ಇಂದಿರಾ ಸಾಹವ್ನಿ 2.0: ಪ್ರಧಾನಿ ಪಿ.ವಿ.ನರಸಿಂಹರಾವ್ ಮೀಸಲಾತಿ ನಿರ್ಧಾರದಂತೆ ಮೋದಿ ನಡೆಯನ್ನೂ ತಡೆಯುತ್ತಾರೆಯೇ?

 ಈ ಹಿಂದೆ ಐತಿಹಾಸಿಕ ಸುಪ್ರಿಂಕೋರ್ಟ್ ನ ತೀರ್ಪಿಗೆ ಕಾರಣವಾಗಿದ್ದ ವಕೀಲೆ ಇಂದಿರಾ ಸಾವ್ನಿ ಈಗ ಮೋದಿ ಸರ್ಕಾರದಲ್ಲಿ ಮೇಲ್ಜಾತಿ ಬಡವರಿಗೆ ನೀಡಿರುವ ಶೇ.10 ರಷ್ಟು ಮೀಸಲಾತಿ ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುತ್ತದೆ ಎಂದು ಹೇಳಿದ್ದಾರೆ. 

Last Updated : Jan 13, 2019, 11:48 AM IST
ಇಂದಿರಾ ಸಾಹವ್ನಿ 2.0: ಪ್ರಧಾನಿ ಪಿ.ವಿ.ನರಸಿಂಹರಾವ್ ಮೀಸಲಾತಿ ನಿರ್ಧಾರದಂತೆ ಮೋದಿ ನಡೆಯನ್ನೂ ತಡೆಯುತ್ತಾರೆಯೇ? title=

ನವದೆಹಲಿ:  ಈ ಹಿಂದೆ ಐತಿಹಾಸಿಕ ಸುಪ್ರಿಂಕೋರ್ಟ್ ನ ತೀರ್ಪಿಗೆ ಕಾರಣವಾಗಿದ್ದ ವಕೀಲೆ ಇಂದಿರಾ ಸಾವ್ನಿ ಈಗ ಮೋದಿ ಸರ್ಕಾರದಲ್ಲಿ ಮೇಲ್ಜಾತಿ ಬಡವರಿಗೆ ನೀಡಿರುವ ಶೇ.10 ರಷ್ಟು ಮೀಸಲಾತಿ ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುತ್ತದೆ ಎಂದು ಹೇಳಿದ್ದಾರೆ. 

ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿರುವ 67 ವರ್ಷದ ಇಂದಿರಾ ಸಾಹವ್ನಿ "ಕೆಲವರು ಈಗಾಗಲೇ ನನ್ನನ್ನು ಈ ಕುರಿತಾಗಿ ಸಂಪರ್ಕಿಸಿ ಶೇ.60ರಷ್ಟು ಮೀಸಲಾತಿಯನ್ನು ಸುಪ್ರಿಂಕೋರ್ಟ್ ನಲ್ಲಿ ಪ್ರಶ್ನಿಸುವ ಕುರಿತಾಗಿ ಕೇಳಿದ್ದಾರೆ.ಈಗಾಗಲೇ ಸುಪ್ರಿಂಕೋರ್ಟ್ ನಲ್ಲಿ ಒಬ್ಬರು ತಕರಾರು ಅರ್ಜಿಯನ್ನು ಸಲ್ಲಿಸಿದ್ದಾರೆ.ಸದ್ಯ ನಾನು ಸುಪ್ರಿಂಕೋರ್ಟ್ ನಲ್ಲಿ ಪ್ರಶ್ನಿಸಬೇಕೋ ಬೇಡವೋ ಎನ್ನುವುದರ ಕುರಿತಾಗಿ ಇನ್ನು ನಿರ್ಧಾರವನ್ನು ತೆಗೆದುಕೊಂಡಿಲ್ಲ, ಆದರೆ ಅದರ ಬಗ್ಗೆ ಯೋಚಿಸುತ್ತಿದ್ದೇನೆ. ಅನಂತರ ಈ ಕುರಿತಾಗಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ. 

