Video: ಚುನಾವಣೆ ಬಗ್ಗೆ ರಿಯಲ್ ಸ್ಟಾರ್-ಅಣ್ಣಾ ಹಜಾರೆ ಮಾತುಕತೆ

ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೊಸ್ಕರ 'ಪ್ರಜಾಕೀಯ'.

Last Updated : Apr 4, 2018, 11:18 AM IST
Video: ಚುನಾವಣೆ ಬಗ್ಗೆ ರಿಯಲ್ ಸ್ಟಾರ್-ಅಣ್ಣಾ ಹಜಾರೆ ಮಾತುಕತೆ title=

ಕನ್ನಡ ಚಿತ್ರರಂಗದಲ್ಲಿ ನೈಜ ಕಥೆಗಳನ್ನು ಬಿಂಬಿಸುತ್ತಾ ರಿಯಲ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟ, ನಿರ್ದೇಶಕ ಉಪೇಂದ್ರ ಈಗ ರಾಜಕೀಯ ಪ್ರವೇಶಕ್ಕೂ ಮುಂದಾಗಿದ್ದಾರೆ. ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ (ಕೆಪಿಜೆಪಿ) ಸ್ಥಾಪಿಸಿದ್ದ ಉಪೇಂದ್ರ, ಪಕ್ಷದ ಟಿಕೆಟ್ ವಿಚಾರವಾಗಿ ಮಹೇಶ್ ಗೌಡ ನೊಂದಾಯಿಸಿರುವ ಕೆಪಿಜೆಪಿ ಪಕ್ಷದಿಂದ ಹೊರಬಂದರು. ಈಗ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೊಸ್ಕರ 'ಪ್ರಜಾಕೀಯ' ಎಂದು ಹೊಸ ಪಕ್ಷ ಕಟ್ಟಲು ಹೊರಟಿರುವ ರಿಯಲ್ ಸ್ಟಾರ್ ಉಪೇಂದ್ರ ಸ್ವಾತಂತ್ರ್ಯ ಹೋರಾಟಗಾರ ಅಣ್ಣಾ ಹಜಾರೆಯೊಂದಿಗೆ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ್ದಾರೆ.

'ನನ್ನ ಹೆಸರನ್ನು ನೋಡಬೇಡಿ, ನನ್ನ ಪಕ್ಷವನ್ನು ನೋಡಬೇಡಿ. ನಮ್ಮ ವಿಚಾರ ನೋಡಿ, ನಮ್ಮ ಪ್ರಣಾಳಿಕೆ ನೋಡಿ. ಅದರ ಬಗ್ಗೆ ಯೋಚಿಸಿ, ಈ ವಿಚಾರಧಾರೆಗಳು ನಿಮಗೆ ಒಳ್ಳೆಯದು ಎನಿಸಿದರೆ ಮಾತ್ರ ನಮಗೆ ಬೆಂಬಲ ನೀಡಿ, ಇಲ್ಲವಾದರೆ ಬೆಂಬಲಿಸಬೇಡಿ ಎಂದು ನಾನು ಜನತೆಗೆ ಹೇಳುತ್ತಿದ್ದೇನೆ ಎಂದು ರಿಯಲ್ ಸ್ಟಾರ್ ಉಪೇಂದ್ರ ಸ್ವಾತಂತ್ರ್ಯ ಹೋರಾಟಗಾರ ಅಣ್ಣಾ ಹಜಾರೆಯೊಂದಿಗೆ ಸಂವಾದ ನಡೆಸುತ್ತಾ ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಣ್ಣಾ ಚುನಾವಣೆ ಬಗ್ಗೆ ಏನ್ ಹೇಳ್ತಾರೆ..! ಈ ವಿಡಿಯೋವನ್ನು ನೀವೇ ನೋಡಿ.

Trending News