WPL 2025: ಭಾನುವಾರ ಬೆಂಗಳೂರಿನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2025 ಮಿನಿ ಹರಾಜಿನಲ್ಲಿ, ನೀತಾ ಅಂಬಾನಿ ಅವರು 1.6 ಕೋಟಿ ಕೊಟ್ಟು 16 ವರ್ಷದ ಬಾಲಕಿಯನ್ನು ಮುಂಬೈ ತಂಡಕ್ಕೆ ಖರೀದಿಸಿದ್ದಾರೆ. ಇದರ ಬಗ್ಗೆ ನೀತಾ ಅಂಬಾನಿ ಇದೀಗ ಮಾತನಾಡಿದ್ದು, ಸಂತೋಷ ವ್ಯಕ್ತ ಪಡಿಸಿದ್ದಾರೆ.
ಮುಂಬೈ ಇಂಡಿಯನ್ಸ್ನ ಮಾಲೀಕ ಮತ್ತು ರಿಲಯನ್ಸ್ ಗ್ರೂಪ್ ಮಾಲೀಕ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಎಂ. ಅಂಬಾನಿ, WPL 2025 ಸೀಸನ್ಗಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಕಟ್ಟುವಲ್ಲಿ ಸಂತಸವನ್ನು ವ್ಯಕ್ತ ಪಡಿಸಿದ್ದಾರೆ. ತಂಡ ಕಟ್ಟುವಲ್ಲಿ ತಮ್ಮ ದೃಷ್ಟಿಕೋನ ಹೇಗಿತ್ತು ಎಂಬುದನ್ನು ವಿವರಿಸಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ನಡೆದ ಹರಾಜಿನ ನಂತರ ಮಾತನಾಡಿದ ನೀತಾ ಅಂಬಾನಿ, ಇಂದು ನಾವು ಒಟ್ಟುಗೂಡಿದ ತಂಡದಿಂದ ನಾವೆಲ್ಲರೂ ತುಂಬಾ ಸಂತೋಷ ಮತ್ತು ತೃಪ್ತಿ ಹೊಂದಿದ್ದೇವೆ. ಹಾರಜಿನಲ್ಲಿ ನಾವು ಒಳ್ಳೆ ಆಟಗಾರರನ್ನು ಖರೀದಿಸಿರುವುದು ನನಗೆ ಅತ್ಯಾಕರ್ಷಕ ಹಾಗೂ ಭಾವನಾತ್ಮಕವಾಗಿದೆ. ಹರಾಜಿನಲ್ಲಿ ಭಾಗವಹಿಸಿದ್ದ ಎಲ್ಲಾ ಹುಡುಗಿಯರು ಹಾಗೂ ಮುಂಬೈ ತಂಡಕ್ಕೆ ಸೇರ್ಪಡೆಯಾದ ಎಲ್ಲಾ ಯುವತಿಯರ ಬಗ್ಗೆ ನನಗೆ ಹೆಮ್ಮೆ ಇದೆ.
ತಮಿಳುನಾಡಿನ 16 ವರ್ಷದ ಯುವತಿ U19 ಏಷ್ಯಾ ಕಪ್ನ ಮೂಲಕ ತಮ್ಮ ಕ್ರಿಕೆಟ್ ಜರ್ನಿಗೆ ಪಾದಾರ್ಪಣೆ ಮಾಡಿದ ಕಮಿಲಿನಿ ಅವರ ಬಗ್ಗೆ ಮಾತಾನಡಿದ ನೀತಾ ಅಂಬಾನಿ " ಈ ವರ್ಷ ನಾವು 16 ವರ್ಷದ ಕಮಲಿನಿಯ ಬಗ್ಗೆ ತುಂಬಾ ಉತ್ಸುಕರಾಗಿದ್ದೇವೆ. ನಮ್ಮ ಸ್ಕೌಟ್ಗಳು ಕೆಲವು ಸಮಯದಿಂದ ಅವಳನ್ನು ಟ್ರ್ಯಾಕ್ ಮಾಡುತ್ತಿದ್ದಾರೆ ಮತ್ತು ಅವಳು ನೋಡಲು ತುಂಬಾ ಉತ್ತೇಜಕ ಹೊಸ ಪ್ರತಿಭೆ. ಆದ್ದರಿಂದ, ಒಟ್ಟಾರೆಯಾಗಿ, ಹರಾಜಿನಲ್ಲಿ ತೃಪ್ತಿಕರ ದಿನ. ಅವಳು ನಮ್ಮ ತಂಡ ಸೇರಿರುವುದು ನಮಗೆ ತುಂಬಾ ಸಂತಸ ತಂದಿದೆ. ಅವಳ ಆಟವನ್ನು ನೋಡಲು ನಾವು ಕಾತುರದಿಂದ ಕಾಯುತ್ತಿದ್ದೇವೆ" ಎಂದಿದ್ದಾರೆ.
ತಮಿಳುನಾಡು ಮೂಲದ ಈ ಬಾಲಕಿ ಅಂಡರ್-19 T20 ಪಂದ್ಯಾವಳಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿಕೊಂಡಿದ್ದಾರೆ, 8 ಪಂದ್ಯಗಳಲ್ಲಿ 311 ರನ್ ಗಳಿಸಿ ಸೈ ಎನಿಸಿಕೊಂಡಿದ್ದಾರೆ. ಈಕೆ ಬ್ಯಾಟಿಂಗ್ ಅಷ್ಟೆ ಅಲ್ಲದೆ, ಬೌಲಿಂಗ್ ಹಾಗೂ ಧೋನಿ ಅವರಂತೆ ಸಖತ್ ವಿಕೆಟ್ ಕೀಪಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.
ನಿನ್ನೆ ನಡೆದ ಮೆಗಾ ಹರಾಜಿನಲ್ಲಿ ಈ ಬಾಲಕಿಯನ್ನು ಖರೀದಿಸಲು, 10 ಲಕ್ಷದ ಬಿಡ್ಡಿಂಗ್ನೊಂದಿಗೆ ಆರಂಭವಾಗಿತ್ತು. ಈ ಯುವ ಆಟಗಾರ್ತಿಯನ್ನು ಖರೀದಿಸಲು ಡೆಲ್ಲಿ ತಂಡ ಹಾಗೂ ಮುಂಬೈ ತಂಡಗಳು ತೀರ್ವ ಪೈಪೋಟಿ ನಡೆಸಿದ್ದವು. ಇದರಲ್ಲಿ 10 ಲಕ್ಷದ ಮೂಲಕ ಬೆಲೆಯೊಂದಿಗೆ ಕಣಕ್ಕೆ ಎಂಟ್ರಿ ಕೊಟ್ಟಿದ್ದ ಕಮಲಿನಿ ಇದೀಗ 1.6 ಕೋಟಿ ರೂ.ಗೆ ಮುಂಬೈ ತಂಡದ ಪಾಲಾಗಿದ್ದಾರೆ. ಇನ್ನೂ, ಈ ಯುವ ಆಟಗಾರ್ತಿಯ ಪ್ರದರ್ಶನ ಹೇಗಿರಲಿದೆ ಎಂಬುದನ್ನು ನೋಡಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ.
Scouted, planned, and hit 🎯 at the #TATAWPL Auction! #AaliRe #TATAWPLAuction #MumbaiIndians
— Mumbai Indians (@mipaltan) December 16, 2024
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.