Most angry zodiac signs: ಕೆಲವು ಹೆಣ್ಣುಮಕ್ಕಳಿಗೆ ಕೋಪ ಜಾಸ್ತಿ ಇರುತ್ತದೆ. ಅವರನ್ನ ಮದುವೆಯಾಗುವ ಮುನ್ನ ಗಂಡಸರು ಸ್ವಲ್ಪ ಎಚ್ಚರಿಕೆ ವಹಿಸುವುದು ಒಳಿತು. ಏಕೆಂದರೆ ಕೋಪ ಎನ್ನುವುದು ಸಂಸಾರವನ್ನೇ ಕೂಪಕ್ಕೆ ತಳ್ಳುತ್ತದೆ.
Zodiac Signs Women Who Get Angry Easily: ಸಾಮಾನ್ಯವಾಗಿ ಹೆಣ್ಣು-ಗಂಡು ಮದುವೆಯಾಗಬೇಕೆಂದರೆ ಜಾತಕ, ಸಮಯ, ಮುಹೂರ್ತ ಹೀಗೆ ಎಲ್ಲವನ್ನು ನೋಡಲೇಬೇಕು. ಇಬ್ಬರು ಕೂಡಿ ಬಾಳಬೇಕಾದರೆ ಇವರ ರಾಶಿಗಳಲ್ಲಿ ಹೊಂದಾಣಿಕೆ ಆಗುತ್ತದೆಯೇ? ಎನ್ನುವುದು ಬಹಳ ಮುಖ್ಯವಾದ ವಿಷಯ. ಬುದ್ಧಿವಂತಿಕೆಯುಳ್ಳ ಹುಡುಗಿಯರು ಅಂದ್ರೆ ಹುಡುಗರಿಗೆ ತುಂಬಾನೇ ಇಷ್ಟ ಆಗುತ್ತಾರೆ. ಆದರೆ ಕೆಲವು ಮಹಿಳೆಯರಿಗೆ ಕೋಪ ಜಾಸ್ತಿ ಇರುತ್ತದೆ. ಹೀಗಾಗಿ ಅವರ ಕೋಪಕ್ಕೆ ಮಾತ್ರ ಯಾರೂ ಸಹ ತುತ್ತಾಗಬಾರದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಕೆಲವು ಹೆಣ್ಣುಮಕ್ಕಳಿಗೆ ಕೋಪ ಜಾಸ್ತಿ ಇರುತ್ತದೆ. ಅವರನ್ನ ಮದುವೆಯಾಗುವ ಮುನ್ನ ಗಂಡಸರು ಸ್ವಲ್ಪ ಎಚ್ಚರಿಕೆ ವಹಿಸುವುದು ಒಳಿತು. ಏಕೆಂದರೆ ಕೋಪ ಎನ್ನುವುದು ಸಂಸಾರವನ್ನೇ ಕೂಪಕ್ಕೆ ತಳ್ಳುತ್ತದೆ. ಕೋಪದ ಕೈಯಲ್ಲಿ ಬುದ್ಧಿ ಕೊಟ್ಟರೆ ದೊಡ್ಡ ಅನಾಹುತವೇ ಸಂಭವಿಸುತ್ತದೆ. ಹೀಗಾಗಿ ಕೋಪ ಹೊಂದಿರುವ ಮಹಿಳೆಯರನ್ನು ಮದುವೆಯಾಗುವ ಮುನ್ನ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಒಳಿತು. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ನಾಲ್ಕು ರಾಶಿಯ ಹೆಣ್ಣು ಮಕ್ಕಳಿಗೆ ಕೋಪ ಜಾಸ್ತಿ ಇರುತ್ತದಂತೆ.
