ಏಪ್ರಿಲ್ 14ಕ್ಕೆ ಲಾಕ್ ಡೌನ್ ಕೊನೆಗೊಳಿಸಲು ಸಾಧ್ಯವಿಲ್ಲ -ಪ್ರಧಾನಿ ಮೋದಿ

ಕರೋನವೈರಸ್ ಪ್ರಕರಣಗಳ ತೀವ್ರತೆಯ ಮಧ್ಯೆ ಏಪ್ರಿಲ್ 14 ರಂದು ಲಾಕ್ ಡೌನ್ ನ್ನು ಕೊನೆಗೊಳಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Last Updated : Apr 8, 2020, 03:26 PM IST
ಏಪ್ರಿಲ್ 14ಕ್ಕೆ ಲಾಕ್ ಡೌನ್ ಕೊನೆಗೊಳಿಸಲು ಸಾಧ್ಯವಿಲ್ಲ -ಪ್ರಧಾನಿ ಮೋದಿ title=
file photo

ನವದೆಹಲಿ: ಕರೋನವೈರಸ್ ಪ್ರಕರಣಗಳ ತೀವ್ರತೆಯ ಮಧ್ಯೆ ಏಪ್ರಿಲ್ 14 ರಂದು ಲಾಕ್ ಡೌನ್ ನ್ನು ಕೊನೆಗೊಳಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸರ್ವ ಪಕ್ಷಗಳ ಮುಖಂಡರೊಂದಿಗಿನ ಸಭೆಯಲ್ಲಿ ಅವರು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸುವುದಾಗಿ ಹೇಳಿದರು. ಆದರೆ ಲಾಕ್‌ಡೌನ್ ಯಾವುದೇ ಸಮಯದಲ್ಲಿ ಬೇಗನೆ ಕೊನೆಗೊಳ್ಳುವ ಸಾಧ್ಯತೆಯಿಲ್ಲ ಎನ್ನುವುದನ್ನು ಪ್ರಧಾನಿ ಸ್ಪಷ್ಟಪಡಿಸಿದರು.

COVID-19 ರ ನಂತರ ಜೀವನವು ಮತ್ತೆ ಒಂದೇ ಆಗುವುದಿಲ್ಲ, ಅದು  ಪೂರ್ವ-ಕರೋನಾ ಮತ್ತು ನಂತರದ ಕರೋನಾ ಎನ್ನುವ ರೀತಿಯಲ್ಲಿ ಬದಲಾವಣೆಯಾಗಲಿದೆ ಎಂದು ಪ್ರಧಾನಿ ತಿಳಿಸಿದರು. ಇನ್ನು ಮುಂದುವರೆದು ಬೃಹತ್ ನಡವಳಿಕೆ, ಸಾಮಾಜಿಕ ಮತ್ತು ವೈಯಕ್ತಿಕ ಬದಲಾವಣೆಗಳು ಆಗಬೇಕಿದೆ" ಎಂದು ಪಿಎಂ ಮೋದಿ ರಾಜಕೀಯ ಮುಖಂಡರೊಂದಿಗಿನ ವಿಡಿಯೋ  ಕಾನ್ಫರೆನ್ಸ್ ಸಭೆಯಲ್ಲಿ ತಿಳಿಸಿದ್ದಾರೆ.

ದೇಶದಲ್ಲಿ ಪ್ರಕರಣಗಳ ಸಂಖ್ಯೆ 5,194 ಕ್ಕೆ ಏರಿದ್ದರಿಂದ ಕೊರೊನಾವೈರಸ್ ವಿರುದ್ಧದ ಹೋರಾಟದ ಕುರಿತು ಚರ್ಚಿಸಲು ಸಭೆ ನಡೆಸಲಾಯಿತು. ಆರೋಗ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಗ್ರಾಮೀಣ ವ್ಯವಹಾರಗಳ ಕಾರ್ಯದರ್ಶಿ ವಿವರವಾದ ಪ್ರಸ್ತುತಿಯನ್ನು ನೀಡಿದರು.

Trending News