Himachal Pradesh Result Live Updates: "ಹಿಮಾಚಲ ಪ್ರದೇಶದಲ್ಲಿನ ಕಾಂಗ್ರೆಸ್ ಗೆಲುವಿಗೆ ಪ್ರಿಯಾಂಕಾ ಗಾಂಧಿ"

Himachal Pradesh Assembly Election Result Live Updates:ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022  ಫಲಿತಾಂಶ ಇಂದು ಪ್ರಕಟವಾಗಲಿದೆ.  ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಎಣಿಕೆಯ ಪ್ರತಿ ಕ್ಷಣದ  ಅಪ್ಡೇಟ್ ಇಲ್ಲಿದೆ. 

Written by - Ranjitha R K | Last Updated : Dec 8, 2022, 07:27 PM IST
Himachal Pradesh Result Live Updates: "ಹಿಮಾಚಲ ಪ್ರದೇಶದಲ್ಲಿನ ಕಾಂಗ್ರೆಸ್ ಗೆಲುವಿಗೆ ಪ್ರಿಯಾಂಕಾ ಗಾಂಧಿ"
Live Blog

Himachal Pradesh Assembly Election Result Live Updates:ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022  ಫಲಿತಾಂಶ ಇಂದು ಪ್ರಕಟವಾಗಲಿದೆ. ಹಿಮಾಚಲ ಪ್ರದೇಶದ 68 ಮತ ಎಣಿಕೆ ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯುತ್ತಿದೆ. ಮತ ಎಣಿಕೆಗೆ ಸುಮಾರು 10 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಎಲ್ಲಾ 68 ಸ್ಥಾನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸ್ಪರ್ಧಿಸಿವೆ. ಆಮ್ ಆದ್ಮಿ ಪಕ್ಷ 67  ಸ್ಥಾನಗಳಿಗೆ 
ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಎಣಿಕೆಯ ಪ್ರತಿ ಕ್ಷಣದ  ಅಪ್ಡೇಟ್ ಇಲ್ಲಿದೆ.

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಭರ್ಜರಿ ಗೆಲುವಿಗೆ ಪ್ರಿಯಾಂಕಾ ಗಾಂಧಿ ಮಾಡಿರುವ ಪ್ರಚಾರವೇ ಕಾರಣ ಎಂದು ಸ್ಥಳೀಯ ನಾಯಕರು ಹೇಳಿದ್ದಾರೆ.

ಪ್ರಿಯಾಂಕಾ ಗಾಂಧಿ ಹಿಮಾಚಲ ಪ್ರದೇಶದಲ್ಲಿ ಪಕ್ಷದ ಉಸ್ತುವಾರಿಯನ್ನು ಹಲವು ರ್ಯಾಲಿಗಳೊಂದಿಗೆ ಮುನ್ನಡೆಸಿದರು ಮತ್ತು ಚುನಾವಣೆಯ ಕಾರ್ಯತಂತ್ರದ ಯೋಜನೆಯಲ್ಲಿ ನಿಕಟವಾಗಿ ತೊಡಗಿಸಿಕೊಂಡಿದ್ದರು. ಪಕ್ಷದ ಗೆಲುವನ್ನು ಖಾತ್ರಿಪಡಿಸುವಲ್ಲಿ ಮತ್ತು ಬಿಜೆಪಿಯ ಚುನಾವಣಾ ಯಂತ್ರವನ್ನು ಸೋಲಿಸುವಲ್ಲಿ ಅವರ ನಾಯಕತ್ವವನ್ನು ಅನೇಕ ನಾಯಕರು ಶ್ಲಾಘಿಸಿದರು.

"ಇದು ನನಗೆ ಅತ್ಯಂತ ಭಾವನಾತ್ಮಕ ಕ್ಷಣವಾಗಿದೆ ಏಕೆಂದರೆ ದಿವಂಗತ ವೀರಭದ್ರ ಸಿಂಗ್‌ಗೆ ಜನರಿಂದ ಅದೇ ರೀತಿಯ ಬೆಂಬಲವನ್ನು ನಾನು ನೋಡುತ್ತಿದ್ದೇನೆ. ಚಂಡೀಗಢವು ಶಾಸಕರಿಗೆ ಸುಲಭವಾಗಿ ಪ್ರವೇಶಿಸಬಹುದಾದ ಸಭೆಯ ಸ್ಥಳವಾಗಿದೆ ಮತ್ತು ನಾವು ಕಳ್ಳಬೇಟೆಯ ಬಗ್ಗೆ ಚಿಂತಿಸುವುದಿಲ್ಲ" ಎಂದು ಹಿಮಾಚಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ವಿ.ಸಿಂಗ್ ಹೇಳಿದ್ದಾರೆ.

