Karnataka Election Result 2023: ಮಡಿಕೇರಿಯಲ್ಲಿ ಗೆಲುವಿನ ನಗೆ ಬೀರಿದ ಕೈ ಅಭ್ಯರ್ಥಿಗಳು

Karnataka Election Result 2023 : ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಕೊಡಗು ಜಿಲ್ಲೆಯ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಯನ್ನು ಇಲ್ಲಿ ಪಡೆಯಿರಿ.

Written by - Ranjitha R K | Last Updated : May 13, 2023, 05:07 PM IST
  • ಕೊಡಗಿನಲ್ಲಿ ಕೈ ಅಭ್ಯರ್ಥಿಗಳಿಗೆ ಗೆಲುವು
  • ಕಮಲ ಬಿಟ್ಟು ಕೈ ಹಿಡಿದ ಮತದಾರರು
  • ಗೆಲುವಿನ ಅಲೆಯಲ್ಲಿ ಕಾಂಗ್ರೆಸ್
Karnataka Election Result 2023: ಮಡಿಕೇರಿಯಲ್ಲಿ ಗೆಲುವಿನ ನಗೆ ಬೀರಿದ ಕೈ ಅಭ್ಯರ್ಥಿಗಳು   title=

Karnataka Election Result 2023 : ಕೊಡಗು ಜಿಲ್ಲೆಯ ವಿರಾಜಪೇಟೆ ಮತ್ತು  ಮಡಿಕೇರಿ ಎರಡೂ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿವೆ. ವಿರಾಜಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪೊನ್ನಣ್ಣ ಗೆಲುವು ಸಾಧಿಸಿದ್ದಾರೆ.  ಮಡಿಕೇರಿಯಲ್ಲಿ ಕಾಂಗ್ರೆಸ್ ನ ಡಾ.ಮಂಥರ್ ಗೌಡ ಗೆಲುವಿನ ನಗೆ ಬೀರಿದ್ದಾರೆ. 

ಮಡಿಕೇರಿ ವಿಧಾನಸಭಾ ಕ್ಷೇತ್ರದ ಫಲಿತಾಂಶ ಹೇಗಿದೆ : 

ಕಾಂಗ್ರೆಸ್ ನ ಡಾ.ಮಂಥರ್ ಗೌಡ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್‌ ಅವರನ್ನು ಸೋಲಿಸಿದ್ದಾರೆ. 
ಅಭ್ಯರ್ಥಿಗಳು ಪಡೆದ ಮತಗಳು : 
ಕಾಂಗ್ರೆಸ್ - ಡಾ.ಮಂಥರ್ ಗೌಡ - 83949

ಬಿಜೆಪಿ- ಅಪ್ಪಚ್ಚು ರಂಜನ್‌ ಎಂ.ಪಿ. - 79249
ಜೆ ಡಿ (ಎಸ್) -  ಎನ್.ಎಂ.ಮುತ್ತಪ್ಪ - 6109

ವಿರಾಜಪೇಟೆ ವಿಧಾನಸಭಾ ಕ್ಷೇತ್ರ

ಇಲ್ಲಿ ಕೂಡಾ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್‌.ಪೊನ್ನಣ್ಣ ಬಿಜೆಪಿಯ ಕೆಜಿ ಬೋಪಯ್ಯ ಅವರನ್ನು ಪರಾಭವಗೊಳಿಸಿದ್ದಾರೆ. 

ಅಭ್ಯರ್ಥಿಗಳು ಪಡೆದ ಮತಗಳು : 

ಕಾಂಗ್ರೆಸ್ - ಎ.ಎಸ್‌.ಪೊನ್ನಣ್ಣ -83128
ಬಿಜೆಪಿ - ಕೆಜಿ ಬೋಪಯ್ಯ  - 78397
ಜೆ ಡಿ (ಎಸ್) - ಮನ್ಸೂರ್ ಅಲಿ -1121

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News