ಭಿವಾಂಡಿ ಕಟ್ಟಡದ ಕುಸಿತ; ನಾಲ್ವರು ಮರಣ

    

Last Updated : Nov 25, 2017, 12:52 PM IST
ಭಿವಾಂಡಿ ಕಟ್ಟಡದ ಕುಸಿತ; ನಾಲ್ವರು ಮರಣ title=

ಮುಂಬೈ: ಮಹಾರಾಷ್ಟ್ರದ ಭಿವಾಂಡಿ ಕಟ್ಟಡದ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೇರಿದೆ.

ಥಾಣೆ ನ ಬಿವಾಂಡಿ ಪ್ರದೇಶದಲ್ಲಿ ಮೂರು ಅಂತಸ್ತಿನ ಕಟ್ಟಡದ ಒಂದು ಭಾಗವು ಶುಕ್ರವಾರ, ಕುಸಿದುಬಿದ್ದಿದ್ದ ಹಿನ್ನೆಲೆಯಲ್ಲಿ ಆಲ್ಲಿದ್ದ ಜನರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.

ನವಿ ವಾಸ್ಟಿ ಪ್ರದೇಶದ ಕಟ್ಟಡವು ಬೆಳಿಗ್ಗೆ ಸುಮಾರು 9 ಗಂಟೆಗೆ ಕುಸಿದು ಬಿದ್ದಿದೆ ಎಂದು ಪ್ರಾದೇಶಿಕ ವಿಪತ್ತು ನಿರ್ವಹಣೆ ಮುಖ್ಯಸ್ಥ ಸಂತೋಷ್ ಕದಂ ದೃಢಪಡಿಸಿದ್ದಾರೆ. 

ಘಟನೆಯ ನಂತರ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ಎಫ್) ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ತಕ್ಷಣವೇ ಪಾರುಗಾಣಿಕಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಭಿವಾಂಡಿಗೆ ಧಾವಿಸಿದ್ದಾರೆ ಕಾರ್ಯಾಕಾರನೆಯಲ್ಲಿ ತೊಡಗಿದ್ದಾರೆ. 

Trending News