ಇಂದಿರಾ ಸಾಹವ್ನಿ ಹೇಳುವಂತೆ "ಸಂವಿಧಾನ ತಿದ್ದುಪಡಿಯ 124 ನೇ ಮಸೂದೆಯು ಸಂವಿಧಾನದ ವಿಧಿ 14 ಮತ್ತು 15 ನ್ನು ಉಲ್ಲಂಘಿಸುತ್ತದೆ. ಈ ಎರಡು ವಿಧಿಗಳು ಕೂಡ ಸಂವಿಧಾನದ ಮೂಲರಚನೆಯ ಭಾಗಗಳು. ಸಾಮಾನ್ಯ ವರ್ಗಕ್ಕೆ ನೀಡಿರುವ ಶೇ 10 ರಷ್ಟು ಮೀಸಲಾತಿಯು ಹಿಂದುಳಿದ ವರ್ಗಗಳು ಮತ್ತು ಎಸ್ಸಿ,ಎಸ್ಟಿ ಗಳನ್ನು ಮೀಸಲಾತಿ ಪರದೆಯಿಂದ ಹೊರಗಿಡುತ್ತದೆ. ಏಕೆಂದರೆ ಇದು ಆರ್ಥಿಕ ಆಧಾರದ ಮೇಲೆ ಇದೆ. ಆದ್ದರಿಂದ ಈ ತಿದ್ದುಪಡಿ ಸಂವಿಧಾನದಲ್ಲಿನ ವಿಧಿ 14,15 ನ್ನು ಉಲ್ಲಂಘಿಸುವುದಲ್ಲದೆ ಅದರ ಜೊತೆಗೆ ಸಂಘರ್ಷವೆರ್ಪಡುವಂತೆ ಮಾಡುತ್ತದೆ" ಎಂದರು.

ಇನ್ನು ಮುಂದುವರೆದು ಈ ತಿದ್ದುಪಡಿಯು ಆರ್ಥಿಕ ಮಾನದಂಡವೊಂದೇ ಮೀಸಲಾತಿಯನ್ನು ಒದಗಿಸುವುದಕ್ಕೆ ಮಾರ್ಗವಲ್ಲ ಎನ್ನುವ ಮಂಡಲ್ ನಿರ್ಧಾರವನ್ನು ಕೂಡ ಉಲ್ಲಂಘಿಸುತ್ತದೆ.ಇನ್ನೊಂದೆಡೆಗೆ ಈ ತಿದ್ದುಪಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗವೆಂದರೆ ಯಾವುದು ಎನ್ನುವುದರ ಕುರಿತಾದ ವ್ಯಾಖ್ಯಾನವನ್ನು ನೀಡಿಲ್ಲ. ಇದನ್ನು ಆಯಾ ರಾಜ್ಯಕ್ಕೆ ಬಿಟ್ಟಿದ್ದಾರೆ, ಇದರಿಂದ ಪ್ರತಿಯೊಂದು ರಾಜ್ಯಗಳು ತಮ್ಮದೇ ವಾಖ್ಯಾನದೊಂದಿಗೆ ಬರುತ್ತವೆ ಎಂದು ತಿಳಿಸಿದರು.

