ಬೆಂಗಳೂರು: ಇತ್ತೀಚೆಗಷ್ಟೇ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿದ್ದ ಪಕ್ಷೇತರ ಶಾಸಕ ಹೆಚ್. ನಾಗೇಶ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತಮ್ಮ ರಾಜೀನಾಮೆಯನ್ನು ರಾಜ್ಯಪಾಲ ವಾಜುಭಾಯ್ ವಾಲಾ ಅವರಿಗೆ ಸಲ್ಲಿಸಿದ್ದಾರೆ.
Karnataka Independent MLA Nagesh resigns as a minister; submits his resignation to Governor Vajubhai Vala. Nagesh mentions in letter, "I've already withdrawn my support to govt headed by HD Kumaraswamy. I would extend my support to the Govt of BJP if called for by your good self" pic.twitter.com/Ug9aX6VTpz
— ANI (@ANI) July 8, 2019
ಕೆಲದಿನಗಳ ಹಿಂದೆಯಷ್ಟೇ ಸಣ್ಣ ಕೈಗಾರಿಕೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಪಕ್ಷೇತರ ಶಾಸಕ ಹೆಚ್. ನಾಗೇಶ್ ಅವರ ರಾಜೀನಾಮೆ ನಿರ್ಧಾರ ದೋಸ್ತಿ ಸರ್ಕಾರಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಬಿಜೆಪಿ ಬೆಂಬಲಿಸಲು ಸಿದ್ಧ ಎಂದ ನಾಗೇಶ್:
ರಾಜ್ಯಪಾಲ ವಾಜುಭಾಯ್ ವಾಲಾ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ನಾಗೇಶ್, ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ನಾನು ಈಗಾಗಲೇ ನನ್ನ ಬೆಂಬಲವನ್ನು ಹಿಂತೆಗೆದುಕೊಂಡಿದ್ದೇನೆ. ಕರೆ ಬಂದರೆ ನಾನು ಬಿಜೆಪಿ ಸರ್ಕಾರಕ್ಕೆ ನನ್ನ ಬೆಂಬಲವನ್ನು ನೀಡುತ್ತೇನೆ ಎಂಬುದನ್ನು ಈ ಪತ್ರದ ಮೂಲಕ ನಾನು ನಿಸ್ಸಂದಿಗ್ಧವಾಗಿ ಹೇಳುತ್ತೇನೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
Karnataka Independent MLA Nagesh in his letter to Governor resigning as Minister:
I've already withdrawn my support to govt headed by HD Kumaraswamy. I would further by this letter unequivocally state I would extend my support to the Govt of BJP if called for by your good self pic.twitter.com/8qikTP4ttd— ANI (@ANI) July 8, 2019
ರಾಜೀನಾಮೆ ಬಳಿಕ ನಾಗೇಶ್ ಕೂಡ ಮುಂಬೈಗೆ ತೆರಳಲಿದ್ದಾರೆ ಎನ್ನಲಾಗುತ್ತಿದ್ದು, ನಾಗೇಶ್ಗೆ ಮುಂಬೈನ ಸೋಪಿಟೆಲ್ ಹೋಟೆಲ್ನಲ್ಲಿ ಈಗಾಗಲೇ ರೂಂ ಬುಕ್ ಮಾಡಲಾಗಿದೆ ಎಂಬ ಮಾಹಿತಿಗಳು ಕೂಡ ಲಭ್ಯವಾಗಿವೆ.