ಶನಿಯ ಬಣ್ಣ ಏಕೆ ಕಪ್ಪು ಬಣ್ಣಕ್ಕೆ ತಿರುಗಿತು? ಸೂರ್ಯನಿಗೂ ಶನಿದೇವನಿಗೂ ಏನು ಸಂಬಂಧ ಗೊತ್ತಾ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ಮಕರ ಸಂಕ್ರಾಂತಿಯಂದು 29 ವರ್ಷಗಳ ನಂತರ ಸೂರ್ಯ ತನ್ನಮಗ(ಶನಿ)ನೊಂದಿಗೆ ಮುಖಾಮುಖಿಯಾಗುತ್ತಿದ್ದಾನೆ. 

Written by - Puttaraj K Alur | Last Updated : Jan 11, 2022, 08:46 PM IST
  • ಮಕರ ಸಂಕ್ರಾಂತಿಯಂದು ಸೂರ್ಯ ದೇವ ಧನು ರಾಶಿಯಿಂದ ಮಕರ ರಾಶಿ ಪ್ರವೇಶಿಸುತ್ತಾನೆ
  • ಪುರಾಣಗಳ ಕಥೆಗಳ ಪ್ರಕಾರ ಸೂರ್ಯದೇವ ಮತ್ತು ಸಂಜ್ಞಾರ ಪುತ್ರನೇ ಶನಿದೇವ
  • ಸಂಕ್ರಾಂತಿಯಂದು ಸೂರ್ಯನ ಜೊತೆಗೆ ಶನಿ ದೇವನನ್ನೂ ಭಕ್ತಿಯಿಂದ ಪೂಜಿಸಲಾಗುತ್ತದೆ
ಶನಿಯ ಬಣ್ಣ ಏಕೆ ಕಪ್ಪು ಬಣ್ಣಕ್ಕೆ ತಿರುಗಿತು? ಸೂರ್ಯನಿಗೂ ಶನಿದೇವನಿಗೂ ಏನು ಸಂಬಂಧ ಗೊತ್ತಾ? title=
ಸೂರ್ಯದೇವ ಮತ್ತು ಸಂಜ್ಞಾರ ಪುತ್ರನೇ ಶನಿದೇವ

ನವದೆಹಲಿ: 2022ರ ಮಕರ ಸಂಕ್ರಾಂತಿ ಹಬ್ಬ(Makar Sankranti 2022)ವನ್ನು ಜನವರಿ 14ರಂದು ಆಚರಿಸಲಾಗುತ್ತದೆ. ಈ ದಿನ ಸೂರ್ಯ ದೇವನು ಧನು ರಾಶಿಯಿಂದ ಹೊರಟು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಧರ್ಮಗ್ರಂಥಗಳ ಪ್ರಕಾರ ಮಕರ ಸಂಕ್ರಾಂತಿಯಂದು ಸೂರ್ಯ ದೇವರು ಮತ್ತು ಶನಿ ದೇವನನ್ನು ಪೂಜಿಸಲು ಕಾರಣವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ಮಕರ ಸಂಕ್ರಾಂತಿಯಂದು 29 ವರ್ಷಗಳ ನಂತರ ಸೂರ್ಯ ತನ್ನಮಗ(ಶನಿ)ನೊಂದಿಗೆ ಮುಖಾಮುಖಿಯಾಗುತ್ತಿದ್ದಾನೆ.  ಶನಿ ಮತ್ತು ಸೂರ್ಯದೇವನ ನಡುವಿನ ಸಂಬಂಧ(Shani Dev & Surya Dev Relationship) ಏನು ಗೊತ್ತಾ? ಇದರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಿರಿ.

ಇದು ಶನಿ ಮತ್ತು ಸೂರ್ಯ ದೇವರ ನಡುವಿನ ಸಂಬಂಧ

ಪುರಾಣಗಳ ಪ್ರಕಾರ ಸೂರ್ಯದೇವ(Surya Dev)ನು ಸಂಜ್ಞಾ(ಛಾಯಾ)ಳನ್ನು ಮದುವೆಯಾದನು.  ದಕ್ಷಣರಾಜನ ಮಗಳಾದ ಸಂಜ್ಞಾ ಮದುವೆಯ ನಂತರ ತನ್ನ ಅತ್ತೆಯ ಮನೆಯಾದ ಸೂರ್ಯಲೋಕಕ್ಕೆ ತೆರಳಿದಳು. ಸೂರ್ಯನ ಅತಿಯಾದ ತಾಪದಿಂದ ಆಕೆಗೆ ಸಂಸಾರ ಮಾಡಲು ಸಾಧ್ಯವಾಗದೇ ತನ್ನದೇ ನೆರಳಿನ ರೂಪವನ್ನು ಸೃಷ್ಟಿಸಿ ಅದಕ್ಕೆ ಛಾಯಾ ಎಂದು ಹೆರಿಟ್ಟಳು. ಛಾಯಾಳಿಗೆ ಸೂರ್ಯನ ತಾಪದಿಂದ ಯಾವುದೇ ಸಮಸ್ಯೆ ಇರಲಿಲ್ಲ. ಛಾಯಾ ಮತ್ತು ಸೂರ್ಯದೇವನಿಗೆ ಜನಿಸಿದ್ದ ಮಗನೇ ಶನಿ. ಛಾಯಾಳ ನಿಜವಾದ ರೂಪ ಸಂಜ್ಞಾ ಶನಿಯು ಛಾಯಾಳ ಗರ್ಭಧಲ್ಲಿದ್ದಾಗ ಶಿವನ ಕುರಿತು ಕಠಿಣ ತಪಸ್ಸು ಮಾಡಿರುವುದರಿಂದ ತಪಸ್ಸಿನ ತೀರ್ವತೆಗೆ ಶನಿ ಮೈಬಣ್ಣ ಕಪ್ಪಾಯಿತು. ಶನಿ(Shani Dev)ಯನ್ನು ನೋಡಿದ ಸೂರ್ಯ ಈತ ತನ್ನ ಮಗನಲ್ಲವೆಂದು ಛಾಯಾಳ ಮೇಲೆ ಸಂಶಯ ಪಡುತ್ತಾನೆ ಎಂಬುದು ಕಥೆ.

