ಬೆಂಗಳೂರು: ಚಂದನವನದ ಮಂದಿ ಸ್ವಲ್ಪ ಫ್ರೀ ಮಾಡ್ಕೊಂಡು ಚಿನ್ನಸ್ವಾಮಿ ಮೈದಾನದಲ್ಲಿ ಕ್ರಿಕೆಟ್ ಮ್ಯಾಚ್ನಲ್ಲಿ ಬ್ಯುಸಿಯಾಗಿದ್ದಾರೆ. KCC 3ನೇ ಆವೃತ್ತಿಯು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರಂಭಗೊಂಡಿದ್ದು, ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಚಂದನವನದ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ. ಕನ್ನಡದ ನಟ-ನಟಿಯರು ಕ್ರಿಕೆಟ್ ಬಗ್ಗೆ ತುಸು ಜಾಸ್ತಿಯೇ ಆಸಕ್ತಿ ತೋರಿಸಿದ್ದಾರೆ.
ಕಿಚ್ಚ ಸುದೀಪ್, ಡಾಲಿ ಧನಂಜಯ್, ಗಣೇಶ್, ಶಿವರಾಜ್ಕುಮಾರ್, ಧ್ರುವ ಸರ್ಜಾ ಮುಂತಾದ ಸ್ಟಾರ್ಗಳು ಕನ್ನಡ ಚಲನಚಿತ್ರ ಕಪ್ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಂದು ಕೆಸಿಸಿ ಪಂದ್ಯಗಳು ಆರಂಭವಾಗಿವೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮ್ಯಾಚ್ ನಡೆಯುತ್ತಿದೆ.
ಇದನ್ನೂ ಓದಿ: BICFF : "ಅಪ್ಪು ಮಕ್ಕಳ ಚಲನಚಿತ್ರೋತ್ಸವ" ಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಚಾಲನೆ
6 ತಂಡಗಳ ನಡುವೆ ಕೆಸಿಸಿ ಫೈಟ್ ಏರ್ಪಡಲಿದೆ. ಕನ್ನಡದ ಸೆಲೆಬ್ರಿಟಿಗಳ ಜೊತೆ ಅಂತಾರಾಷ್ಟ್ರೀಯ ಆಟಗಾರರು ಕೂಡ ಫೀಲ್ಡ್ಗೆ ಇಳಿದಿದ್ದಾರೆ. ಫೆಬ್ರವರಿ 24 ಮತ್ತು 25ರಂದು 2 ದದಿನಗಳು ಮ್ಯಾಚ್ ನಡೆಯಲಿದೆ. 2 ಗ್ರೂಪ್ನ 6 ತಂಡಗಳ ನಡುವೆ ಹಣಾಹಣಿ ನಡೆಯುತ್ತಿದೆ. A ಗ್ರೂಪ್ನಲ್ಲಿ ಕದಂಬ ಲಯನ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್, ವಿಜಯನಗರ ಪ್ಯಾಟ್ರಿಯಾಟ್ಸ್ ತಂಡಗಳಿವೆ. B ಗ್ರೂಪ್ನಲ್ಲಿ ಗಂಗಾ ವಾರಿಯರ್ಸ್, ಹೊಯ್ಸಳ ಈಗಲ್ಸ್, ಒಡೆಯರ್ ಚಾರ್ಜಸ್ ಟೀಂಗಳಿವೆ.
ಫೆಬ್ರವರಿ 24ರ ಹೊಯ್ಸಳ ಈಗಲ್ಸ್ vs ಒಡೆಯರ್ ಚಾರ್ಜರ್ಸ್, ಗಂಗಾ ವಾರಿಯರ್ಸ್ vs ಹೊಯ್ಸಳ ಈಗಲ್ಸ್, ಹೊಯ್ಸಳ ಈಗಲ್ಸ್ vs ಒಡೆಯರ್ ಚಾರ್ಜರ್ಸ್, ಕದಂಬ ಲಯನ್ಸ್ vs ರಾಷ್ಟ್ರಕೂಟ ಪ್ಯಾಂಥರ್ಸ್ ನಡುವೆ ಪಂದ್ಯಗಳು ನಡೆಯಲಿವೆ. ಫೆಬ್ರವರಿ 25ರಂದು ವಿಜಯನಗರ ಪೇಟ್ರಿಯಾಟ್ಸ್ vs ಕದಂಬ ಲಯನ್ಸ್, ಗಂಗಾ ವಾರಿಯರ್ಸ್ vs ಒಡೆಯರ್ ಚಾರ್ಜರ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್ vs ವಿಜಯನಗರ ಪೇಟ್ರಿಯಾಟ್ಸ್ ತಂಡಗಳು ನಡುವೆ ಪಂದ್ಯ ಇರಲಿದೆ. 30 ದೇಶಗಳಲ್ಲಿ ಈ ಪಂದ್ಯಾವಳಿ ಪ್ರಸಾರ ಆಗಲಿದೆ.
ಇದನ್ನೂ ಓದಿ: ಪ್ರಜಾಪ್ರಭುತ್ವದ ಮಹತ್ವ ಸಾರುವ "ಪ್ರಜಾರಾಜ್ಯ" ಚಿತ್ರ ಮಾರ್ಚ್ 3 ರಂದು ತೆರೆಗೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.