ಅದೃಷ್ಟದ ಚಿಹ್ನೆ: ಜ್ಯೋತಿಷ್ಯದಲ್ಲಿ, ಬೆಳಿಗ್ಗೆ ಕೆಲವು ವಸ್ತುಗಳನ್ನು ನೋಡುವುದು ತುಂಬಾ ಮಂಗಳಕರವೆಂದು ನಂಬಲಾಗಿದೆ. ಮುಂಜಾನೆ ಕಣ್ಣಿಗೆ ಕಾಣುವ ಕೆಲವು ವಸ್ತುಗಳು ಅದೃಷ್ಯವನ್ನು ಹೊತ್ತು ತರುತ್ತವೆ, ಆ ವಸ್ತುಗಳನ್ನು ನೋಡುವುದರಿಂದ ಇಡೀ ದಿನ ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ ಇದು ತಾಯಿ ಲಕ್ಷ್ಮಿದೇವಿಯ ಆಶೀರ್ವಾದದ ಪ್ರತೀಕ ಎಂದೂ ಸಹ ನಂಬಲಾಗಿದೆ.
ವ್ಯಕ್ತಿಯು ಬೆಳಿಗ್ಗೆ ಕಣ್ಣು ತೆರೆದ ತಕ್ಷಣ ತನ್ನ ಎರಡೂ ಅಂಗೈಗಳನ್ನು ನೋಡಬೇಕು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಇದಕ್ಕೆ ಮುಖ್ಯ ಕಾರಣ ಅಂಗೈಯಲ್ಲಿ ತಾಯಿ ಸರಸ್ವತಿಯ ಜೊತೆಗೆ ಬ್ರಹ್ಮ ಮತ್ತು ಲಕ್ಷ್ಮಿ ನಮ್ಮ ಕೈಯಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ಬೆಳಿಗ್ಗೆ ಎದ್ದು ಕಣ್ಣು ಬಿಟ್ಟೊಡನೆ ಅಂಗೈಗಳನ್ನು ನೋಡುವ ವ್ಯಕ್ತಿಯು ಜೀವನದಲ್ಲಿ ಸಂತೋಷ, ಸಮೃದ್ಧ ಮತ್ತು ಅದೃಷ್ಟವನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಇದಲ್ಲದೆ ಮುಂಜಾನೆ ಕೆಲವು ವಸ್ತುಗಳನ್ನು ನೋಡುವುದು ಸಹ ಮಂಗಳಕರ ಎಂದು ಹೇಳಲಾಗುತ್ತದೆ. ಅವು ಯಾವುವು ಎಂದು ತಿಳಿಯೋಣ...
ಇದನ್ನೂ ಓದಿ- ಈ 5 ರಾಶಿಗಳಿಗೆ ಭಾರೀ ಅದೃಷ್ಟ ನೀಡಲಿದ್ದಾನೆ ಬುಧ..! ಉದ್ಯೋಗದಲ್ಲಿ ಸಿಗಲಿದೆ ಬಡ್ತಿ, ಹೆಚ್ಚಲಿದೆ ವೇತನ
ಮುಂಜಾನೆ ಈ ವಸ್ತುಗಳನ್ನು ನೋಡುವುದು ಮಂಗಳಕರ :-
* ಬೆಳಗ್ಗೆ ಕಣ್ಣು ತೆರೆದ ತಕ್ಷಣ ಹಕ್ಕಿಗಳ ಚಿಲಿಪಿಲಿ ಸದ್ದು ಕೇಳಿಸತೊಡಗಿದರೆ ದಿನದ ಆರಂಭ ಚೆನ್ನಾಗಿಯೇ ಇರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ.
* ಮುಂಜಾನೆ, ವಿವಾಹಿತ ಮಹಿಳೆ ಕೈಯಲ್ಲಿ ಪೂಜೆಯ ತಟ್ಟೆಯನ್ನು ಹಿಡಿದಿರುವುದನ್ನು ನೀವು ನೋಡಿದರೆ, ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನೀವು ಕೆಲವು ದೊಡ್ಡ ಕೆಲಸವನ್ನು ಪಡೆಯಲಿದ್ದೀರಿ ಎಂಬುದನ್ನು ಇದು ಸೂಚಿಸುತ್ತದೆ.
