ಇಂದು ಸೋಮಣ್ಣ ನಾಮಿನೇಷನ್: ಟೆಂಪಲ್ ರನ್, ಬೃಹತ್ ಸಮಾವೇಶ

Karnataka Assembly Election: ಕಡಿಮೆ ಅವಧಿಯಲ್ಲಿ ಗೆಲ್ಲುವ ಕಸರತ್ತು, ರಣನೀತಿಯನ್ನು ರೂಪಿಸುತ್ತಿರುವ ಸಚಿವ ವಿ. ಸೋಮಣ್ಣ ನಾಮಪತ್ರ ಸಲ್ಲಿಸಿದ ಬಳಿಕವೂ ಹಲವು ಮುಖಂಡರ ಮನೆಗೆ ಭೇಟಿ ನೀಡಿ ಸಮಾಲೋಚನೆ ನಡೆಸಲಿದ್ದಾರೆ. 

Written by - Yashaswini V | Last Updated : Apr 19, 2023, 11:19 AM IST
  • ನಾನು ಇಂದು ಚಾಮರಾಜನಗರದಲ್ಲಿ ನಾಮಪತ್ರ ಸಲ್ಲಿಸುತ್ತಿದ್ದೇನೆ.
  • ನಾಮಪತ್ರ ಸಲ್ಲಿಕೆ ವೇಳೆ ಪ್ರತಾಪಸಿಂಹ, ಛಲವಾದಿ ನಾರಾಯಣ ಸ್ವಾಮಿ ಸೇರಿದಂತೆ ಹಲವರು ಹಾಜರಿರುತ್ತಾರೆ
  • ಶ್ರೀನಿವಾಸಪ್ರಸಾದ್ ಅವರು ಇಂದು ಬರುವುದಿಲ್ಲ- ಸಚಿವ ವಿ. ಸೋಮಣ್ಣ
ಇಂದು ಸೋಮಣ್ಣ ನಾಮಿನೇಷನ್: ಟೆಂಪಲ್ ರನ್, ಬೃಹತ್ ಸಮಾವೇಶ title=

Karnataka Assembly Election 2023:  ವರುಣಾ ಬಳಿಕ ಚಾಮರಾಜನಗರದಲ್ಲಿ ಇಂದು ಸಚಿವ ಸೋಮಣ್ಣ ನಾಮಪತ್ರ ಸಲ್ಲಿಸುತ್ತಿದ್ದಾರೆ‌. ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನ ಸಮೀಪ ಬೃಹತ್ ಬಹಿರಂಗ ಸಭೆ ನಡೆಸಲಿರುವ ಸೋಮಣ್ಣ ಬಳಿಕ  1.30 ರ ಹೊತ್ತಿಗೆ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.

ಕಡಿಮೆ ಅವಧಿಯಲ್ಲಿ ಗೆಲ್ಲುವ ಕಸರತ್ತು, ರಣನೀತಿಯನ್ನು ರೂಪಿಸುತ್ತಿರುವ ಸಚಿವ ವಿ. ಸೋಮಣ್ಣ ನಾಮಪತ್ರ ಸಲ್ಲಿಸಿದ ಬಳಿಕವೂ ಹಲವು ಮುಖಂಡರ ಮನೆಗೆ ಭೇಟಿ ನೀಡಿ ಸಮಾಲೋಚನೆ ನಡೆಸಲಿದ್ದಾರೆ. 

ಟೆಂಪಲ್ ರನ್ : 
ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಇಂದು ಸಚಿವ ವಿ‌.ಸೋಮಣ್ಣ ನಾಮಪತ್ರ ಸಲ್ಲಿಸಲಿದ್ದು ಅದಕ್ಕೂ ಮುನ್ನ ಟೆಂಪಲ್ ರನ್ ನಡೆಸುತ್ತಿದ್ದಾರೆ. 

