snake bite first aid: ಹಾವು ಕಚ್ಚಿದರೆ ತಕ್ಷಣ ಏನು ಮಾಡಬೇಕು? ಈ ಒಂದು ಕೆಲಸದಿಂದ ಪ್ರಾಣವನ್ನೇ ಉಳಿಸಬಹುದು

snake bite first aid: ಹಾವನ್ನು ಕಂಡರೆ ಕೆಲವರು ಗಾಬರಿಯಾಗುತ್ತಾರೆ. ಆಕಸ್ಮಿಕವಾಗಿ ಹಾವು ಕಚ್ಚಿದರೆ ಜೀವ ಉಳಿಸುವುದು ಹೇಗೆ ಗೊತ್ತಾ..?

Written by - Chetana Devarmani | Last Updated : Aug 28, 2024, 08:04 AM IST
    • ಹಾವು ಕಡಿತಕ್ಕೆ ಒಳಗಾದವರನ್ನು ರಕ್ಷಿಸುವುದು ಹೇಗೆ?
    • ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ಮಾಡಬೇಕಾದ ಪ್ರಥಮ ಚಿಕಿತ್ಸೆ ಏನು?
    • ಹಾವು ಕಚ್ಚಿದರೆ ತಕ್ಷಣ ಏನು ಮಾಡಬೇಕು?
snake bite first aid: ಹಾವು ಕಚ್ಚಿದರೆ ತಕ್ಷಣ ಏನು ಮಾಡಬೇಕು? ಈ ಒಂದು ಕೆಲಸದಿಂದ ಪ್ರಾಣವನ್ನೇ ಉಳಿಸಬಹುದು title=

snake bite first aid: ಹಾವು ಕಡಿತಕ್ಕೆ ಒಳಗಾದವರನ್ನು ರಕ್ಷಿಸಲು ಬಾಯಿಯಿಂದ ವಿಷವನ್ನು ತೆಗೆದುಕೊಳ್ಳುವುದು, ಕಚ್ಚಿದ ಸ್ಥಳವನ್ನು ಕೆಲವು ರೀತಿಯ ಕಲ್ಲುಗಳಿಂದ ಉಜ್ಜುವುದು, ಗಿಡಮೂಲಿಕೆಗಳ ಔಷಧಗ ಹಚ್ಚುವುದು ಎಲ್ಲವೂ ಪ್ರಾಣಕ್ಕೆ ಕುತ್ತು ತರುತ್ತವೆ. 

ಹಾವು ಕಡಿತಕ್ಕೆ ಒಳಗಾದವರು ಪ್ರಾಣ ಕಳೆದುಕೊಳ್ಳುವ ಭೀತಿಯಿಂದ ತೀವ್ರ ಒತ್ತಡದಲ್ಲಿರುತ್ತಾರೆ. ಆದರೆ ಎಲ್ಲಾ ಹಾವುಗಳು ವಿಷಕಾರಿಯಲ್ಲ. ನಿಮ್ಮನ್ನು ಕಚ್ಚಿದ ಹಾವು ಯಾವುದು ಎಂದು ತಿಳಿದುಕೊಂಡರೆ ಚಿಕಿತ್ಸೆ ಸುಲಭವಾಘಿ ಬಿಡುತ್ತದೆ. ವ್ಯಕ್ತಿ ತನಗೆ ಕಚ್ಚಿದ ಹಾವನ್ನು ಗುರುತಿಸಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಇದು ವಿಷಕಾರಿಯಲ್ಲದಿದ್ದರೆ ಚಿಂತಿಸಬೇಕಾಗಿಲ್ಲ. ವಿಷಕಾರಿ ಹಾವು ಕಚ್ಚಿದರೂ ಗಾಬರಿಯಾಗದೆ ಪ್ರಥಮ ಚಿಕಿತ್ಸೆ ನೀಡಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೆ ಪ್ರಾಣ ಉಳಿಸಬಹುದು. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಂಟಿವೆನಮ್ ಚುಚ್ಚುಮದ್ದು ಲಭ್ಯವಿರುತ್ತದೆ.

ಪ್ರಥಮ ಚಿಕಿತ್ಸೆ ಹೇಗೆ...