ಮೆಲ್ವರ್ಗದಲ್ಲಿನ ಬಡವರಿಗೆ ನೀಡಿರುವ ಮೀಸಲಾತಿಗೆ ಯಾವುದೇ ಅಂಕಿ ಅಂಶಗಳ ಮಾನದಂಡವಿಲ್ಲ, ಆದ್ದರಿಂದ ಇದು 2006ರಲ್ಲಿ ಸುಪ್ರಿಂಕೋರ್ಟ್ ನೀಡಿರುವ ಮೀಸಲಾತಿಯಲ್ಲಿನ ಬಡ್ತಿ ಕುರಿತ ತೀರ್ಪಿನ ಜೊತೆ ಸಂಘರ್ಷವೆರ್ಪಡುತ್ತದೆ. ನಾಗರಾಜ ತೀರ್ಪಿನಲ್ಲಿ ಸುಪ್ರಿಂಕೋರ್ಟ್ ಬಹಳ ಸ್ಪಷ್ಟವಾಗಿ ಹೇಳಿದೆ "ಸರ್ಕಾರ ಮೀಸಲಾತಿಯನ್ನು ನೀಡುವ ಮೊದಲು ಅದಕ್ಕೆ ಸಂಬಂಧಿಸಿದ ಹಾಗೆ ದತ್ತಾಂಶದ ಮಾಹಿತಿಯನ್ನು ಕಲೆ ಹಾಕಿರಬೇಕು ಎಂದು ಹೇಳಿದೆ. ಆದರೆ ಈ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಪರಿಚಯಿಸುವ ಮೊದಲು ಅಂತಹ ಯಾವುದೇ ರೀತಿಯ ಕಾರ್ಯವನ್ನು ಸರ್ಕಾರ ಮಾಡಿಲ್ಲ ಎಂದು ಸಾಹವ್ನಿ ತಿಳಿಸಿದರು.

ಇಂದಿರಾ ಸಾಹವ್ನಿ ವಕೀಲೆಯಾಗಿ ಕಾರ್ಯನಿರ್ವಹಿಸುತ್ತಿದ್ದು 1992ರಲ್ಲಿ ಪ್ರಧಾನ ಮಂತ್ರಿ ಪಿ.ವಿ.ನರಸಿಂಹರಾವ್ ಅವರ ಮೀಸಲಾತಿ ನಿರ್ಧಾರವನ್ನು ಸುಪ್ರಿಂಕೋರ್ಟ್ ನಲ್ಲಿ ಪ್ರಶ್ನಿಸುವ ಮೂಲಕ ಐತಿಹಾಸಿಕ ಇಂದಿರಾ ಸಾಹವ್ನಿ ತೀರ್ಪಿನ ಮೂಲಕ ಖ್ಯಾತಿಯನ್ನು ಪಡೆದರು.

ಈಗ 27 ವರ್ಷಗಳ ನಂತರ ಪ್ರಧಾನಿ ಮೋದಿ ಸರ್ಕಾರದ ಮೇಲ್ವರ್ಗದ ಬಡವರಿಗೆ ಶೇ 10 ರಷ್ಟು ಮೀಸಲಾತಿಯ ನಡೆಯ ಕುರಿತಾಗಿ ವಕೀಲೆ ಇಂದಿರಾ ಸಾಹವ್ನಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ "ಒಂದು ವೇಳೆ ಮೀಸಲಾತಿಯಲ್ಲಿನ ವಿದ್ಯಾರ್ಥಿಯು ಸಾಮಾನ್ಯ ವರ್ಗದ ವಿದ್ಯಾರ್ಥಿಯಷ್ಟೇ ಅಂಕಗಳನ್ನುಪಡೆದಿದ್ದೆ ಆದಲ್ಲಿ ಅಂತವರನ್ನು ಜನರಲ್ ಮೆರಿಟ್ ನಲ್ಲಿ ಪರಿಗಣಿಸಬೇಕು.ಹೀಗೆ ಇದನ್ನು ಕಾರ್ಯರೂಪಕ್ಕೆ ತರುವ ಮೂಲಕ ನಿಧಾನವಾಗಿ ಮೀಸಲಾತಿ ಪ್ರಮಾಣವನ್ನು ಕಡಿಮೆ ಮಾಡಬಹುದು.ಆದರೆ ಈ ಸರ್ಕಾರದ ಸಂವಿಧಾನಿಕ ತಿದ್ದುಪಡಿ ನಿಜಕ್ಕೂ ನಿರಾಶಾಧಾಯಕ, ಏಕೆಂದರೆ ಬಾಕಿ ಉಳಿದಿರುವ ಶೇ.40 ಸ್ಥಾನದಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಕಷ್ಟ ಪಡಬೇಕಾಗುತ್ತದೆ"ಎಂದರು.

Trending News