Exclusive Interview: ಯುದ್ಧ ಸಮಸ್ಯೆಗೆ ಪರಿಹಾರವಲ್ಲ, ಆದರೆ ದುರ್ಬಲ ಜನತೆಗೆ ಶಾಂತಿ ಸಿಗುವುದಿಲ್ಲ: ಪ್ರಧಾನಿ ಮೋದಿ

ಯಾವುದೇ ಸಮಸ್ಯೆಗೆ ಯುದ್ಧ ಪರಿಹಾರವಲ್ಲ. ಆದರೆ ದುರ್ಬಲ ಜನರಿಗೆ ಶಾಂತಿ ಸಿಗುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Last Updated : May 9, 2019, 10:40 PM IST
Exclusive Interview: ಯುದ್ಧ ಸಮಸ್ಯೆಗೆ ಪರಿಹಾರವಲ್ಲ, ಆದರೆ ದುರ್ಬಲ ಜನತೆಗೆ ಶಾಂತಿ ಸಿಗುವುದಿಲ್ಲ: ಪ್ರಧಾನಿ ಮೋದಿ title=

ನವದೆಹಲಿ: ಲೋಕಸಭಾ ಚುನಾವಣೆ 2019ರ ಚುನಾವಣೆಯ ಇನ್ನೆರಡು ಹಂತಗಳ ಮತದಾನ ಬಾಕಿ ಇರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಝೀ ನ್ಯೂಸ್ ವಾಹಿನಿಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಇದರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯಿಂದ ಹಿಡಿದು ವಿಪಕ್ಷಗಳನ್ನು ಉಲ್ಲೇಖಿಸಿ ತಾವೇ ಆಡಿದ್ದ ಮಾತುಗಳಿಗೆ ಮೋದಿ ಕಾರಣಗಳನ್ನು ನೀಡಿದ್ದಾರೆ. 

ಝೀ ನ್ಯೂಸ್ ಮುಖ್ಯ ಸಂಪಾದಕ ಸುಧೀರ್ ಚೌಧರಿ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆ ನಡೆಸಿದ ಶುದ್ಧ ರಾಜಕೀಯ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ,  ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 272ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಕೇಂದ್ರದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಬಹುಮತ ಪಡೆಯಲು ವಿಫಲವಾದರೆ 'ಪ್ಲಾನ್ ಬಿ' ಸಿದ್ಧವಾಗಿದೆಯೇ ಎಂಬ ಸುಧೀರ್ ಚೌಧರಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಧಾನಿ, "ನಮ್ಮ ಬಳಿ ಕೇವಲ ಒಂದೇ ಪ್ಲಾನ್ ಇದೆ, ಮತಎಣಿಕೆ ಬಳಿಕ ಎನ್‌ಡಿಎ ಮೈತ್ರಿಕೂಟ ಸಭೆ ನಡೆಸಲಿದೆ ಮತ್ತು ಪ್ರಮಾಣವಚನ ಸ್ವೀಕಾರಕ್ಕೆ ರಾಷ್ಟ್ರಪತಿ ನಮ್ಮನ್ನು ಆಹ್ವಾನಿಸಲಿದ್ದಾರೆ. ಈ ಸನ್ನಿವೇಶವನ್ನು, ಸಂದರ್ಭವನ್ನು ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಹೇಗೆ ವರದಿ ಮಾಡುವುದು ಎಂಬುದರ ಬಗ್ಗೆ ವಿಶೇಷ ಕಾರ್ಯತಂತ್ರ ರೂಪಿಸುವಂತೆ ಪ್ರಧಾನಿ ಮೋದಿ ಅವರು ಸುಧೀರ್ ಚೌಧರಿ ಅವರಿಗೆ ಹೇಳಿದರು.

