ಅಮೆಜಾನ್ ಸೇಲ್‌ನಲ್ಲಿ ಐಫೋನ್ ಸೇರಿದಂತೆ ದುಬಾರಿ ಸ್ಮಾರ್ಟ್‌ಫೋನ್‌ಗಳು ಅತಿ ಕಡಿಮೆ ಬೆಲೆಯಲ್ಲಿ ಲಭ್ಯ

Amazon Great Republic Day Sale 2023:  ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದೆ. ವಿಶೇಷವೆಂದರೆ ಅಮೆಜಾನ್ ಸೇಲ್‌ನಲ್ಲಿ  ಐಫೋನ್ ಸೇರಿದಂತೆ ದುಬಾರಿ ಸ್ಮಾರ್ಟ್‌ಫೋನ್‌ಗಳು ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿವೆ. 

Amazon Great Republic Day Sale 2023: ಪ್ರಸ್ತುತ ಪ್ರಸಿದ್ಧ ಇ-ಕಾಮರ್ಸ್ ವೆಬ್ಸೈಟ್ ಗಳಲ್ಲಿ ರಿಪಬ್ಲಿಕ್ ಡೇ ಸೇಲ್ ಆರಂಭವಾಗಿದೆ. ಫ್ಲಿಪ್‌ಕಾರ್ಟ್ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್‌ ಆರಂಭವಾಗಿದೆ. ಅಂತೆಯೇ ಅಮೆಜಾನ್‌ನಲ್ಲಿ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ನಡೆಯುತ್ತಿದೆ. ಜನವರಿ 15 ರಿಂದ ಈ ಸೇಲ್ ಆರಂಭವಾಗಿದ್ದು ಜನವರಿ 20 ರವರೆಗೆ ನಡೆಯಲಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದೆ. ವಿಶೇಷವೆಂದರೆ ಅಮೆಜಾನ್ ಸೇಲ್‌ನಲ್ಲಿ  ಐಫೋನ್ ಸೇರಿದಂತೆ ದುಬಾರಿ ಸ್ಮಾರ್ಟ್‌ಫೋನ್‌ಗಳು ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

Apple iPhone 12 (128GB) ಬಿಡುಗಡೆಯ ಬೆಲೆ  64,900 ರೂ. ಆಗಿದೆ,  ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಈ ಐಫೋನ್ ಅನ್ನು 55,900 ರೂ.ಗೆ ಖರೀದಿಸಬಹುದು.  ಫೋನ್ ಖರೀದಿಸಲು ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿದರೆ, ನಿಮಗೆ 1,250 ರೂಪಾಯಿ ರಿಯಾಯಿತಿ ಸಿಗುತ್ತದೆ. ಇದರೊಂದಿಗೆ ಈ ಐಫೋನ್ ಬೆಲೆ 54,650 ರೂ.ಗಳಿಗೆ ಲಭ್ಯವಾಗಲಿದೆ. ಆದರೆ, ಈ ಫೋನ್ ಖರೀದಿಯಲ್ಲಿ 18,050 ರೂ.ಗಳ ವಿನಿಮಯ ಕೊಡುಗೆ ಕೂಡ ಲಭ್ಯವಿದೆ. ನಿಮ್ಮ ಹಳೆಯ ಫೋನ್‌ನ ವಿನಿಮಯದಲ್ಲಿ ನೀವು ಇಷ್ಟು ರಿಯಾಯಿತಿ ಪಡೆಯಬಹುದು. ಆದರೆ ಫೋನ್ ಉತ್ತಮ ಸ್ಥಿತಿಯಲ್ಲಿದ್ದರೆ ಮಾತ್ರ ಈ ಕೊಡುಗೆ ಲಭ್ಯವಾಗಲಿದೆ. ಈ ಎಲ್ಲಾ ಕೊಡುಗೆಗಳ ಲಾಭವನ್ನು ಪಡೆಯಲು ನೀವು ಸಮರ್ಥರಾದರೆ ಫೋನ್‌ 36,600 ರೂ.ಗಳಿಗೆ ಲಭ್ಯವಾಗಲಿದೆ.