* ಮುಂಜಾನೆ ಬಿಳಿ ಹೂವುಗಳು, ಆನೆಗಳು ಇತ್ಯಾದಿಗಳನ್ನು ನೋಡುವುದು ಸಹ ಮಂಗಳಕರವಾಗಿದೆ. ಇಂತಹವುಗಳನ್ನು ನೋಡುವುದರಿಂದ ತಾಯಿ ಲಕ್ಷ್ಮಿಯ ಕೃಪೆಯು ವ್ಯಕ್ತಿಯ ಮೇಲೆ ಉಳಿಯುತ್ತದೆ ಎನ್ನಲಾಗುತ್ತದೆ.
ಇದನ್ನೂ ಓದಿ- Vastu Tips: ಊಟ ಮಾಡುವಾಗ ನೀವೂ ಈ ತಪ್ಪನ್ನು ಮಾಡುತ್ತಿದ್ದೀರಾ? ಇರಲಿ ಎಚ್ಚರ
* ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುಂಜಾನೆ ಹಾಲು, ಮೊಸರು ಮುಂತಾದವುಗಳು ಕಾಣಿಸಿಕೊಳ್ಳುವುದು ಕೂಡ ಮಂಗಳಕರ. ಇದು ನಿಮ್ಮ ಅದೃಷ್ಟವನ್ನು ಸೂಚಿಸುತ್ತದೆ.
* ಅದೇ ಸಮಯದಲ್ಲಿ, ಹಸುವಿನ ದೃಷ್ಟಿ ಕೂಡ ಮಂಗಳಕರ ಸಂಕೇತವೆಂದು ಪರಿಗಣಿಸಲಾಗಿದೆ. ಯಾರಿಗಾದರೂ ಬೆಳಗ್ಗೆ ಹಸುವಿನ ದರ್ಶನವಾದರೆ ಅದರಿಂದ ಹಣ ಬರುವ ಸಾಧ್ಯತೆ ಹೆಚ್ಚುತ್ತದೆ.
* ಯಾರಾದರೂ ಬೆಳಿಗ್ಗೆ ಮನೆಯ ಹೊರಗೆ ಶುಚಿಗೊಳಿಸುವುದನ್ನು ನೋಡಿದರೆ, ಅದನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ರೀತಿಯದನ್ನು ನೋಡುವುದರಿಂದ, ಒಬ್ಬ ವ್ಯಕ್ತಿಯು ಕೆಲವು ದೊಡ್ಡ ಸಮಸ್ಯೆಗಳಿಂದ ಮುಕ್ತನಾಗುತ್ತಾನೆ ಎಂದು ನಂಬಲಾಗಿದೆ.
* ಬೆಳ್ಳಂಬೆಳಗ್ಗೆ ಗೇರುಬೀಜ, ಶಂಖ, ವೀಳ್ಯದೆಲೆ ಇತ್ಯಾದಿಗಳನ್ನು ನೋಡುವುದು ಕೂಡ ಮಂಗಳಕರ. ಇದರಿಂದ ಹಣ ಗಳಿಸುವ ಸಾಧ್ಯತೆ ಇದೆ.
* ಬೆಳಿಗ್ಗೆ ಕಣ್ಣು ತೆರೆದ ತಕ್ಷಣ ದೇವಸ್ಥಾನದ ಗಂಟೆ ಬಾರಿಸುವ ಶಬ್ದ ಕೇಳಿದರೆ ಅದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ವ್ಯಕ್ತಿಗೆ ಒಳ್ಳೆಯ ಸುದ್ದಿಯನ್ನು ತರುತ್ತದೆ. ಅಲ್ಲದೆ, ಯಾವುದೇ ಹಾಳಾದ ಅಥವಾ ಸ್ಥಗಿತಗೊಂಡ ಕೆಲಸವನ್ನು ಪೂರ್ಣಗೊಳಿಸುವ ಸೂಚನೆ ಇದಾಗಿದೆ ಎನ್ನಲಾಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.