1. ಮೊದಲು ಆ ಸ್ಥಳದಿಂದ ಹಾವು ಕಚ್ಚಿದ ವ್ಯಕ್ತಿಯನ್ನು ಕರೆದುಕೊಂಡು ಹೋಗಿ. ನದಿ, ಕಾಲುವೆ, ಸಮುದ್ರಗಳಲ್ಲಿ ಹಾವು ಕಚ್ಚಿದರೆ ವ್ಯಕ್ತಿ ಮುಳುಗದಂತೆ ನೋಡಿಕೊಂಡು, ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಬೇಕು.
2. ಹಾವು ಕಚ್ಚಿದ ಜಾಗದಲ್ಲಿ ಯಾವುದೇ ರೀತಿಯ ಆಭರಣಗಳಿದ್ದರೆ ಮೊದಲು ಅದನ್ನು ತೆಗೆಯಬೇಕು. ಇಲ್ಲದಿದ್ದರೆ ಚರ್ಮ ಊತಗೊಂಡು ಅವು ಸಿಲುಕಿಕೊಳ್ಳುತ್ತವೆ. ಸಮಸ್ಯೆಯು ಉಲ್ಬಣಗೊಳ್ಳುತ್ತದೆ. ಚಿಕಿತ್ಸೆಯೂ ಕಷ್ಟವಾಗುವುದು.
3. ಹಾವು ಕಡಿತಕ್ಕೆ ಒಳಗಾದವರು ಗಾಬರಿಯಾಗಬಾರದು. ಜೊತೆಗಿದ್ದವರು ಅವರಿಗೆ ಧೈರ್ಯ ತುಂಬಬೇಕು. ನೀವು ಚೆನ್ನಾಗಿದ್ದೀರಿ ಮತ್ತು ಶೀಘ್ರದಲ್ಲೇ ಗುಣಮುಖರಾಗುತ್ತೀರಿ ಎಂದು ಧೈರ್ಯದಿಂದ ಹೇಳಬೇಕು.
4.  ಹಾವು ಕಚ್ಚಿದ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಬೇಕು. ಅಲ್ಲಿ ಆಂಟಿವೆನಮ್ ಚುಚ್ಚುಮದ್ದನ್ನು ನೀಡುವುದು ಇತರ ವೈದ್ಯಕೀಯ ಚಿಕಿತ್ಸೆಗಳ ಮೂಲಕ ಅವರ ಜೀವಗಳನ್ನು ಉಳಿಸಬಹುದು.

ಬ್ಯಾಂಡೇಜ್ ಯಾವಾಗಲೂ ಒಳ್ಳೆಯದಲ್ಲ...

ಹಾವು ಕಚ್ಚಿದ ಎಲ್ಲಾ ಸಂದರ್ಭಗಳಲ್ಲಿ ಬ್ಯಾಂಡೇಜ್  ಹಾಕಲು ಶಿಫಾರಸು ಮಾಡುವುದಿಲ್ಲ. ಅದರಲ್ಲೂ ಹಾವು ಕಡಿತದಿಂದ ಊತವಿದ್ದರೆ ಬ್ಯಾಂಡೇಜ್ ಹಾಕಬೇಡಿ. ಈ ಕಾರಣದಿಂದಾಗಿ ಹಾವು ಕಚ್ಚಿದ ಜಾಗ ಸೋಂಕಿಗೆ ಒಳಗಾಗಬಹುದು. ಹಾವು ಕಚ್ಚಿದರೆ ವಾಂತಿಯಾಗಬಹುದು. ಆದ್ದರಿಂದ, ಆಸ್ಪತ್ರೆಗೆ ಕರೆದೊಯ್ಯುವವರೆಗೆ ಎಡಭಾಗದಲ್ಲಿ ಮಲಗುವುದು ಉತ್ತಮ.

ಇದನ್ನೂ ಓದಿ: ಸಾಂಬಾರ ಪದಾರ್ಥಗಳಲ್ಲಿ ಕಲಬೆರಕೆ: ನಕಲಿ ಮಸಾಲೆಗಳನ್ನು ಗುರುತಿಸಲು ಇಲ್ಲಿದೆ ಅಸಲಿ ಮಾರ್ಗ...!