ಇದನ್ನೂ ಓದಿ: Surya Gochar: ಮೂರು ದಿನಗಳ ಬಳಿಕ ಸೂರ್ಯನಂತೆ ಹೊಳೆಯಲಿದೆ ಈ ರಾಶಿಯವರ ಭವಿಷ್ಯ

ತಂದೆ ಸೂರ್ಯನ ಮೇಲೆ ಶನಿದೇವನ ಕೋಪ!

ತನ್ನ ತಾಯಿ ಛಾಯಾಳಿಗೆ ಮಾಡಿದ ಅವಮಾನದಿಂದ ಕೋಪಗೊಂಡು ಶನಿ(Shani Dev Story)ಯು ತನ್ನ ತಂದೆ ಸೂರ್ಯ ದೇವನನ್ನು ದಿಟ್ಟಿಸಿ ನೋಡಿದ. ಅವನ ಶಕ್ತಿಯಿಂದ ಸೂರ್ಯ ದೇವರು ಕಪ್ಪಾಗಿ. ತನ್ನ ಸ್ಥಿತಿಯನ್ನು ನೋಡಿ ಗಾಬರಿಗೊಂಡ ಸೂರ್ಯದೇವ ಶಿವನ ಆಶ್ರಯಕ್ಕೆ ತಲುಪಿದನು. ನಂತರ ಶಿವನು ಸೂರ್ಯದೇವನ ತಪ್ಪನ್ನು ಮನವರಿಕೆ ಮಾಡಿಸಿದನು. ಸೂರ್ಯದೇವ(Surya Dev)ತನ್ನ ಕ್ರಿಯೆಗಳ ಬಗ್ಗೆ ಪಶ್ಚಾತ್ತಾಪಟ್ಟು ಕ್ಷಮೆಯಾಚಿಸಿದನು. ನಂತರ ಅವನು ತನ್ನ ನಿಜವಾದ ರೂಪವನ್ನು ಮರಳಿ ಪಡೆದನು. ಶನಿ ಹುಟ್ಟಿದ ನಂತರ ತಂದೆ ಎಂದಿಗೂ ಆತನೊಂದಿಗೆ ಪುತ್ರ ಪ್ರೀತಿಯನ್ನು ಪ್ರದರ್ಶಿಸಲಿಲ್ಲವೆಂದು ಪುರಾಣ ಕಥೆಗಳಲ್ಲಿ ಉಲ್ಲೇಖಿಸಲಾಗಿದೆ.

ಇದರ ನಂತರ ಶನಿ ತಪಸ್ಸು ಮಾಡಿ ಶಿವನನ್ನು ಸಂತೋಷಪಡಿಸಿದನು. ಶನಿ(Shani Dev And Surya Story)ಯ ತಪ್ಪಿಸಿಗೆ ಮೆಚ್ಚಿದ ಶಿವ ವರ ಕೇಳುವಂತೆ ಕೇಳಿಕೊಂಡಾಗ, ಸೂರ್ಯನು ನನ್ನ ತಾಯಿಯನ್ನು ಅಗೌರವಿಸಿದ್ದಾನೆ. ನೀನು ನನಗೆ ಸೂರ್ಯನಿಗಿಂತ ಹೆಚ್ಚು ಶಕ್ತಿಯುತ ಮತ್ತು ಪೂಜಿಸಲ್ಪಡುವ ವರ ನೀಡಬೇಕೆಂದು ಬೇಡಿಕೊಂಡನು. ಆಗ ಶಿವ ಸಾಮಾನ್ಯ ಮನುಷ್ಯರು, ದೇವರುಗಳು, ರಾಕ್ಷಸರು ಮತ್ತು ಸರ್ಪಗಳು ಕೂಡ ನಿನ್ನ ಹೆಸರಿಗೆ ಹೆದರುತ್ತಾರೆನ್ನುವ ವರ ನೀಡಿದನಂತೆ. 9 ಗ್ರಹಗಳಲ್ಲಿ ನಿನಗೆ ಉತ್ತಮ ಸ್ಥಾನ ನಿನ್ನದಾಗುತ್ತದೆ ಎಂದು ಶಿವನು ಶನಿಗೆ ಹೇಳಿದನೆಂಬ ಉಲ್ಲೇಖಗಳಿವೆ.  

ಇದನ್ನೂ ಓದಿ: Dream Interpretation: ನಿಮ್ಮ ಕನಸಿನಲ್ಲಿ ಪೂರ್ವಜರು ಈ ರೂಪದಲ್ಲಿ ಕಾಣಿಸಿಕೊಂಡರೆ ಏನರ್ಥ..?

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News