ಇದನ್ನೂ ಓದಿ- ಬಿಜೆಪಿ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಪಟ್ಟ ಯಾರಿಗೆ..? : ಬಿವೈವಿ ಹೇಳಿದ್ದಿಷ್ಟು

ಇಂದು ಬೆಳಿಗ್ಗೆಯಿಂದ ಟೆಂಪಲ್  ರನ್ ನಡೆಸುತ್ತಿರುವ ವಿ. ಸೋಮಣ್ಣ ಬೆಳಿಗ್ಗೆ ಚಾಮರಾಜನಗರದ ಕೊಳದ ಗಣಪತಿ ದೇವಾಲಯ, ಚಾಮರಾಜೇಶ್ವರ ದೇವಾಲಯ, ಮಾರಮ್ಮ ದೇಗುಲ ಹಾಗೂ ಆದಿಶಕ್ತಿ ದೇವಾಲಯಗಳಿಗೆ ಬೆಂಬಲಿಗರ ಜೊತೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕಾಲವೇ ಉತ್ತರ ನೀಡುತ್ತೆ: 
ಈ ಸಂದರ್ಭದಲ್ಲಿ ಸೋಮಣ್ಣ ಅವರನ್ನು ಬಿಜೆಪಿ ಹರಕೆಯ ಕುರಿ ಮಾಡಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೂ ಪ್ರತಿಕ್ರಿಯಿಸಿದ ವಿ. ಸೋಮಣ್ಣ,  ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದರು.

ಇದೇ ವೇಳೆ ನಾನು ಇಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ನಾಮಪತ್ರ ಸಲ್ಲಿಕೆ ವೇಳೆ ಪ್ರತಾಪಸಿಂಹ, ಛಲವಾದಿ ನಾರಾಯಣ ಸ್ವಾಮಿ ಸೇರಿದಂತೆ ಹಲವರು ಹಾಜರಿರುತ್ತಾರೆ ಎಂದು ತಿಳಿಸಿದರು. ಶ್ರೀನಿವಾಸಪ್ರಸಾದ್ ಅವರು ಇಂದು ಬರುವುದಿಲ್ಲ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ- ವರುಣದಲ್ಲಿ ಮಾತ್ರ ಸ್ಪರ್ಧಿಸಿ ತಾಕತ್ ತೋರಲಿ- ಈಗ ನನ್ನ ತಲೆ ಮೇಲೆ ಕಾಲಿಟ್ಟಿದ್ದಾರೆ: ಸೋಮಣ್ಣ ವಿರುದ್ಧ ರುದ್ರೇಶ್ ಕೆಂಡ

ಇದೇ ಸಂದರ್ಭದಲ್ಲಿ ತಮ್ಮ ಆರೋಗ್ಯದ ಬಗ್ಗೆಯೂ ಮಾಹಿತಿ ನೀಡಿದ ವಿ. ಸೋಮಣ್ಣ, ಎರಡು ದಿನಗಳಿಂದ ಓಡಾಡಿ ಕಾಲು ನೋವಾಗಿದೆ. ಫಿಸಿಯೋಥೆರಪಿಗೆ ಹೋಗುತ್ತಿದ್ದೇನೆ. ಎರಡು ದಿನಗಳ ನಂತರ ಬಂದು  ಚಾಮರಾಜನಗರ ಮತ್ತು ವರುಣಾದಲ್ಲಿಯೇ ಇರುತ್ತೇನೆ ಎಂದು ತಿಳಿಸಿದರು.

ಯಡಿಯೂರಪ್ಪ ಅವರು ಸಹಾ 25ರೊಳಗೆ ಪ್ರಚಾರಕ್ಕೆ ಬರುತ್ತಾರೆ. ರಾಷ್ಟ್ರದ ನಾಯಕರು ಎರಡು ಕ್ಷೇತ್ರಗಳಿಗೆ ಆಗಮಿಸುವ ಸಂಭವವಿದೆ. ಚುನಾವಣೆಯನ್ನು ನಾನು ಸವಾಲಾಗಿ ಸ್ವೀಕರಿಸಿದ್ದೇನೆ ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News