ಕೊಲೆಸ್ಟ್ರಾಲ್ ಅನ್ನು ಅತ್ಯಂತ ವೇಗವಾಗಿ ಕರಗಿಸುತ್ತವೆ ಈ ಆಹಾರಗಳು.!

Cholesterol Lowering Foods:  ಭಾರತದ ಖ್ಯಾತ ಪೌಷ್ಟಿಕತಜ್ಞ ನಿಖಿಲ್ ವಾಟ್ಸ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಆಹಾರ ಮತ್ತು ಪಾನೀಯಗಳು ಯಾವುವು ಎನ್ನುವುದನ್ನು ತಿಳಿಸಿದ್ದಾರೆ. 

Cholesterol Lowering Foods : ಕೊಲೆಸ್ಟ್ರಾಲ್ ನಮ್ಮ ಜೀವದ ಬಹು ದೊಡ್ಡ ಶತ್ರು ಎಂದರೆ ತಪಲ್ಲ. ಏಕೆಂದರೆ ಇದು ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯಾಘಾತ, ಪರಿಧಮನಿಯ ಕಾಯಿಲೆ ಮತ್ತು ಟ್ರಿಪಲ್ ವೆಸೆಲ್ ಡಿಸೀಸ್ ಅಪಾಯವನ್ನು ಹೆಚ್ಚಿಸುತ್ತದೆ. ಈ ಅಪಾಯವನ್ನು ಕಡಿಮೆ ಮಾಡಬೇಕಾದರೆ, ಆರೋಗ್ಯಕರ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಭಾರತದ ಖ್ಯಾತ ಪೌಷ್ಟಿಕತಜ್ಞ ನಿಖಿಲ್ ವಾಟ್ಸ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಆಹಾರ ಮತ್ತು ಪಾನೀಯಗಳು ಯಾವುವು ಎನ್ನುವುದನ್ನು ತಿಳಿಸಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಸುಲಭ ಆಹಾರವೆಂದರೆ ಬೆಳಗಿನ ಉಪಾಹಾರದಲ್ಲಿ ಓಟ್ಸ್ ಅನ್ನು ಸೇರಿಸುವುದು. ಇದು ಬಹಳಷ್ಟು ಕರಗುವ ಫೈಬರ್ ಅನ್ನು ಹೊಂದಿದ್ದು, ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

2 /5

ಸೇಬುಗಳು, ದ್ರಾಕ್ಷಿಗಳು, ಸ್ಟ್ರಾಬೆರಿಗಳು, ಕಿತ್ತಳೆ ಮತ್ತು ಅನೇಕ ಸಿಟ್ರಸ್ ಹಣ್ಣುಗಳು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವು ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. 

3 /5

ಬೆಂಡೆಕಾಯಿಯಲ್ಲಿ  ಕ್ಯಾಲೋರಿಗಳಲ್ಲಿ ತುಂಬಾ ಕಡಿಮೆಯಿದ್ದು, ಕರಗುವ ಫೈಬರ್ ಹೆಚ್ಚಾಗಿರುತ್ತವೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. 

4 /5

ನೀವು ವಾರಕ್ಕೆ 2 ಬಾರಿ ಹೆಚ್ಚು ಕೊಬ್ಬಿನಾಂಶ ಇರುವ ಮೀನುಗಳನ್ನು ಸೇವಿಸಿದರೆ, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು  ಸಹಾಯವಾಗುತ್ತವೆ.  

5 /5

ಸೋಯಾ ಉತ್ಪನ್ನಗಳ ನಿಯಮಿತ ಸೇವನೆಯು LDL ಅನ್ನು ಕಡಿಮೆ ಮಾಡುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ಸೋಯಾಬೀನ್, ಸೋಯಾ ಮಿಲ್ಕ್ ತೋಫುಗಳಂತಹ ಆಹಾರಗಳನ್ನು ಸೇರಿಸಿಕೊಳ್ಳಬಹುದು. ಇದು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.  ( ಸೂಚನೆ : ಇಲ್ಲಿ ನೀಡಲಾದ  ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)