Marijunana health effects : ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಗಾಂಜಾವನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಕೆಲವು ದೇಶಗಳಲ್ಲಿ ಇದು ಕಾನೂನು ಬಾಹಿರ. ಆದರೆ ಕೆಲವು ದೇಶಗಳಲ್ಲಿ ಇದನ್ನು ಬಳಸುವವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಭಾರತದಲ್ಲಿಯೂ ಗಾಂಜಾವನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಸಧ್ಯ ಗಾಂಜಾ ಸೇವನೆ ನಂತರ, ಕೆಲವರು ಜೋರಾಗಿ ನಗುತ್ತಾರೆ, ಇಲ್ಲವೆ ಗಂಟೆಗಳ ಕಾಲ ದುಃಖಿತರಾಗಿಯೇ ಇದ್ದು ಬಿಡುತ್ತಾರೆ.. ಈ ರೀತಿ ಏಕೆ ಆಗುತ್ತದೆ ಅಂತ ತಿಳಿಯೋಣ..
ಹೆಚ್ಚು ಗಾಂಜಾ ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬುವುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಏಕೆಂದರೆ ಇದು ನೇರವಾಗಿ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಇನ್ನು ಗಾಂಜಾ ಸೇವನೆ ಮಾಡಿದ ತಕ್ಷಣ ಫಲಿತಾಂಶಗಳು ಗೋಚರಿಸುವುದಿಲ್ಲ. ಸುಮಾರು 30 ನಿಮಿಷಗಳ ನಂತರ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಬೆಲ್ಲದ ಹಾಲು ಕುಡಿದರೆ ಈ 7 ಕಾಯಿಲೆಗಳಿಂದ ಸಿಗುತ್ತೆ ಪರಿಹಾರ
ಅಲ್ಲದೆ, ಗಾಂಜಾ ಸೇವನೆ ನಂತರ ಜನರು ಏಕೆ ನಗುತ್ತಾರೆ ಇಲ್ಲವೇ ಅತೀಯಾಗಿ ಅಳುತ್ತಾರೆ ಅಂತ ನಿಮ್ಗೆ ಗೊತ್ತಾ..? ವಾಸ್ತವವಾಗಿ ಇದಕ್ಕೆ ಕಾರಣವೆಂದರೆ ಡೋಪಮೈನ್ ಹಾರ್ಮೋನ್, ಇದನ್ನು ಸಂತೋಷದ ಹಾರ್ಮೋನ್ ಎಂದೂ ಕರೆಯುತ್ತಾರೆ. ಅದರ ಹೆಚ್ಚಳ ಅಥವಾ ಇಳಿಕೆ ನಮ್ಮ ನಡವಳಿಕೆಯನ್ನು ಬದಲಾಯಿಸುತ್ತದೆ. ಒಬ್ಬ ವ್ಯಕ್ತಿಯು ಗಾಂಜಾವನ್ನು ಸೇವಿಸಿದಾಗ, ಈ ಹಾರ್ಮೋನ್ ಕಾರಣದಿಂದಾಗಿ ಅವನು ನಿರಂತರವಾಗಿ ನಗುತ್ತಿರುವ ಅಥವಾ ನಿರಂತರವಾಗಿ ದುಃಖಿತನಾಗಿರುತ್ತಾನೆ.
ಗಾಂಜಾ ಸೇವನೆ ವ್ಯಕ್ತಿಯ ನರಮಂಡಲದ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ, ಗಾಂಜಾವನ್ನು ತೆಗೆದುಕೊಂಡ ನಂತರ ವ್ಯಸನಿಯು ಅನಿಯಂತ್ರಿತನಾಗಿ ಏನನ್ನಾದರೂ ಮಾಡಲು ಪ್ರಾರಂಭಿಸುತ್ತಾನೆ. ಅವನು ಏನು ಮಾಡುತ್ತಿದ್ದಾನೆ ಎಂಬುವುದರ ಅರಿವು ಅವನಿಗೆ ಇರುವುದಿಲ್ಲ. ಇದು ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು. ಆದ್ದರಿಂದ ಇದರಿಂದ ದೂರವಿರುವುದು ಉತ್ತಮ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.