Astrology: ಈ ರಾಶಿಯ ಹುಡುಗಿಯರು ತುಂಬಾ ಅದೃಷ್ಟವಂತರು

                                    

Lucky Zodiac Girls: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯ ಹುಡುಗಿಯರನ್ನು ತುಂಬಾ ಅದೃಷ್ಟವಂತರು ಎಂದು ಬನ್ನಿಸಲಾಗುತ್ತದೆ. ಇವರು ಕಿರುಬೆರಳಿನಲ್ಲೇ ಜಗತ್ತನ್ನು ಕುಣಿಸಬಲ್ಲ ಚಾಣಾಕ್ಷತೆಯನ್ನು ಹೊಂದಿರುತ್ತಾರೆ ಎಂದು ಸಹ ಹೇಳಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಜ್ಯೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಯ ಜನ್ಮ ದಿನಾಂಕ, ಸ್ಥಳ, ಸಮಯದ ಆಧಾರದ ಮೇಲೆ ಆ ವ್ಯಕ್ತಿಯ ಗುಣ, ಸ್ವಭಾವವನ್ನೂ ವಿವರಿಸಲಾಗುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯ ಹುಡುಗಿಯರನ್ನು ತುಂಬಾ ಅದೃಷ್ಟವಂತರು ಎಂದು ಬನ್ನಿಸಲಾಗುತ್ತದೆ. ಇವರು ಕಿರುಬೆರಳಿನಲ್ಲೇ ಜಗತ್ತನ್ನು ಕುಣಿಸಬಲ್ಲ ಚಾಣಾಕ್ಷತೆಯನ್ನು ಹೊಂದಿರುತ್ತಾರೆ ಎಂದು ಸಹ ಹೇಳಲಾಗುತ್ತಿದೆ. ಆ ಅದೃಷ್ಟವಂತ ರಾಶಿಗಳು ಯಾವುವು ಎಂದು ತಿಳಿಯೋಣ...   

2 /5

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ ರಾಶಿಯ ಹುಡುಗಿಯರನ್ನು ತುಂಬಾ ಬುದ್ದಿವಂತರು ಎಂದು ಹೇಳಲಾಗುತ್ತದೆ. ಈ ರಾಶಿಯ ಹುಡುಗಿಯರ ವಿಶೇಷತೆ ಎಂದರೆ ಯಾವುದೇ ಕೆಲಸವನ್ನಾದರೂ ಇವರು ಬಹಳ ಬುದ್ದಿವಂತಿಕೆಯಿಂದ ಅಷ್ಟೇ ಸುಲಭವಾಗಿ ಮಾಡಿ ಮುಗಿಸುತ್ತಾರೆ. ಆದಾಗ್ಯೂ, ಕೆಲವೊಮ್ಮೆ ಇವರ ಸೋಮಾರಿತನವೇ ಇವರಿಂದ ಅವಕಾಶಗಳು ಕೈ ತಪ್ಪುವಂತೆ ಮಾಡಬಹುದು. 

3 /5

ಕರ್ಕಾಟಕ ರಾಶಿಯ ಹುಡುಗಿಯರು ಸ್ವಭಾವತಃ ತುಂಬಾ ಶಾಂತಚಿತ್ತರಾಗಿ ಕಾಣುತ್ತಾರೆ. ಆದರೆ, ಇವರು ಮನಸ್ಸಿನಲ್ಲಿ ತುಂಬಾ ತೀಕ್ಷ್ಣಮತಿಗಳು. ಯಾವುದೇ ವಿಚಾರವನ್ನಾದರೂ ಬಹಳ ಬೇಗ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಈ ರಾಶಿಯವರಲ್ಲಿದೆ. ಇವರು ಹೆಚ್ಚಾಗಿ ಭವಿಷ್ಯದ ಬಗ್ಗೆ ಯೋಚಿಸಿ ನಿರ್ಧಾರ ಕೈಗೊಳ್ಳುವುದರಿಂದ ಇವರ ಗುರಿ ಸಾಧನೆ ಸುಲಭ. ಆದಾಗ್ಯೂ, ಅತಿಯಾದ ಆಲೋಚನೆ ಕೆಲವೊಮ್ಮೆ ಇವರ ಕೆಲಸವನ್ನು ಹಾಳು ಮಾಡುವ ಸಾಧ್ಯತೆಯೂ ಇದೆ. 

4 /5

ಜ್ಯೋತಿಷ್ಯ ಶಾಸ್ತ್ರದಲ್ಲಿ, ಸೂರ್ಯನ ಅಧಿಪತಿಯ ರಾಶಿಯಾದ ಸಿಂಹ ರಾಶಿಯವರಲ್ಲಿ ಅಹಂ ಕೊಂಚ ಹೆಚ್ಚಾಗಿಯೇ ಕಂಡು ಬರುತ್ತದೆ. ಇವರು ಯಾವುದೇ ಸಣ್ಣ ವಿಷಯವನ್ನು ಸಹ ತುಂಬಾ ದೊಡ್ಡದಾಗಿ ಬಿಂಬಿಸುತ್ತಾರೆ. ಯಾವುದೇ ಕೆಲಸದಲ್ಲಿ ಇವರು ನಿಷ್ಠಾವಂತರಾಗಿದ್ದು, ವೃತ್ತಿ ರಂಗದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಇವರ ದೌರ್ಬಲ್ಯವೆಂದರೆ ಇತರರ ಮಾತುಗಳಲ್ಲಿ ತಲೆದೂರಿಸುವುದು.   

5 /5

ವೃಶ್ಚಿಕ ರಾಶಿಯವರ ಮನಸ್ಸು ತುಂಬಾ ಸೂಕ್ಷ್ಮ ಹಾಗೂ ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಇವರು ಯಾವುದೇ ಕೆಲಸವನ್ನು ಶಾಂತವಾಗಿ ಮಾಡುವುದರಿಂದ ಯಶಸ್ಸು ಎಂಬ ಮಂತ್ರವನ್ನು ಜಪಿಸುವವರು. ಹಾಗಾಗಿಯೇ, ಅದರ ಆಳ, ಅಗಲ ತಿಳಿದ ನಂತರವೇ ಕೆಲಸವನ್ನು ಆರಂಭಿಸುತ್ತಾರೆ. ವೃಶ್ಚಿಕ ರಾಶಿಯ ಹುಡುಗಿಯರು ಒಳ್ಳೆಯ ಸ್ನೇಹಿತೆ ಹಾಗೂ ಪತಿಯ ಕಷ್ಟ-ಸುಖಗಳಲ್ಲಿ ಜೊತೆಯಾಗಿ ನಿಲ್ಲುವ, ಎಂತಹದ್ದೇ ಸಂದರ್ಭದಲ್ಲೂ ಜೊತೆಗಿರುವವರಿಗೆ ಆಧಾರವಾಗಿ ನಿಲ್ಲುವ ಶಕ್ತಿ ಎಂತಲೇ ಹೇಳಬಹುದು.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.