2 /5

ಸ್ಯಾಮ್‌ಸಂಗ್ ನ ಜನಪ್ರಿಯ  ಫೋನ್ Samsung Galaxy S22 5G ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿದೆ.  ವಾಸ್ತವವಾಗಿ, ಈ ಫೋನ್ ಲಾಂಚಿಂಗ್ ಬೆಲೆ 85,999 ರೂ.ಗಳು. ಆದರೆ ಈ ಸೇಲ್‌ನಲ್ಲಿ ಫೋನ್ 49,999 ರೂ.ಗೆ ಲಭ್ಯವಿದೆ. ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಫೋನ್ ಖರೀದಿಸಿದರೆ ಇದರಲ್ಲಿ 1,250 ರೂ. ಗಳ ತ್ವರಿತ ರಿಯಾಯಿತಿ ಲಭ್ಯವಾಗಲಿದೆ. 

3 /5

ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ 39,990ರೂ. ಮೌಲ್ಯದ iQOO 9 SE 5G ಸ್ಮಾರ್ಟ್‌ಫೋನ್‌ ಅನ್ನು  28,990 ರೂ.ಗಳಿಗೆ ಖರೀದಿಸಬಹುದು. ನೀವು ಈ ಸೇಲ್‌ನಲ್ಲಿ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ 2,250 ರೂ.ವರೆಗೆ ರಿಯಾಯಿತಿ ಸಿಗುತ್ತದೆ. ಇದರ ನಂತರ, 18,050 ರೂಪಾಯಿಗಳ ವಿನಿಮಯ ಕೊಡುಗೆ ಕೂಡ ಲಭ್ಯವಿದ್ದು ಈ ಎಲ್ಲಾ ರಿಯಾಯಿತಿಗಳನ್ನು ಪಡೆಯಲು ಶಕ್ತರಾದರೆ ಫೋನ್ ಅನ್ನು ಕಡಿಮೆ ಬೆಲೆಯಲ್ಲಿ ನಿಮ್ಮದಾಗಿಸಬಹುದು.

4 /5

ಜನಪ್ರಿಯ ಜಲನಿರೋಧಕ ಸ್ಮಾರ್ಟ್‌ಫೋನ್ ಆಗಿರುವ Samsung Galaxy A73 5G ಮೂಲ ಬೆಲೆ 49,999ರೂ.ಗಳು ಆದರೆ, ಈ ಫೋನ್ ಅಮೆಜಾನ್ ಸೇಲ್‌ನಲ್ಲಿ 41,899 ರೂ.ಗಳಿಗೆ ಲಭ್ಯವಿದೆ. ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿ ಮಾಡಿದರೆ 1,250 ರೂ.ಗಳ ರಿಯಾಯಿತಿ ಲಭ್ಯವಿರುತ್ತದೆ. ಅದರ ನಂತರ, ಫೋನ್‌ನಲ್ಲಿ 18,050 ರೂಪಾಯಿಗಳ ಎಕ್ಸ್ಚೇಂಜ್ ಆಫರ್ ಕೂಡ ಲಭ್ಯವಿದೆ.

5 /5

49,990 ರೂ. ಮೌಲ್ಯದ iQOO 9 5G ಸ್ಮಾರ್ಟ್‌ಫೋನ್ ಅನ್ನು ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ 42,990 ರೂ.ಗಳಿಗೆ ಲಭ್ಯವಾಗಲಿದೆ. ಈ ಫೋನ್ ಖರೀದಿಸುವಾಗ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ, ನಿಮಗೆ 1,250 ರೂ ರಿಯಾಯಿತಿ ಸಿಗುತ್ತದೆ. ಇದಲ್ಲದೇ 28,050 ರೂಪಾಯಿಗಳ ಎಕ್ಸ್ ಚೇಂಜ್ ಆಫರ್  ಕೂಡ ಇದರಲ್ಲಿ ಲಭ್ಯವಿದೆ.