮೊದಲ ಸಾಂಪ್ರದಾಯಿಕ ಜಲಾಂತರ್ಗಾಮಿಯಾಗಿದೆ.

ಇದೊಂದು ಡೀಸೆಲ್-ಎಲೆಕ್ಟ್ರಿಕ್ ದಾಳಿ ಜಲಾಂತರ್ಗಾಮಿಯಾಗಿದ್ದು, ಮಜಗಾನ್ ಡಾಕ್ಯಾರ್ಡ್ ಲಿಮಿಟೆಡ್ ತನ್ನ ಪ್ರಾಜೆಕ್ಟ್ 75 ಅಡಿಯಲ್ಲಿ ಫ್ರಾನ್ಸ್ನ ಡಿಸಿಎನ್ಎಸ್ ತಾಂತ್ರಿಕ ಸಹಯೋಗದೊಂದಿಗೆ ನಿರ್ಮಿಸಿದೆ. ಇದು ನೌಕಾಪಡೆಗೆ ಸೇರ್ಪಡೆಗೊಳ್ಳುವ ಇಂತಹ ಆರು ಜಲಾಂತರ್ಗಾಮಿಗಳಲ್ಲಿ  ಮೊದಲನೆಯದಾಗಿದೆ.

"ಸ್ಕೋರ್ಪೀನ್ ನ್ನಲ್ಲಿ ಬಳಸಿರುವ ತಂತ್ರಜ್ಞಾನವು ಸುಧಾರಿತ ಶ್ರವಣೇಂದ್ರಿಯ ನಿಶ್ಯಕ್ತಿ ತಂತ್ರಗಳು, ಕಡಿಮೆ ವಿಕಿರಣದ ಶಬ್ದ ಮಟ್ಟಗಳು, ಜಲ-ಕ್ರಿಯಾತ್ಮಕವಾಗಿ ಹೊಂದುವಂತಹ ಆಕಾರ ಮತ್ತು ನಿಖರ ಮಾರ್ಗದರ್ಶಿ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಶತ್ರುವಿನ ಮೇಲೆ ದುರ್ಬಲವಾದ ಆಕ್ರಮಣವನ್ನು ಪ್ರಾರಂಭಿಸುವ ಸಾಮರ್ಥ್ಯದಂತಹ ಉನ್ನತವಾದ ರಹಸ್ಯ ವೈಶಿಷ್ಟ್ಯಗಳನ್ನು ಖಾತರಿಪಡಿಸಿದೆ," ಎಂಡಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. 

ಸ್ಕೋರ್ಪೀನ್ ಜಲಾಂತರ್ಗಾಮಿ ನೌಕೆಗಳು ಯುದ್ಧ ವಿರೋಧಿ, ಜಲಾಂತರ್ಗಾಮಿ ಯುದ್ಧ ವಿರೋಧಿ, ಗುಪ್ತಚರ ಸಂಗ್ರಹಣೆ, ಗಣಿ ಹಾಕುವಿಕೆ ಮತ್ತು ಪ್ರದೇಶದ ಕಣ್ಗಾವಲು ಮುಂತಾದ ವಿವಿಧ ರೀತಿಯ ಕಾರ್ಯಾಚರಣೆಗಳನ್ನು ಕೈಗೊಳ್ಳಬಲ್ಲವು.

Trending News