ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದರೊಂದಿಗೆ ಕಾರು ತಯಾರಕರು ಕೂಡ ಹೊಸ ಹೊಸ ಆಯ್ಕೆಗಳೊಂದಿಗೆ ವಾಹನಗಳನ್ನು ರಸ್ತೆಗಿಳಿಸುತ್ತಿದ್ದಾರೆ. ಈ ಮಧ್ಯೆ, ಜರ್ಮನಿಯ ಪ್ರಮುಖ ಕಾರು ತಯಾರಕ ವೋಕ್ಸ್ವ್ಯಾಗನ್ ಕೂಡಾ ಈ ವಿಭಾಗಕ್ಕೆ ಪ್ರವೇಶಿಸಲುಸಿದ್ಧತೆ ನಡೆಸಿದೆ. ಕಂಪನಿಯು ತನ್ನ ಐಡಿ 4 ಎಲೆಕ್ಟ್ರಿಕ್ ಕ್ರಾಸ್ಒವರ್ (ವೋಕ್ಸ್ವ್ಯಾಗನ್ ಐಡಿ.4) ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.