ಅನೇಕ ಜನರು ತಿಂಗಳಿಗೊಮ್ಮೆ ಶಾಪಿಂಗ್ ಮಾಡುತ್ತಾ ಹೊಸ ಬಟ್ಟೆಗಳನ್ನು ಖರೀದಿ ಮಾಡುತ್ತಾರೆ. ಆದರೆ ಕೆಲವರಿಗೆ ತಮ್ಮ ಒಳ ಉಡುಪಗಳ ಬಗ್ಗೆ ಹೆಚ್ಚಿನ ಮಾಹಿತಿ ಇರೋದಿಲ್ಲ. ಹೀಗಾಗಿ ಹರಿದ ಒಳ ಉಡುಪುಗಳನ್ನು ವರ್ಷಪೂರ್ತಿ ಹಾಕುತ್ತಾರೆ. ಆದರೆ ಅವುಗಳು ನಿಮ್ಮ ಆರೋಗ್ಯದ ಮೇಲೇ ಭಾರೀ ಪರಿಣಾಮ ಬೀರಬಹುದು.
'ಹೆಲ್ತ್ ಡಾಟ್ ಕಾಮ್'ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ನೀವು ಪ್ರತಿದಿನ ನಿಮ್ಮ ಒಳ ಉಡುಪುಗಳನ್ನು ಬದಲಾಯಿಸಬೇಕು. ಒಮ್ಮೆ ಧರಿಸಿದ ಒಳಉಡುಪುಗಳನ್ನು ತೊಳೆಯದೆ ಧರಿಸಬಾರದು.
ದೇಹ ಮತ್ತು ಚರ್ಮದ ಆರೈಕೆಯ ದೃಷ್ಟಿಕೋನದಿಂದ, ಹಳೆಯ ಒಳ ಉಡುಪುಗಳನ್ನು ಎಸೆದು ಹೊಸದನ್ನು ಖರೀದಿಸಬೇಕು.
ತುಂಬಾ ಹಳೆಯ ಒಳ ಉಡುಪುಗಳು ದೇಹದಲ್ಲಿ ಅಲರ್ಜಿಗಳು ಮತ್ತು ಸೋಂಕುಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.
ನಿಮ್ಮ ಖಾಸಗಿ ಅಂಗಗಳ ಸುತ್ತಲಿನ ಪ್ರದೇಶವನ್ನು ನೈರ್ಮಲ್ಯವಾಗಿಡಲು ಒಳ ಉಡುಪುಗಳನ್ನು ಬದಲಾಯಿಸುತ್ತಿರಬೇಕು. ದೇಹದಲ್ಲಿನ ಬದಲಾವಣೆಯಿಂದಾಗಿ ಒಳ ಉಡುಪುಗಳ ಫಿಟ್ಟಿಂಗ್ ಕೂಡ ಬದಲಾಗುತ್ತದೆ. ಈ ಅನುಭವ ನಿಮಗೆ ಬಂದಾಗ ಹೊಸ ಒಳ ಉಡುಪುಗಳನ್ನು ಖರೀದಿಸಬೇಕು ಎಂದು ತಜ್ಞರು ಹೇಳುತ್ತಾರೆ.
NYU ಸ್ಕೂಲ್ ಆಫ್ ಮೆಡಿಸಿನ್’ನ ಪ್ರೊಫೆಸರ್ ಫಿಲಿಪ್ ಟೈರ್ನೊ ಹೇಳುವಂತೆ, ಯಾವುದೇ ಒಳ ಉಡುಪುಗಳಿಗೆ ಎಕ್ಸ್’ಪೆರಿ ಡೇಟ್ ಇಲ್ಲ. ಆದರೆ ಒಳ ಉಡುಪುಗಳು ಸಡಿಲವಾಗಿದ್ದರೆ ಅಥವಾ ಅವುಗಳಲ್ಲಿ ರಂಧ್ರಗಳಿದ್ದರೆ ಅದು ನಿಮ್ಮ ದೇಹಕ್ಕೆ ಅಲರ್ಜಿಯಂತಹ ಅಪಾಯವನ್ನು ತಂದೊಡ್ಡಬಹುದು.
ಹಳೆಯ ಒಳ ಉಡುಪುಗಳಲ್ಲಿ ತೇವಾಂಶ ಇದ್ದರೆ, ಅಲ್ಲಿ ಸಾಂಕ್ರಾಮಿಕ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ. ಅದು ನಿಮ್ಮ ದೇಹಕ್ಕೆ ಮತ್ತು ಖಾಸಗಿ ಭಾಗಕ್ಕೆ ಸೋಂಕುಗಳನ್ನು ತಂದೊಡ್ಡಬಹುದು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ವರದಿಗಳನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)