ಘನತ್ಯಾಜ್ಯ ಸಂಸ್ಕರಣೆ ಕುರಿತು ಫ್ರಾನ್ಸ್ ದೇಶಕ್ಕೆ ಅಧ್ಯಯನ ಪ್ರವಾಸ ತೆರಳಿದ ಡಿಸಿಎಂ

ಫ್ರಾನ್ಸ್‌ ದೇಶದಲ್ಲಿನ ಘನ ತ್ಯಾಜ್ಯ ಸಂಸ್ಕರಣಾ ವಿಧಾನದ ಕುರಿತು ಅಧ್ಯಯನ ನಡೆಸಲು ನ.28 ರಿಂದ ಡಿ. 3 ರವರೆಗೆ ಫ್ರಾನ್ಸ್‌ ದೇಶಕ್ಕೆ ಪ್ರವಾಸಕ್ಕೆ ತೆರಳಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್.

Last Updated : Nov 28, 2018, 09:58 AM IST
ಘನತ್ಯಾಜ್ಯ ಸಂಸ್ಕರಣೆ ಕುರಿತು ಫ್ರಾನ್ಸ್ ದೇಶಕ್ಕೆ ಅಧ್ಯಯನ ಪ್ರವಾಸ ತೆರಳಿದ ಡಿಸಿಎಂ title=
File Image

ಬೆಂಗಳೂರು: ಘನತ್ಯಾಜ್ಯ ಸಂಸ್ಕರಣೆ ಕುರಿತು ಅಧ್ಯಯನ ನಡೆಸಲು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಫ್ರಾನ್ಸ್ ದೇಶಕ್ಕೆ ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದಾರೆ.

ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರಾದ  ಡಾ.ಜಿ. ಪರಮೇಶ್ವರ್‌ ಫ್ರಾನ್ಸ್‌ ದೇಶದಲ್ಲಿನ ಘನ ತ್ಯಾಜ್ಯ ಸಂಸ್ಕರಣಾ ವಿಧಾನದ ಕುರಿತು ಅಧ್ಯಯನ ನಡೆಸಲು ನ.28 ರಿಂದ ಡಿ. 3 ರವರೆಗೆ ಫ್ರಾನ್ಸ್‌ ದೇಶಕ್ಕೆ ಪ್ರವಾಸಕ್ಕೆ ತೆರಳಿದ್ದಾರೆ. 

ಈ ಅಧ್ಯಯನ ಪ್ರವಾಸದಲ್ಲಿ ಪರಮೇಶ್ವರ್ ಅವರಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ್‌‌ ಪ್ರಸಾದ್ ಹಾಗೂ ಅಪರ ಮುಖ್ಯಕಾರ್ಯದರ್ಶಿ ಮಹೇಂದ್ರ ಜೈನ್‌ ಸಾಥ್ ನೀಡಲಿದ್ದಾರೆ. 

ಆರು ದಿನಗಳ ಪ್ರವಾಸ ಇದಾಗಿದ್ದು, ಫ್ರಾನ್ಸ್‌ ದೇಶದ ಮಹಾನಗರಗಳಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯಗಳನ್ನು ಸಂಸ್ಕರಣೆ ಮಾಡುವ ವಿಧಾನ ಉತ್ತಮವಾಗಿದ್ದು, ಅವರ ಮಾದರಿಯನ್ನು ಅಧ್ಯಯನ ಮಾಡಲಿದ್ದಾರೆ. 
 

Trending News