ಗಣಿಗಾರಿಕೆ ವರದಿ ಮಾಡಿದ ಪತ್ರಕರ್ತನಿಗೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ

                

Last Updated : Dec 3, 2017, 02:05 PM IST
ಗಣಿಗಾರಿಕೆ ವರದಿ ಮಾಡಿದ ಪತ್ರಕರ್ತನಿಗೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ  title=

ತುಮಕೂರು: ಶನಿವಾರದಂದು ಬಿಜೆಪಿಯ ಕಾರ್ಯಕರ್ತರು ಗಣಿಗಾರಿಕೆಯ ವಿಷಯಕ್ಕೆ ಸಂಬಂಧಿಸಿದಂತೆ ವರದಿ ಮಾಡಿದ್ದಕ್ಕೆ ಇಲ್ಲಿನ ಟಿವಿ ವರದಿಗಾರನ ಮೇಲೆ ಹಲ್ಲೆ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಬಿಜೆಪಿ ಆಯೋಜಿಸಿದ್ದ  ಕಾರ್ಯಕ್ರಮಕ್ಕೆ ಆಗಮಿಸಿದ  ಆ ಪತ್ರಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರು ಏಕಾಏಕಿ  ಪತ್ರಕರ್ತನ ಹಲ್ಲೆಯನ್ನು ಮಾಡಿದ್ದಾರೆ.ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಈ ಹಲ್ಲೆಯಾದ ಪತ್ರಕರ್ತ ಈ ಹಿಂದೆ ಕರ್ನಾಟಕದಲ್ಲಿನ ಮೈನಿಂಗ್ ಮಾಫಿಯಾ ವಿಷಯಕ್ಕೆ ಸಂಬಂಧಿಸಿದಂತೆ ವರದಿ ಮಾಡಿದ್ದರು ಎಂದು ಹೇಳಲಾಗಿದೆ. ದಾಳಿ ಮಾಡಿದ ಎಲ್ಲ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.  
 

ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ  ಕಾಂಗ್ರೆಸ್ ನಾಯಕ ಸುರಜ್ ಹೆಗಡೆ ಪತ್ರಕರ್ತನ ಕೆಲಸ ಸತ್ಯವನ್ನು ಹೊರತರುವುದಾಗಿದೆ. ಒಂದು ವೇಳೆ ಈ ದಾಳಿಯು ಅಂತಹ ಸತ್ಯವನ್ನು ಹತ್ತಿಕ್ಕುವುದಾಗಿದ್ದರೆ ಅದನ್ನು ಖಂಡಿತಾ ಸಹಿಸಲು ಸಾದ್ಯವಿಲ್ಲ ಎಂದರು. ಈ ಹಿಂದೆ 2013 ರಲ್ಲಿ ಮೈನಿಂಗ್ ಮಾಫಿಯಾಗೆ ಸಂಬಂಧಿಸಿದಂತೆ ಹಲವಾರು ಪ್ರಕರಣಗಳನ್ನು  ಸಿಬಿಐಗೆ ಹಸ್ತಾಂತರಿಸಲಾಗಿತ್ತು ಆದರೆ ಸಿಬಿಐ ತಾಂತ್ರಿಕ ಕಾರಣಗಳಿಂದಾಗಿ ಕೇಸ್ ದಾಖಲಿಸಲು ಬರುವುದಿಲ್ಲ  ಎಂದು ರಾಜ್ಯ ಕಾರ್ಯದರ್ಶಿಯವರಿಗೆ ತಿಳಿಸಿತ್ತು.ನಂತರ ಲೋಕಾಯುಕ್ತ ಸಂತೋಷ ಹೆಗ್ಡೆಯವರ ವರದಿಯಂತೆ ಅದು ತನಿಖೆಯನ್ನು ಈ ಹಿಂದೆ ಕೈಗೊಂಡಿತ್ತು. 

 

Trending News