8 December, 2022

  • 16:38 PM

  • 15:20 PM

    ಮತ ಎಣಿಕೆ ಆರಂಭವಾದ ಎರಡು ಗಂಟೆಗಳಲ್ಲಿ ಬಿಜೆಪಿಯನ್ನು ಹಿಂದಿಕ್ಕುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಒಟ್ಟಾರೆ ಮತಗಳ ಪ್ರಮಾಣದಲ್ಲಿ ಬಿಜೆಪಿಯ ಶೇಕಡಾ 43 ರಷ್ಟು ಮತಗಳನ್ನು ಪಡೆದರೆ  ಕಾಂಗ್ರೆಸ್ ಶೇಕಡಾ 43.9 ರಷ್ಟು ಮತಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ

  • 15:10 PM

    ಕಾಂಗ್ರೆಸ್ ಗೆ ಸಿಎಂ ಜೈರಾಮ್ ಠಾಕೂರ್ ಅಭಿನಂದನೆ :
    ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಕಾಂಗ್ರೆಸ್ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ. ನಾನು ಜನಾದೇಶವನ್ನು ಗೌರವಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಈ ಚುನಾವಣೆ ತುಂಬಾ ಕಷ್ಟಕರವಾಗಿತ್ತು. ಅತ್ಯಂತ ಕಡಿಮೆ ಅಂತರದಲ್ಲಿ ಸೀಟುಗಳು ಕೈತಪ್ಪಿವೆ ಎಂದು ಹೇಳಿದ್ದಾರೆ. ಇದೇ ವೇಳೆ ಹಿಮಾಚಲ ಪ್ರದೇಶದ ಅಭಿವೃದ್ಧಿಗೆ ಪ್ರಧಾನಿ ಮೋದಿ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದಾರೆ. 
     
  • 15:07 PM

    ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಿ ಅಧಿಕಾರಕ್ಕೆ ಮರಳುವ ಹಾದಿಯಲ್ಲಿ ಕಾಂಗ್ರೆಸ್ ಮುನ್ನಡೆಯುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ಪಕ್ಷದ ಸೋಲನ್ನು ಒಪ್ಪಿಕೊಂಡರು, ಜನರು ನೀಡಿದ ತೀರ್ಪನ್ನು ಗೌರವಿಸುವುದಾಗಿ ಹೇಳಿದರು. ರಾಜೀನಾಮೆ ಸಲ್ಲಿಸಲು ಶೀಘ್ರವೇ ರಾಜ್ಯಪಾಲರ ಕಚೇರಿಗೆ ತೆರಳುವುದಾಗಿ ತಿಳಿಸಿದ್ದಾರೆ.

    ಏತನ್ಮಧ್ಯೆ, ಕಾಂಗ್ರೆಸ್ ತನ್ನ ವಿಜೇತ ಶಾಸಕರನ್ನು ಚಂಡೀಗಢಕ್ಕೆ ಸ್ಥಳಾಂತರಿಸಲು ಪ್ರಾರಂಭಿಸಿದೆ, ಅಲ್ಲಿ ಅವರು ತಮ್ಮ ಮುಂದಿನ ಕ್ರಮವನ್ನು ಚರ್ಚಿಸಲು ಭೇಟಿಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.68 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷವು 40 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅಧಿಕಾರ ಹಿಡಿಯುವತ್ತ ಧಿಟ್ಟ ಹೆಜ್ಜೆಯನ್ನಿರಿಸಿದೆ. ಇದೇ ವೇಳೆ ಬಿಜೆಪಿ 26 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಸ್ವತಂತ್ರ ಅಭ್ಯರ್ಥಿಗಳು 1 ಐದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಅವರು ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಬಹುದು. ಕಾಂಗ್ರೆಸ್ ನಾಯಕರಾದ ಭೂಪಿಂದರ್ ಬಘೇಲ್, ಭೂಪಿಂದರ್ ಹೂಡಾ, ಮತ್ತು ರಾಜೀವ್ ಶುಕ್ಲಾ ಈಗ ಹಿಮಾಚಲ ಪ್ರದೇಶಕ್ಕೆ ತೆರಳುತ್ತಿದ್ದಾರೆ.

