ಮ್ಯಾನ್ ಹೋಲ್ ನಲ್ಲಿ ಉಸಿರುಗಟ್ಟಿ ಮೂವರು ಪೌರಕಾರ್ಮಿಕರ ಸಾವು

ಮೂವರು ಪೌರಕಾರ್ಮಿಕರು ಒಳಚರಂಡಿಯನ್ನು ಸ್ವಚ್ಛಗೊಳಿಸಲು ಹೋಗಿ ಮೃತಪಟ್ಟ ಘಟನೆ ಬೆಂಗಳೂರಿನ ಸೋಮಸುಂದರಪಾಳ್ಯದಲ್ಲಿ ನಡೆದಿದೆ.

Last Updated : Jan 8, 2018, 03:08 PM IST
ಮ್ಯಾನ್ ಹೋಲ್ ನಲ್ಲಿ ಉಸಿರುಗಟ್ಟಿ ಮೂವರು ಪೌರಕಾರ್ಮಿಕರ ಸಾವು title=
Representation image

ಬೆಂಗಳೂರು: ಮೂವರು ಪೌರಕಾರ್ಮಿಕರು ಒಳಚರಂಡಿಯನ್ನು ಸ್ವಚ್ಛಗೊಳಿಸಲು ಹೋಗಿ ಮೃತಪಟ್ಟ ಘಟನೆ ಭಾನುವಾರಂದು ಬೆಂಗಳೂರಿನ ಸೋಮಸುಂದರಪಾಳ್ಯದಲ್ಲಿ ನಡೆದಿದೆ.

ಇಲ್ಲಿನ ಅಪಾರ್ಟಮೆಂಟ್ ಹತ್ತಿರದ ಒಳಚರಂಡಿಯನ್ನು ಶುಚಿಗೊಳಿಸಲು ಹೋಗಿದ್ದ ವ್ಯಕ್ತಿ ಹೊರ ಭಾರದಿರುವುದನ್ನು ಕಂಡು ಆ ವ್ಯಕ್ತಿಯನ್ನು ಉಳಿಸಲು ಹೋದ ಇಬ್ಬರು ವ್ಯಕ್ತಿಗಳು ಸಹಿತ ಗ್ಯಾಸ್ ನಿಂದಾಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ ಜೆ ಜಾರ್ಜ್ ಹಾಗೂ ಮೇಯರ್ ಸಂಪತ್ ರಾಜ್, ನಗರಾಯುಕ್ತ ಮಂಜುನಾಥ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿದರು. ದಕ್ಷಿಣ-ಪೂರ್ವ ವಿಭಾಗದ ಡಿಸಿಪಿ  ಹೇಳುವಂತೆ ಈಗಾಗಲೇ ಅಪಾರ್ಟ್ಮೆಂಟ್ ಮಾಲಿಕರ ಅಸೋಸಿಯೇಷನ್ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಸುಪ್ರಿಂಕೋರ್ಟ್ ಆದೇಶದಂತೆ ಒಳಚರಂಡಿಯಲ್ಲಿ ಸೂಕ್ತ ರಕ್ಷಣಾ ಕವಚ ಇಲ್ಲದೆ ಕಾರ್ಯ ನಿರ್ವಹಿಸುವುದನ್ನು ನಿಷೇಧಿಸಲಾಗಿದೆ.

Trending News