ಮಮತಾ ಆಕ್ಷೇಪಣಾ ಚಿತ್ರ ವಿವಾದ: ಬಿಜೆಪಿ ಪ್ರಿಯಾಂಕಾ ಶರ್ಮಾ ಗೆ 'ಸುಪ್ರೀಂ' ಕರಾರು ರಹಿತ ಜಾಮೀನು

ಸಾಮಾಜಿಕ ಮಾಧ್ಯಮಗಳಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಅವರ ಆಕ್ಷೇಪಣಾ ಚಿತ್ರವನ್ನು ಶೇರ್ ಮಾಡಿರುವ ಹಿನ್ನಲೆಯಲ್ಲಿ ಬಂಧಿಸಲಾಗಿದ್ದ ಬಿಜೆಪಿ ನಾಯಕಿ ಪ್ರಿಯಾಂಕಾ ಶರ್ಮಾ ಅವರಿಗೆ ಸುಪ್ರೀಂಕೋರ್ಟ್ ಈಗ ಕರಾರು ರಹಿತ ಜಾಮೀನು ನೀಡಿದೆ.

Last Updated : May 14, 2019, 01:17 PM IST
ಮಮತಾ ಆಕ್ಷೇಪಣಾ ಚಿತ್ರ ವಿವಾದ: ಬಿಜೆಪಿ ಪ್ರಿಯಾಂಕಾ ಶರ್ಮಾ ಗೆ 'ಸುಪ್ರೀಂ' ಕರಾರು ರಹಿತ ಜಾಮೀನು    title=

ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಅವರ ಆಕ್ಷೇಪಣಾ ಚಿತ್ರವನ್ನು ಶೇರ್ ಮಾಡಿರುವ ಹಿನ್ನಲೆಯಲ್ಲಿ ಬಂಧಿಸಲಾಗಿದ್ದ ಬಿಜೆಪಿ ನಾಯಕಿ ಪ್ರಿಯಾಂಕಾ ಶರ್ಮಾ ಅವರಿಗೆ ಸುಪ್ರೀಂಕೋರ್ಟ್ ಈಗ ಕರಾರು ರಹಿತ ಜಾಮೀನು ನೀಡಿದೆ.

ಪ್ರಿಯಾಂಕಾ ಶರ್ಮಾ ತಮ್ಮನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಸುಪ್ರಿಂಕೋರ್ಟ್ ಗೆ ಮೊರೆಹೋಗಿದ್ದರು.ಅವರ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಹಾಗೂ ಸಂಜೀವ್ ಖನ್ನಾ ಅವರನ್ನೊಳಗೊಂಡ ರಜಾಪೀಠ " ಫೇಸ್ ಬುಕ್ ನಲ್ಲಿ ಆಕ್ಷೇಪಣಾ ಚಿತ್ರವನ್ನು ಪೋಸ್ಟ್ ಮಾಡಿದ ವಿಚಾರವಾಗಿ ಈಗ ಅವರು ಲಿಖಿತವಾಗಿ ಕ್ಷಮೆಯನ್ನು ಕೋರಬೇಕು. ತಕ್ಷಣವೇ ಅವರನ್ನು ಬಿಡುಗಡೆಗೊಳಿಸಬೇಕು " ಎಂದು ಆದೇಶಿಸಿದೆ. ಇದೇ ವೇಳೆ ಪ್ರಿಯಾಂಕಾ ಶರ್ಮಾರನ್ನು ವಶಕ್ಕೆ ತೆಗೆದುಕೊಂಡಿದ್ದ ಪಶ್ಚಿಮ ಬಂಗಾಳದ ಪೋಲಿಸ್ ರಿಗೆ ಕೂಡ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ.

ತುರ್ತು ವಿಚಾರಣೆ ನಡೆಸಬೇಕೆಂದು ಸುಪ್ರೀಂಕೋರ್ಟ್ ಗೆ ಪ್ರಿಯಾಂಕಾ ಶರ್ಮಾ ಅರ್ಜಿ ಸಲ್ಲಿಸಿದ್ದರು.ಆದರೆ ಸುಪ್ರೀಂಕೋರ್ಟ್ ಮಂಗಳವಾರದಂದು ಅರ್ಜಿ ವಿಚಾರಣೆಗೆ ಒಪ್ಪಿಕೊಂಡಿತ್ತು. ಅರ್ಜಿದಾರರ ಪರವಾಗಿ ನೀರಜ್  ಕಿಶನ್ ಕೌಲ್ ಹಾಜರಾಗಿದ್ದರು.ಆದರೆ ನಿನ್ನೆ ಪಶ್ಚಿಮ ಬಂಗಾಳದಲ್ಲಿ ವಕೀಲರ ಪ್ರತಿಭಟನೆ ನಡೆಯುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕ್ಷಣ ಆಕೆಗೆ ಪರಿಹಾರ ಸಿಗದ ಕಾರಣ ಅವರು ಅನಿವಾರ್ಯವಾಗಿ ಸುಪ್ರೀಂಕೋರ್ಟ್ ಗೆ ಮೊರೆ ಹೋಗಬೇಕಾಯಿತು.

ಹೌರಾದ ಬಿಜೆಪಿ ಯುವ ಮೋರ್ಚಾದ ಸಂಚಾಲಕಿಯಾಗಿರುವ ಪ್ರಿಯಾಂಕಾ ಶರ್ಮಾ ಇತ್ತೀಚಿಗೆ ಪ್ರಿಯಾಂಕಾ ಚೋಪ್ರಾ ಅವರು ನ್ಯೂಯಾರ್ಕ್ ಮೆಟ್ರೋಪಾಲಿಟನ್ ಭಾಗವಹಿಸಿದ್ದ ಚಿತ್ರವನ್ನು ತಿದ್ದಿ ಅದರಲ್ಲಿ ಮಮತಾ ಬ್ಯಾನರ್ಜೀಯವರ ಫೋಟೋವೊಂದನ್ನು ಸೇರಿಸಿ ಸಾಮಾಜಿಕ ಮಾಧ್ಯಮವೊಂದರಲ್ಲಿ ಪೋಸ್ಟ್ ಮಾಡಿದ್ದರು. 

Trending News