  • 14:39 PM

    40 ಸ್ಥಾನಗಳಲ್ಲಿ ಮುನ್ನಡೆ  - ರಾಜೀವ್ ಶುಕ್ಲಾ :
    ನಾವು 40 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದೇವೆ ಎಂದು ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಹೇಳಿದ್ದಾರೆ.‘ಆಪರೇಷನ್ ಕಮಲ’ಕ್ಕೆ ನಾವು ಹೆದರುವುದಿಲ್ಲ ಎಂದು ಕೂಡಾ ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. 

  • 13:52 PM

    ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ತನ್ನನ್ನು ತಾನು ಬಲಿಷ್ಠ ಪಕ್ಷ ಎಂದು ಕೊಂಡಿತ್ತು ಎಂದು ಕಾಂಗ್ರೆಸ್ ಮುಖಂಡ ಎಸ್ ಎಸ್ ಸುಖು ವ್ಯಂಗ್ಯವಾಡಿದ್ದಾರೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಇಲ್ಲಿಗೆ ಹಲವು ಬಾರಿ ಭೇಟಿ ನೀಡಿದ್ದಾರೆ. ಆದರೂ ಈಗ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಇಲ್ಲಿ ಸರ್ಕಾರ ರಚಿಸಲು ಹೊರಟಿದೆ ಎಂದಿದ್ದಾರೆ.

  • 13:14 PM

    ಕಾಂಗ್ರೆಸ್ - ಬಿಜೆಪಿ ಮಧ್ಯೆ ಕಡಿಮೆ ಮಟ್ಟದ ಅಂತರ  :
    ಹಿಮಾಚಲ ಪ್ರದೇಶದ ಟ್ರೆಂಡ್‌ಗಳಲ್ಲಿ ಎರಡೂ ಪಕ್ಷಗಳ ಮತಗಳ ಶೇಕಡಾವಾರು ಪ್ರಮಾಣದಲ್ಲಿ ಸ್ವಲ್ಪ ಮಟ್ಟದ ವ್ಯತ್ಯಾಸವಷ್ಟೇ  ಕಂಡುಬಂದಿದೆ. ಆದರೂ ಫಲಿತಾಂಶದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಶೇ.43.77 ಮತಗಳನ್ನು ಪಡೆದಿದ್ದರೆ, ಬಿಜೆಪಿ ಶೇ.43.06  ರಷ್ಟು ಮತಗಳನ್ನು ಪಡೆದುಕೊಂಡಿವೆ. 
     
  • 11:53 AM

    ಬಹುಮತದತ್ತ  ಕಾಂಗ್ರೆಸ್   :

    ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಹಿನ್ನೆಡೆ ಅನುಭವಿಸುತ್ತಿದೆ. ಟ್ರೆಂಡ್‌ಗಳಲ್ಲಿ ಕಾಂಗ್ರೆಸ್ ಬಹುಮತದ ಗಡಿ ದಾಟಿದೆ. ಕಾಂಗ್ರೆಸ್ 38,  ಬಿಜೆಪಿ 27,  ಮತ್ತು ಇತರೆ ಅಭ್ಯರ್ಥಿಗಳು 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

  • 11:11 AM

    ಸಿಎಂ ಜೈರಾಮ್‌ ನಿವಾಸದಲ್ಲಿ ಸಭೆ :

    ಹಿಮಾಚಲ ಪ್ರದೇಶದ ಟ್ರೆಂಡ್‌ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಕಂಡು ಬರುತ್ತಿದೆ. ಈ ನಡುವೆ ಸಿಎಂ ಜೈರಾಮ್ ಠಾಕೂರ್ ಮನೆಯಲ್ಲಿ ಸಭೆ ಆರಂಭವಾಗಿದೆ. 

