ಖ್ಯಾತ ನಟಿಯ ಬಟ್ಟೆ ಬಗ್ಗೆ ಬ್ಯಾಡ್‌ ಕಾಮೆಂಟ್‌ ಮಾಡಿದ್ದ 28 ವರ್ಷದ ಯುವಕನ ಬಂಧನ..! 

Malavika Menon case : ಸೋಷಿಯಲ್ ಮೀಡಿಯಾದಲ್ಲಿ ಖ್ಯಾತ ನಟಿಯೊಬ್ಬರ ಉಡುಗೆಯ ಬಗ್ಗೆ ಕೆಟ್ಟದಾಗಿ ಕಾಮೆಂಟ್‌ ಮಾಡಿದ್ದ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.. ಅವಹೇಳನಕಾರಿ ಕಾಮೆಂಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 28 ವರ್ಷದ ಯುವಕನನ್ನು ಬಂಧಿಸಲಾಗಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Nov 14, 2024, 05:46 PM IST
    • ಖ್ಯಾತ ನಟಿಯೊಬ್ಬರ ಉಡುಗೆಯ ಬಗ್ಗೆ ಕೆಟ್ಟದಾಗಿ ಕಾಮೆಂಟ್‌ ಮಾಡಿದ್ದ ಯುವಕನ
    • ಕಾಮೆಂಟ್‌ ಮಾಡಿದ್ದ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ..
    • ಪ್ರಕರಣಕ್ಕೆ ಸಂಬಂಧಿಸಿ 28 ವರ್ಷದ ಯುವಕನನ್ನು ಬಂಧಿಸಲಾಗಿದೆ..
ಖ್ಯಾತ ನಟಿಯ ಬಟ್ಟೆ ಬಗ್ಗೆ ಬ್ಯಾಡ್‌ ಕಾಮೆಂಟ್‌ ಮಾಡಿದ್ದ 28 ವರ್ಷದ ಯುವಕನ ಬಂಧನ..!  title=

Malavika Menon news : ನಟಿ ಮಾಳವಿಕಾ ಮೆನನ್ ಬಗ್ಗೆ ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ, ವಿಕ್ರಮ್ ಪ್ರಭು ಅಭಿನಯದ 'ಇವನ್ ಏ ಕಮಾಲ್' ಚಿತ್ರದಲ್ಲಿ ನಾಯಕಿಯ ತಂಗಿಯಾಗಿ ನಟಿಸುವ ಮೂಲಕ ತಮಿಳಿಗೆ ಪಾದಾರ್ಪಣೆ ಮಾಡಿದರು. ಆ ಬಳಿಕ ವೇತ್ತು ವೆಡ್ಟು, ವಿಷಿಯ, ಬೇಯ್ ಮಾಮ, ಆರು ಚಂದ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. 

ಮಲಯಾಳಂ ಚಿತ್ರರಂಗದಲ್ಲಿ ಜನಪ್ರಿಯ ನಟಿಯಾಗಿರುವ ಮಾಳವಿಕಾ ಮೆನನ್ ಅವರಿಗೆ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಯುವಕನೊಬ್ಬ ಕಿರುಕುಳ ನೀಡುತ್ತಿದ್ದಾರೆ. ಮಾಳವಿಕಾ ತನ್ನ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡುವುದರ ಜೊತೆಗೆ ತಾನು ಧರಿಸುವ ಬಟ್ಟೆಯ ಬಗ್ಗೆಯೂ ಟೀಕೆ ಮಾಡಿದ್ದಾಗಿ ದೂರಿದ್ದಾರೆ..

ಇದನ್ನೂ ಓದಿ:ಮಂಜು ಪಾವಗಡ ಮದುವೆ ಫೋಟೋಸ್‌ ಇಲ್ಲಿವೆ ನೋಡಿ

ಸಾಮಾಜಿಕ ಜಾಲತಾಣಗಳಲ್ಲಿ ಯಾರ ಬಗ್ಗೆಯೂ ಅಗೌರವದಿಂದ ಮಾತನಾಡುವ ಹಕ್ಕು ತಮಗಿದೆ ಎಂದು ಭಾವಿಸುವವರ ವಿರುದ್ಧ ನಟಿ ಕಿಡಿಕಾರಿದ್ದಾರೆ. ಇದಾದ ಮೇಲೆ ಕೆಲವರು ಫೋನ್ ಮಾಡಿ ತಾವು ಭಾಗವಹಿಸುವ ಸಮಾರಂಭಕ್ಕೆ ಯಾವ ಬಟ್ಟೆ ತೊಡುತ್ತೀರಿ ಅಂತ ಕೇಳುತ್ತಾರೆ ಅಂತ ಬೇಸರ ವ್ಯಕ್ತಪಡಿಸಿದರು. 

ಮಾಳವಿಕಾ ಮೆನನ್ ಅವರು ಕೊಚ್ಚಿಯಲ್ಲಿರುವ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ತಾವು ಧರಿಸಿರುವ ಬಟ್ಟೆ ಕುರಿತು ನಿರಂತರವಾಗಿ ಟೀಕೆ ಮಾಡುತ್ತಿರುವ ಯುವಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಕೋರಿದ್ದಾರೆ. ಪಾಲಕ್ಕಾಡ್‌ನ ಅಟ್ಟಪ್ಪಾಡಿಯ ಶ್ರೀಜಿತ್ ರವೀಂದ್ರನ್ ಎಂಬಾತ ನಟಿ ಮಾಳವಿಕಾ ಮೆನನ್ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾಗಿ ತನಿಖೆ ನಡೆಸಿದ ಪೊಲೀಸರು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ:ಸಿನಿಮಾ ಇಂಡಸ್ಟ್ರಿಗೆ ಬಂದು 10 ವರ್ಷವಾದ್ರೂ ಒಂದೂ ಹಿಟ್ ಕೊಟ್ಟಿಲ್ಲ, ಆಸ್ತಿ ಮಾತ್ರ 53,800 ಕೋಟಿ..!

ಸಧ್ಯ ಪ್ರಕರಣಕ್ಕೆ ಸಂಬಂಧಿಸಿ 28 ವರ್ಷದ ಯುವಕನನ್ನು ಕೊಚ್ಚಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ನಟಿ ಮಾಳವಿಕಾ ಮೆನನ್ ಬಗ್ಗೆ ಮಾತ್ರವಲ್ಲದೆ ಇತರ ಯಾವುದೇ ಮಹಿಳೆಯರ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ ಕಾಮೆಂಟ್‌ಗಳನ್ನು ಹರಡಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News