ಜೀವ ಉಳಿಸುವ ಚುಚ್ಚುಮದ್ದು:

ಆಂಟಿವೆನಮ್‌ ಚುಚ್ಚುಮದ್ದು ಜೀವ ಉಳಿಸುವುದಲ್ಲದೆ, ಹಾವಿನ ವಿಷದಲ್ಲಿನ ನೆಕ್ರೋಟಿಕ್ ಇತರ ವಿಷಗಳಿಂದ ಉಂಟಾಗುವ ರೋಗಿಗಳ ನೋವನ್ನು ಕಡಿಮೆ ಮಾಡುತ್ತದೆ. ಈ ಚುಚ್ಚುಮದ್ದು ರೋಗಿಗಳು ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಪ್ರತಿ ವರ್ಷ ನಾಲ್ಕು ಲಕ್ಷ ಸಂತ್ರಸ್ತರು:

WHO ವರ್ಲ್ಡ್ ರಿಪೋರ್ಟ್ ಆನ್ ಚೈಲ್ಡ್ ಇಂಜುರಿ ಪ್ರಿವೆನ್ಶನ್ (2008) ಪ್ರಕಾರ, ವಿಶ್ವಾದ್ಯಂತ ಪ್ರತಿ ವರ್ಷ ಅಂದಾಜು 4 ಲಕ್ಷ ಹಾವು ಕಡಿತದ ಪ್ರಕರಣಗಳು ವರದಿಯಾಗುತ್ತವೆ. ಹಾವಿನ ವಿಷವು ಡರ್ಮೊನೆಕ್ರೊಟಿಕ್, ಸೈಟೊಟಾಕ್ಸಿಕ್, ಮಯೋಟಾಕ್ಸಿಕ್ ನಂತಹ ಅಪಾಯಕಾರಿ ದ್ರವಗಳನ್ನು ಹೊಂದಿರುತ್ತದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ, ಇವುಗಳು ದೇಹದಲ್ಲಿ ಸಂಗ್ರಹಗೊಂಡು ಆ ಭಾಗಗಳಿಗೆ ತೀವ್ರ ಹಾನಿಯನ್ನುಂಟು ಮಾಡುತ್ತವೆ. ಇದು ಅಂಗವೈಕಲ್ಯಕ್ಕೆ ಕಾರಣವಾಗಬಹುದು.

20 ನಿಮಿಷಗಳ ಸಂಪೂರ್ಣ ರಕ್ತ ಹೆಪ್ಪುಗಟ್ಟುವಿಕೆ ಪರೀಕ್ಷೆ 

ಕೆಲವು ವಿಷಪೂರಿತ ಹಾವುಗಳ ಕಚ್ಚುವಿಕೆಯು ಅಪಾರ ರಕ್ತಸ್ರಾವವನ್ನು ಉಂಟುಮಾಡಬಹುದು. ಹಾವಿನ ಕಡಿತವು ವಿಷಕಾರಿಯೇ ಎಂದು ನಿರ್ಧರಿಸಲು 20WBCT ಪರೀಕ್ಷೆ ಲಭ್ಯವಿದೆ. ಹಾವು ಕಡಿತಕ್ಕೆ ಒಳಗಾದವರ 1 ಅಥವಾ 2 ಮಿಲಿಲೀಟರ್ ರಕ್ತವನ್ನು ಸಂಗ್ರಹಿಸಿ ಸಣ್ಣ ಗಾಜಿನ ಬಾಟಲಿಯಲ್ಲಿ ಇಡಬೇಕು. ಕೋಣೆಯ ಉಷ್ಣಾಂಶದಲ್ಲಿ 20 ನಿಮಿಷಗಳ ಕಾಲ ಇರಿಸಿ. ರಕ್ತ ಹೆಪ್ಪುಗಟ್ಟದಿದ್ದರೆ ಅದು ವಿಷಕಾರಿ ಎಂದು ವೈದ್ಯರು ಖಚಿತಪಡಿಸುತ್ತಾರೆ. ಇದರೊಂದಿಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಾರೆ. 

ಇದನ್ನೂ ಓದಿ: ರಾತ್ರಿ ಜಿರಳೆಗಳ ಕಾಟವೇ... ಈ ಎಲೆಯನ್ನು ಅಡುಗೆಮನೆ ಸಿಂಕ್‌ ಬಳಿ ಇಟ್ಟರೆ ಸಾಕು.. 10 ನಿಮಿಷದಲ್ಲಿ ಸತ್ತು ಬೀಳುತ್ತವೆ ಕಾಕ್ರೋಚ್‌ !

ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News