  • 11:09 AM

    ಹಿಮಾಚಲ ಪ್ರದೇಶದ ಟ್ರೆಂಡ್‌ಗಳಲ್ಲಿ ಬಿಜೆಪಿ ಬಹುಮತದತ್ತ ಮುನ್ನುಗ್ಗುತ್ತಿದೆ. ಬಿಜೆಪಿ 35 ಮತ್ತು ಕಾಂಗ್ರೆಸ್ 30 ರಲ್ಲಿ ಮುನ್ನಡೆ ಸಾಧಿಸಿದೆ. 12 ಸ್ಥಾನಗಳಲ್ಲಿ ಮತಗಳ ನಡುವಿನ ವ್ಯತ್ಯಾಸ 500ಕ್ಕಿಂತ ಕಡಿಮೆ ಇದೆ ಎನ್ನಲಾಗಿದೆ.  3 ಸ್ವತಂತ್ರ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ.

  • 10:13 AM

    ಹಮೀರ್‌ಪುರದಲ್ಲಿ  ಸ್ವತಂತ್ರ ಅಭ್ಯರ್ಥಿ ಮುನ್ನಡೆ :ಹಿಮಾಚಲದ ಹಮೀರ್‌ಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪುಷ್ಪಿಂದರ್ ವರ್ಮಾ ಅವರಿಗಿಂತ ಸ್ವತಂತ್ರ ಅಭ್ಯರ್ಥಿ ಆಶಿಶ್ ಶರ್ಮಾ 1782 ಮತಗಳ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿ ಬಿಜೆಪಿ ಹಿಂದುಳಿದಿದೆ.

  • 09:49 AM

    ಕ್ಷಣ ಕ್ಷಣಕ್ಕೂ ಕುತೂಹಲ  :
    ಹಿಮಾಚಲ ಪ್ರದೇಶದಲ್ಲಿ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದೆ ಫಲಿತಾಂಶ. ಸದ್ಯದ  ಟ್ರೆಂಡ್ ಪ್ರಕಾರ ಕಾಂಗ್ರೆಸ್ 33 ಮತ್ತು ಬಿಜೆಪಿ 32 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.  3 ಸ್ಥಾನಗಳಲ್ಲಿ ಇತರರು ಮುಂದಿದ್ದಾರೆ.

  • 09:34 AM

    ಹಿಮಾಚಲ ಪ್ರದೇಶದ ಟ್ರೆಂಡ್‌ಗಳಲ್ಲಿ ಜಿದ್ದಾಜಿದ್ದಿನ ಹಣಾಹಣಿ  ನಡೆಯುತ್ತಿದೆ. ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ 35 ಮತ್ತು ಬಿಜೆಪಿ 32 ಸ್ಥಾನಗಳಲ್ಲಿ ಮುಂದಿದೆ. ಮತ್ತೊಬ್ಬ ಅಭ್ಯರ್ಥಿ 1 ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದಾರೆ.

  • 09:07 AM

     ಮುನ್ನಡೆ ಸಾಧಿಸಿದ ಬಿಜೆಪಿ :

     ಬಿಜೆಪಿ ಕಾಂಗ್ರೆಸ್ ಮಧ್ಯೆ ಹಣಾಹಣಿ ಜೋರಾಗಿದೆ. ಇದೀಗ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ.  ಟ್ರೆಂಡ್‌ನಲ್ಲಿ ಬಿಜೆಪಿ 34 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 33 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 

  • 09:03 AM

    ಹಿಮಾಚಲದಲ್ಲಿ ಮುನ್ನಡೆಯಲ್ಲಿರುವ  ಕಾಂಗ್ರೆಸ್ :

    ಹಿಮಾಚಲ ಪ್ರದೇಶದ ಆರಂಭಿಕ ಟ್ರೆಂಡ್‌ಗಳಲ್ಲಿ ಕಾಂಗ್ರೆಸ್ ಮುಂದಿದೆ. ಕಾಂಗ್ರೆಸ್ 34 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 33 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇತರ ಅಭ್ಯರ್ಥಿಗಳು 1 ಸ್ಥಾನದಲ್ಲಿ ಮುನ್ನಡೆಯಲ್ಲಿದ್ದಾರೆ.

  • 08:56 AM

    ಹಿಮಾಚಲ ಪ್ರದೇಶದಲ್ಲಿ ಮತ ಎಣಿಕೆ ನಡೆಯುತ್ತಿದೆ.  ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಟ್ರೆಂಡ್‌ನಲ್ಲಿ ಬಿಜೆಪಿ 31 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 32 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

Trending News