ವಿರೋಧ ಪಕ್ಷಗಳು ಈ ಬಾರಿ ಚುನಾವಣೆಯಲ್ಲಿ ಯಾವ ರೀತಿಯಲ್ಲಿ ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ ಎಂಬುದರ ಬಗ್ಗೆಯೂ ಪ್ರಧಾನಿ ಮಾತನಾಡಿದ್ದು, ವಿರೋಧ ಪಕ್ಷ ಒಂದೇ ಇದ್ದರೆ ಬಹಳ ಸಂತೋಷವಾಗುತ್ತೆ ಎಂದಿದ್ದಾರೆ. ಅಲ್ಲದೆ, 2014ರ ಲೋಕಸಭಾ ಚುನಾವಣೆಗಿಂತ ಹೆಚ್ಚಿನ ಸ್ಥಾನಗಳನ್ನು ಈ ಬಾರಿ ಬಿಜೆಪಿ ಗೆಲ್ಲಲಿದ್ದು, ಮತೊಮ್ಮೆ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಮೇ 23ರ ಲೋಕಸಭಾ ಫಲಿತಾಂಶದ ಬಳಿಕ ಮೋದಿ ಪ್ಯಾಕಿಂಗ್ ಮಾಡಲು ಆರಂಭಿಸುತ್ತಾರೆ ಎಂದು ವಿಪಕ್ಷಗಳು ಹೇಳುತ್ತಿವೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆಯೇನು?
ಎದುರಾಳಿಗಳು ಏನು ಹೇಳುತ್ತಾರೆ, ವಿಪಕ್ಷಗಳು ಏನು ಆಲೋಚಿಸುತ್ತವೆ ಎಂಬುದನ್ನು ನಾನು ಗಮನಿಸುವುದಿಲ್ಲ. ದೇಶದ ಜನತೆ 2019ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಎನ್ಡಿಎ ಮೈತ್ರಿಕೂಟಕ್ಕೆ ಬಹುಮತ ನೀಡಲು ನಿರ್ಧರಿಸಿದ್ದಾರೆ ಎಂಬುದನ್ನು ಮಾತ್ರ ನಾನು ಹೇಳಬಯಸುತ್ತೇನೆ. ಈ ವಿಶ್ವಾಸದೊಂದಿಗೆ ಮುನ್ನಡೆಯುತ್ತೇನೆ. ನಾನು ಎಲ್ಲದಕ್ಕೂ ಸಿದ್ಧವಾಗಿದ್ದೇನೆ. ವಿರೋಧಿಗಳು ಕನಸು ಕಾಣುತ್ತಿದ್ದರೆ ಕಾಣಲಿ ಬಿಡಿ ಎಂದು ಮೋದಿ ಹೇಳಿದರು.

ಎಲ್ಲೆಡೆ ಮೋದಿ ಅಲೆಯಿದೆ ಎನ್ನುತ್ತಾರೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು?
2014ರ ಚುನಾವಣೆ ಸರ್ಕಾರದ ವಿರುದ್ಧವಾಗಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ನಾನು ಹೊರಾಡುತ್ತಿಲ್ಲ, ರಾಜಕೀಯ ಪಕ್ಷಗಳು ಹೋರಾಡುತ್ತಿಲ್ಲ. ಆದರೆ ಜನತೆ ಹೋರಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಬಹುಮತ ಗಳಿಸಿದ್ದರ ಬಗ್ಗೆ ಮೇ 23ರ ಬಳಿಕ ಮಾತನಾಡುತ್ತೇನೆ ಎಂದು ಮೋದಿ ಹೇಳಿದ್ದಾರೆ. 

