Coronavirus: ಕೊರೋನಾ ಅಬ್ಬರ; ರಾಜ್ಯದಲ್ಲಿ ಮತ್ತೆ 2 ವಾರ 'ಶಾಲಾ-ಕಾಲೇಜುಗಳು' ಬಂದ್..!?

ಕೊರೋನಾ ಸೋಂಕಿನ ನಿಯಂತ್ರಣದ ಸಲುವಾಗಿ ರಾಜ್ಯದಲ್ಲಿ ಮತ್ತೆ ಎರಡು ವಾರ ಶಾಲಾ-ಕಾಲೇಜು ಬಂದ್ ಆಗಲಿದೆ ಎನ್ನಲಾಗುತ್ತಿದೆ.

Last Updated : Mar 20, 2021, 03:31 PM IST
  • ಈಗ ಕೊರೋನಾ ಎರಡನೇ ಅಲೆಯ ಮುನ್ಸೂಚನೆ ರಾಜ್ಯದಲ್ಲಿ ಎದ್ದಿದೆ.
  • ಕೊರೋನಾ ಸೋಂಕಿನ ನಿಯಂತ್ರಣದ ಸಲುವಾಗಿ ರಾಜ್ಯದಲ್ಲಿ ಮತ್ತೆ ಎರಡು ವಾರ ಶಾಲಾ-ಕಾಲೇಜು ಬಂದ್ ಆಗಲಿದೆ ಎನ್ನಲಾಗುತ್ತಿದೆ.
  • ಎರಡು ವಾರ ಶಾಲಾ-ಕಾಲೇಜುಗಳನ್ನು ಬಂದ್ ಮಾಡಬೇಕು.
Coronavirus: ಕೊರೋನಾ ಅಬ್ಬರ; ರಾಜ್ಯದಲ್ಲಿ ಮತ್ತೆ 2 ವಾರ 'ಶಾಲಾ-ಕಾಲೇಜುಗಳು' ಬಂದ್..!? title=

ಬೆಂಗಳೂರು: ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಇಳಿಕೆಯನ್ನು ಕಂಡಿತು ಎನ್ನುವಾಗಲೇ, ಈಗ ಕೊರೋನಾ ಎರಡನೇ ಅಲೆಯ ಮುನ್ಸೂಚನೆ ರಾಜ್ಯದಲ್ಲಿ ಎದ್ದಿದೆ. ಇಂತಹ ಸಂದರ್ಭದಲ್ಲಿ ಕೊರೋನಾ ಸೋಂಕಿನ ನಿಯಂತ್ರಣದ ಸಲುವಾಗಿ ರಾಜ್ಯದಲ್ಲಿ ಮತ್ತೆ ಎರಡು ವಾರ ಶಾಲಾ-ಕಾಲೇಜು ಬಂದ್ ಆಗಲಿದೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ಕೊರೋನಾ ಸೋಂಕಿ(Coronavirus)ನ ಸಂಖ್ಯೆ ಹೆಚ್ಚು ಹೆಚ್ಚುಗೊಳ್ಳುತ್ತಿರುವ ಬೆನ್ನಲ್ಲೇ, ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿ, ಮಹತ್ವದ ನಿರ್ಧಾರ ಕೈಗೊಳ್ಳೋದಕ್ಕೆ, ವೈದ್ಯಕೀಯ ಹಾಗೂ ಆರೋಗ್ಯ ಸಚಿವರಿಗೆ ತನ್ನ ಶಿಫಾರಸ್ಸುಗಳ ವರದಿಯನ್ನು ಸಲ್ಲಿಸಿದೆ. ಈ ವರದಿಯಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಎರಡು ವಾರಗಳ ಕಾಲ ಶಾಲಾ-ಕಾಲೇಜು ಬಂದ್ ಮಾಡುವುದು, ಕುರಿತಂತೆ, ಒಂಭತ್ತು ಟಫ್ ರೂಲ್ಸ್ ಜಾರಿಗೆ ಸೂಚಿಸಿದೆ.

Belagavi Lok Sabha: ಬೆಳಗಾವಿ ಲೋಕಸಭೆ ಬೈ ಎಲೆಕ್ಷನ್: ಕಾಂಗ್ರೆಸ್ ಅಭ್ಯರ್ಥಿ ಹೆಸರು ಫೈನಲ್!

ಎರಡು ವಾರ ಶಾಲಾ-ಕಾಲೇಜು(School College)ಗಳನ್ನು ಬಂದ್ ಮಾಡಬೇಕು. ಯಾವುದೇ ಪ್ರತಿಭಟನೆ, ರ್ಯಾಲಿ , ಸಮಾವೇಶಕ್ಕೆ ಅವಕಾಶ ಕೊಡಬಾರದು. ಜಿಮ್ ಗಳನ್ನು ತಕ್ಷಣದಿಂದಲೇ ಬಂದ್ ಮಾಡಬೇಕು. ಬಿಬಿಎಂಪಿ ವ್ಯಾಪ್ತಿಯ ಜಿಮ್ ಗಳನ್ನು ಮುಚ್ಚಬೇಕು ಎಂದು ಶಿಫಾರಸ್ಸು ಮಾಡಿದೆ.

V Somanna: ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ದಿ..!

ಇನ್ನೂ ಮುಂದುವರೆದು, ಅಪಾರ್ಟ್ಮೆಂಟ್ ಒಳಗಿನ ಪಾರ್ಟಿ ಹಾಲ್, ರೀಡಿಂಗ್ ರೂಂ, ಜಿಮ್, ಸ್ವಿಮ್ಮಿಂಗ್ ಪೂಲ್ ಬಂದ್ ಮಾಡಬೇಕು. ಒಳಾಂಗಣ ಕಾರ್ಯಕ್ರಮಗಳಿಗೆ 100 ಜನಕ್ಕೆ ಮಾತ್ರ ಅವಕಾಶ ನೀಡಬೇಕು. ಹೊರಾಂಗಣ ಕಾರ್ಯಕ್ರಮಗಳಿಗೆ 200 ಜನಕ್ಕೆ ಮಾತ್ರವೇ ಅವಕಾಶ ನೀಡಬೇಕು ಎಂಬುದಾಗಿ ಸೂಚಿಸಿದೆ. ಇಂತಹ ಶಿಫಾರಸ್ಸು ವರದಿಯನ್ನು ಆರೋಗ್ಯ ಸಚಿವರಿ(Dr K Sudhakar)ಗೆ ಸಲ್ಲಿಸಿದ್ದು, ಕೊರೋನಾ ನಿಯಂತ್ರಣಕ್ಕಾಗಿ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸುಗಳಿಗೆ ರಾಜ್ಯ ಸರ್ಕಾರ ಒಕೆ ಅಂದ್ರೇ.. ರಾಜ್ಯದಲ್ಲಿ ಮತ್ತೆ ಎರಡು ವಾರ ಶಾಲಾ-ಕಾಲೇಜು ಬಂದ್ ಆಗಲಿದೆ ಎನ್ನಲಾಗುತ್ತಿದೆ. ಆ ಬಗ್ಗೆ ಕಾದು ನೋಡಬೇಕಿದೆ.

Ramesh Jarkiholi CD Case: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News