Silver Foil in Sweets: ಸಿಹಿತಿಂಡಿಗಳ ಮೇಲಿರುವ ಬೆಳ್ಳಿಯ ಲೇಪನ ಮಾಂಸಹಾರಿಯೇ?

Silver Foil in Sweets: ಸಾಮಾನ್ಯವಾಗಿ ಬೇಕರಿಗಳಿಂದ ಸಿಹಿತಿಂಡಿಗಳನ್ನು ಖರೀದಿಸುವಾಗ ಗಮನಿಸಿರುತ್ತೀರಿ. ಕೆಲವೊಂದು ತಿಂಡಿಗಳ ಮೇಲೆ ಸುಂದರವಾದ ಬೆಳ್ಳಿಯ ಲೇಪನವನ್ನು ಮಾಡಿರುತ್ತಾರೆ. ಆದರೆ ಕೆಲವರು ಇದನ್ನು ಮಾಂಸದಿಂದ ತಯಾರಿಸಲಾಗುತ್ತದೆ ಎಂದು ಹೇಳುತ್ತಾರೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂದು ತಿಳಿದುಕೊಳ್ಳೋಣ.

1 /6

ಸಾಮಾನ್ಯವಾಗಿ ಬೇಕರಿಗಳಿಂದ ಸಿಹಿತಿಂಡಿಗಳನ್ನು ಖರೀದಿಸುವಾಗ ಗಮನಿಸಿರುತ್ತೀರಿ. ಕೆಲವೊಂದು ತಿಂಡಿಗಳ ಮೇಲೆ ಸುಂದರವಾದ ಬೆಳ್ಳಿಯ ಲೇಪನವನ್ನು ಮಾಡಿರುತ್ತಾರೆ. ಆದರೆ ಕೆಲವರು ಇದನ್ನು ಮಾಂಸದಿಂದ ತಯಾರಿಸಲಾಗುತ್ತದೆ ಎಂದು ಹೇಳುತ್ತಾರೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂದು ತಿಳಿದುಕೊಳ್ಳೋಣ.

2 /6

ಬೆಳ್ಳಿ ಲೇಪನವನ್ನು ಜೈವಿಕ ಸಕ್ರಿಯವಲ್ಲದ ಬೆಳ್ಳಿಯ ತುಂಡುಗಳನ್ನು ಹಾಕುವ ಮೂಲಕ ತಯಾರಿಸಲಾಗುತ್ತದೆ. ಬಳಿಕ ಅದನ್ನು ಪೇಪರ್’ಗಳ ನಡುವೆ ಇರಿಸಲಾಗುತ್ತದೆ.

3 /6

ಈ ಬೆಳ್ಳಿಯ ಲೇಪನವು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇದು ಆರೋಗ್ಯಕ್ಕೆ ಉತ್ತಮವಾಗಿದ್ದು ಶುದ್ಧ, ತಿನ್ನಬಹುದಾದ ವಸ್ತುವಾಗಿದೆ.

4 /6

ಈ ಬೆಳ್ಳಿಯ ಲೇಪನ ಶುದ್ಧವೇ ಎಂದು ಪರಿಶೀಲಿಸಲು, ನಿಮ್ಮ ಬೆರಳುಗಳಿಂದ ಉಜ್ಜಿಲು ಪ್ರಯತ್ನಿಸಿ. ಆಗ ತಕ್ಷಣ ತುಂಡುಗಳಾಗಿ ಒಡೆದರೆ, ಅದು ಶುದ್ಧ ಎಂಬರ್ಥವನ್ನು ನೀಡುತ್ತದೆ. ತುಂಡಾಗದಿದ್ದರೆ ಅಲ್ಯೂಮಿನಿಯಂ ಅನ್ನು ಅದರಲ್ಲಿ ಬೆರೆಸಲಾಗಿದೆ ಎಂಬರ್ಥವನ್ನು ನೀಡುತ್ತದೆ.

5 /6

ಬೆಳ್ಳಿಯ ಲೇಪನದಲ್ಲಿ ಕಲಬೆರಕೆ ಇದೆಯೇ ಇಲ್ಲವೇ ಎಂದು ಪರೀಕ್ಷಿಸಲು ಅದರ ಸಣ್ಣ ತುಂಡಿಗೆ ಬೆಂಕಿ ಹಚ್ಚಿ. ಅದು ಸಣ್ಣ ಚೆಂಡಾಗಿ ಮಾರ್ಪಟ್ಟರೆ ಕಲಬೆರಕೆ ಇಲ್ಲ ಎಂದು ಅರ್ಥ.

6 /6

2016 ರಲ್ಲಿ, ಎಫ್ ಎಸ್ ಎಸ್ ಎ ಐ ಪ್ರಾಣಿ ಬಳಕೆಯನ್ನು ನಿಷೇಧಿಸಿತು.  ಅಂದಿನಿಂದ ಬೆಳ್ಳಿಯ ಲೇಪನದಲ್ಲಿ ನಾನ್-ವೆಜ್ ಬಳಸಲಾಗುತ್ತಿಲ್ಲ. ಈಗ ನೀವು ಯಾವುದೇ ಸಂಶಯವಿಲ್ಲದೆ ಸಿಹಿತಿಂಡಿಗಳನ್ನು ಸೇವಿಸಬಹುದು.