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆ ಇರುವ ಸಮಸ್ಯೆಯೇನು? 
"ಮಮತಾ ಬ್ಯಾನರ್ಜಿ ಜೊತೆ ಸಮಸ್ಯೆ ವಿಚಾರದಲ್ಲಿ ನನ್ನನ್ನು ಬಿಡಿ, ಮಮತಾ ಬ್ಯಾನರ್ಜಿ ಅವರೊಂದಿಗೆ ಎಷ್ಟು ಜನ ಕೆಲಸಮಾಡಿದ್ದಾರೆ ಎಂಬುದನ್ನು ನೋಡಿ. ಮಮತಾ ಬ್ಯಾನರ್ಜಿ ಪಾಕಿಸ್ತಾನದ ಪ್ರಧಾನಿಯನ್ನು ಪ್ರಧಾನಿ ಎನ್ನುತ್ತಾರೆ. ಆದರೆ ಭಾರತದ ಪ್ರಧಾನಿಯನ್ನು ಪ್ರಧಾನಿ ಎಂದು ಒಪ್ಪುವುದಿಲ್ಲ ಎನ್ನುತ್ತಾರೆ. ನನ್ನನ್ನು ಒಬ್ಬ ನಾಯಕನಾಗಿ ಒಪ್ಪುವುದಿಲ್ಲ ಎಂದರೆ ಅದು ಸರಿ. ಆದರೆ ದೇಶದ ಪ್ರಧಾನಿಯನ್ನು ಒಪ್ಪುವುದಿಲ್ಲ ಎಂದು ಹೇಳುವುದು ಸಂವಿಧಾನಕ್ಕೇ ಅವಮಾನ ಮಾಡಿದಂತೆ" ಎಂದು ಮೋದಿ ಹೇಳಿದರು.

"ಪಶ್ಚಿಮ ಬಂಗಾಳದಲ್ಲಿ ನಾನು ಚುನಾವಣಾ ರ್ಯಾಲಿ ನಡೆಸಲು ಅನುಮತಿ ನೀಡುವುದಿಲ್ಲ. ನಾವು ಚುನಾವಣಾ ಆಯೋಗದ ಮೊರೆ ಹೋಗಿ ರಾತ್ರಿ 9 ಗಂಟೆಯಲ್ಲಿ ಅನುಮತಿ ಪಡೆಯಬೇಕಾದ ಸಂದರ್ಭ ಎದುರಾಯಿತು. ನಮ್ಮ ಸಮಾವೇಶಗಳಿಗೆ ಶಾಮಿಯಾನ ಕುರ್ಚಿಗಳನ್ನು ನೀಡದಂತೆ ಅಲ್ಲಿನ ಜನರಿಗೆ ತಾಕಿತು ಮಾಡುತ್ತಾರೆ. ಹೀಗಾಗಿ ನಮ್ಮ ಕಾರ್ಯಕರ್ತರು 300 ಕಿ.ಮೀ. ದೂರದಿಂದ ಉಪಕರಣಗಳನ್ನು ತರುವ ಸಮಸ್ಯೆ ಎದುರಾಗುತ್ತದೆ. ಸಣ್ಣ ಸಣ್ಣ ವಿಚಾರಕ್ಕೂ ತಡೆ ಒಡ್ಡುತ್ತಾರೆ. ಚಂಡಮಾರುತದ ಬಗ್ಗೆ ಸಭೆ ನಡೆಸಲು ನಿರಾಕರಿಸಿದ್ದಾರೆ. ಇದರಿಂದ ಅಲ್ಲಿನ ಜನರಿಗೆ ಸಮಸ್ಯೆಯಾಗುತ್ತದೆ. ಇಲ್ಲಿ ಪ್ರಶ್ನೆ ಪ್ರಧಾನಿ ಅಥವಾ ಮಮತಾ ಬ್ಯಾನರ್ಜಿ ಅಲ್ಲ. ಬಂಗಾಳದ ಅಭಿವೃದ್ಧಿಗೆ ದೊಡ್ಡ ಅಪಾಯವಿದೆ. ಅವರ ಚಿಂತನೆಯು ಇಡೀ ದೇಶಕ್ಕೆ ಮಾರಕವಾಗಿದೆ" ಎಂದು ಮೋದಿ ಹೇಳಿದರು.

