ಗಂಧದ ಗುಡಿ ಪ್ರವೇಶಿಸಿದ ಮುಂಬೈ ಹುಡುಗಿ ಪ್ರಾಚಿ ಶರ್ಮ..! ಫೋಟೋಸ್‌ ನೋಡಿ

Prachi sharma in Redram Movie : ಚಂದನವನಕ್ಕೆ ಬೇರೆ ಭಾಷೆಯ ನಟಿಯರು ಕಾಲಿಟ್ಟು ನಂತರ ಬಹುಬೇಡಿಕೆ ನಟಿಯರಾಗಿ ಹೊರಹೊಮ್ಮುತ್ತಿದ್ದಾರೆ. ಕನ್ನಡ ಮಣ್ಣಿನ ಗುಣವೇ ಅಂತಹದ್ದು ಬಿಡಿ. ಇದೀಗ ಮುಂಬೈ ಮೂಲಕ ನಟಿಯೊಬ್ಬರು ಮೊದಲ ಬಾರಿಗೆ ಸ್ಯಾಂಡಲ್‌ವುಡ್‌ ಸಿನಿಮಾ ʼರೆಡ್ರಮ್‌ʼನಲ್ಲಿ ನಟಿಸುವ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

1 /5

ಹಲವು ಹೊಸ ನಟಿಯರು ಚಿತ್ರ ರಂಗಕ್ಕೆ ಬರುತ್ತರುವ ಈ ಸಮಯದಲ್ಲಿ ಪ್ರಾಚಿ ಶರ್ಮ ತಮ್ಮ ನಟನಾ ಕೌಶಲ್ಯದಿಂದ ಕನ್ನಡ ಸಿನಿ ರಸಿಕರ ಮನೆ ಮನದಲ್ಲಿ ನೆಲೆಸುವಂತಾಗಲಿ.  

2 /5

ಇದಲ್ಲದೆ ಇನ್ನೊಂದು ಹೆಸರಿಡದ ಬಹು ತಾರಾಗಣದ, ದೊಡ್ಡ ಬಜೆಟ್ ನ ಚಿತ್ರಕ್ಕೆ ಕೂಡ ಆಯ್ಕೆ ಆಗಿದ್ದಾರೆ. ಹಾಗೆ, ಹಲವು ಚಿತ್ರಗಳಿಗೆ ಮಾತುಕತೆ ಸಹ ನಡೆಯುತ್ತಿದೆ ಎಂದು ಪ್ರಾಚಿ ಶರ್ಮ ತಿಳಿಸಿದ್ದಾರೆ.   

3 /5

ಕನ್ನಡ ಭಾಷೆಯನ್ನು ಬೇಗ ಕಲಿಯುತ್ತಿರುವ ಪ್ರಾಚಿ ಶರ್ಮ, ಆಗಲೇ ʼಸ್ವಾತಿ ನಕ್ಷತ್ರʼ ಎಂಬ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಚಿತ್ರೀಕರಣ ಜುಲೈನಲ್ಲಿ ಆರಂಭವಾಗಲಿದೆ.   

4 /5

ತೆಲುಗು ಚಿತ್ರ ʼಜಿಲ್ಲಾ ಪರಿಷತ್ ಉನ್ನತ ಪಾಠಶಾಲಾʼ ಮೂಲಕ ಬಣ್ಣ ಹಚ್ಚಿದ ಅನುಭವವಿರುವ ಪ್ರಾಚಿ ಶರ್ಮ, ಈಗ ಕೌಟಿಲ್ಯ ಸಿನೆಮಾಸ್ ಹಾಗೂ ಹನಿ ಚೌಧರಿ ನಿರ್ಮಾಣದ ʼರೆಡ್ರಮ್ʼ ಚಿತ್ರದ ಮುಖಾಂತರ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ.  

5 /5

ಕನ್ನಡ ಚಿತ್ರರಂಗಕ್ಕೆ ಮುಂಬೈ ಮೂಲದ ನಾಯಕಿಯರ ಪ್ರವೇಶ ಮೊದಲೇನಲ್ಲ. ಈಗ ಕನ್ನಡದ ʼರೆಡ್ರಮ್ʼ ಚಿತ್ರದ ಮೂಲಕ ಮುಂಬೈ ಪ್ರತಿಭೆ ಪ್ರಾಚಿ ಶರ್ಮ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.