ಮೇಷ ರಾಶಿಯ ಹೆಣ್ಣು ಮಕ್ಕಳಿಗೆ ಕುಜ ಇರುವುದರಿಂದ ಕೋಪ ಜಾಸ್ತಿ ಇರುತ್ತದೆ. ಆದರೆ ಇವರು ಉತ್ತಮ ನಾಯಕತ್ವ ಗುಣವನ್ನು ಹೊಂದಿರುತ್ತಾರೆ. ಎಲ್ಲವನ್ನು ತಮ್ಮ ಕಂಟ್ರೋಲ್ನಲ್ಲಿಯೇ ಇರಿಸಲು ಇವರು ಬಯಸುತ್ತಾರಂತೆ.
ವೃಶ್ಚಿಕ ರಾಶಿಯ ಹೆಣ್ಣು ಮಕ್ಕಳು ಪುರುಷ ಗುಣ ಹೊಂದಿದ್ದು, ಬಹಳ ಸಣ್ಣ ವಿಷಯಗಳನ್ನು ದೊಡ್ಡದಾಗಿ ತೆಗೆದುಕೊಳ್ಳುತ್ತಾರೆ. ಇವರು ಸ್ವತಂತ್ರವಾಗಿ ಇರುವುದಕ್ಕೆ ಬಯಸುತ್ತಾರೆ. ತಮ್ಮ ಶತ್ರುಗಳ ವಿರುದ್ಧ ಹಗೆ ಸಾಧಿಸುವುದರಲ್ಲಿ ಇವರು ಎತ್ತಿದ ಕೈ. ಈ ರಾಶಿಯ ಹೆಣ್ಣುಮಕ್ಕಳಿಗೆ ಸ್ವಲ್ಪ ಅಹಂಕಾರ ಮತ್ತು ಕೋಪ ಜಾಸ್ತಿ ಇರುತ್ತದಂತೆ.
ಮಕರ ರಾಶಿಯ ಹಣ್ಣುಮಕ್ಕಳಿಗೂ ಸಹ ಧೈರ್ಯ ತುಂಬಾ ಹೆಚ್ಚಿರುತ್ತದಂತೆ. ಇವರ ಬಳಿ ಯಾರಾದರೂ ಜಾಸ್ತಿ ಮಾತನಾಡಿದರೆ ಹಲ್ಲು ಮುರಿದು ಬಿಡುತ್ತಾರಂತೆ. ಇವರಿಗೆ ಹುಟ್ಟಿನಿಂದಲೂ ಧೈರ್ಯ ತುಂಬಾನೇ ಇರುತ್ತದೆ. ಹೀಗಾಗಿ ಇವರ ಬಳಿ ನೀವು ತುಂಬಾ ನಯವಾದ ಮಾತುಗಳನ್ನು ಆಡಿದರೆ ಖಂಡಿತ ಅಲ್ಲೇ ಸಿಕ್ಕಿ ಬೀಳುತ್ತೀರಿ. ಹೀಗಾಗಿ ಇವರೊಂದಿಗೆ ಬಹಳ ಎಚ್ಚರದಿಂದ ಇರಬೇಕು.
ಕುಂಭ ರಾಶಿಯವರು ಮನಸ್ಸಿನಲ್ಲಿ ಗೌಪ್ಯಾವಾಗಿ ವಿಷಯಗಳನ್ನ ಇಟ್ಟುಕೊಳ್ಳುತ್ತಾರಂತೆ. ಯಾರಿಗೂ ತಮ್ಮ ಸೀಕ್ರೆಟ್ ಅನ್ನು ತಿಳಿಸುವುದಕ್ಕೆ ಸಾಧ್ಯವಿಲ್ಲ. ಪುರುಷರನ್ನು ತಮ್ಮ ಅಸ್ತಿತ್ವಕ್ಕೆ ತೆಗೆದುಕೊಳ್ಳುವುದರಲ್ಲಿ ಹೆಚ್ಚು ಮುನ್ನುಗ್ಗುತ್ತಾರೆ. ಕೋಪ ಜಾಸ್ತಿ ಇದ್ದರೂ ಸಹ ಇವರು ಚೆನ್ನಾಗಿ ಸಂಸಾರ ನಡೆಸುತ್ತಾರೆಂದು ಹೇಳಲಾಗುತ್ತದೆ.