ರಾಜೀವ್ ಗಾಂಧಿ ಅವರ ಕಾರ್ಯಕ್ಕೆ ಕಾಂಗ್ರೆಸ್ ಉತ್ತರಿಸಬೇಕು: ಪ್ರಧಾನಿ ಮೋದಿ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ನನ್ನ ಇಮೇಜಿಗೆ ಧಕ್ಕೆ ಉಂಟುಮಾಡಲು ಪ್ರಯತ್ನಿಸಿದರು. ರಾಜೀವ್ ಗಾಂಧಿಯವರ ಮಿಸ್ಟರ್ ಕ್ಲೀನ್ ಇಮೇಜ್ ಅನ್ನು ಅವನ ಜನರಿಂದ ಬಿಂಬಿಸಲಾಗಿದೆ., ನಾನು 45 ವರ್ಷಗಳ ಸತತ ಪರಿಶ್ರಮದಿಂದ ಬಂದಿದ್ದೇನೆ. ನನ್ನೊಂದಿಗೆ ಅಲ್ಲ. ರಾಜೀವ್ ಗಾಂಧಿ ನಿಧನರಾದರು. ಆದರೆ ಅವರ ಕೆಲಸವನ್ನು ಕುರಿತು ಇಂದು ಯಾರೂ ಮಾತನಾಡುವುದಿಲ್ಲ ಎಂದು ಮೋದಿ ಹೇಳಿದರು.

ವಿರೋಧ ಪಕ್ಷದವರು ನಿಮ್ಮನ್ನು ಕಳ್ಳ, ಮೋಸಗಾರ ಎಂದೆಲ್ಲಾ ನಿಂದಿಸಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆಯೇನು?
ನನಗೂ ನೋವಾಗುತ್ತದೆ. ಆದರೆ ನಾನು ಆರಂಭದಿಂದಲೂ ಅವಮಾನಗಳನ್ನು ಎದುರಿಸುತ್ತಲೇ ಬಂದಿದ್ದೇನೆ. ಇವೆಲ್ಲವನ್ನೂ ಜೀರ್ಣಿಸಿಕೊಂಡೇ ಬಂದಿದ್ದೇನೆ. ನಾವು ಚಹಾ ಮಾರುತ್ತಿದ್ದಾಗ ಜನ ನಮ್ಮನ್ನು ನಿಂದಿಸುತ್ತಿದ್ದರು. ಹಾಗಂದ ಮಾತ್ರಕ್ಕೆ ನಾವು ಕೆಟ್ಟವರು ಎಂದಲ್ಲ. ಬಡತನದಿಂದಾಗಿ ಎಲ್ಲೆಡೆ ಅವಮಾನ ಅನುಭವಿಸಬೇಕಾಯಿತು. ದೊಡ್ಡ ವ್ಯಕ್ತಿಗಳು ನಮ್ಮನ್ನು ನಿಂದಿಸುತ್ತಾರೆ, ದುರುಪಯೋಗ ಪಡಿಸಿಕೊಳ್ಳುತ್ತಾರೆ. ಈ ರೀತಿಯ ಆಲೋಚನೆ ಉಳ್ಳವರು ಎಲ್ಲೆಡೆ ಇದ್ದಾರೆ ಎಂದಿದ್ದಾರೆ. 

ಯುದ್ಧ ಸಮಸ್ಯೆಗೆ ಪರಿಹಾರವಲ್ಲ
ಯಾವುದೇ ಸಮಸ್ಯೆಗೆ ಯುದ್ಧ ಪರಿಹಾರವಲ್ಲ. ಆದರೆ ದುರ್ಬಲ ಜನರಿಗೆ ಶಾಂತಿ ಸಿಗುವುದಿಲ್ಲ. ಬಲಿಷ್ಠ ಜನರು ಮಾತ್ರ ಶಾಂತಿ ಪಡೆಯುತ್ತಾರೆ. ಆದರಿಂದ ಶಾಂತಿಗಾಗಿ ಭಾರತ ಪ್ರಬಲವಾಗಬೇಕಿದೆ. ಈ ದೇಶದ ಗಾಂಧಿ ಅವರದ್ದು. ನಾವು ಗಾಂಧಿಗೆ ಅನ್ಯಾಯ ಮಾಡಿದ್ದೇವೆ. ಅವರು ಜಗತ್ತಿನಾದ್ಯಂತ ಅನುಸರಿಸಲು ಹೇಳಿದ್ದ ಮಾರ್ಗವನ್ನು ಇದುವರೆಗೂ ಅನುಸರಿಸಲು ಸಾಧ್ಯವಾಗಿಲ್ಲ ಎಂದು ಮೋದಿ ಹೇಳಿದರು.  

Trending News