AR Rahman: ಖ್ಯಾತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ. 29 ವರ್ಷಗಳ ದಾಂಪತ್ಯ ಜೀವನದ ನಂತರ ಎ. ಆರ್. ರೆಹಮಾನ್ ಹಾಗೂ ಪತ್ನಿ ಸೈರಾ ವಿಚ್ಚೇದನ ಪಡೆದುಕೊಂಡಿದ್ದಾರೆ, ಈ ಜೋಡಿ ಡಿವೋರ್ಸ್ ಪಡೆಯುವುದರ ಹಿಂದಿನ ಕಾರಣವನ್ನು ಅವರ ಪುತ್ರ ಇದೀಗ ಬಿಚ್ಚಿಟ್ಟಿದ್ದಾನೆ.
AR Rahman: ಖ್ಯಾತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ. 29 ವರ್ಷಗಳ ದಾಂಪತ್ಯ ಜೀವನದ ನಂತರ ಎ. ಆರ್. ರೆಹಮಾನ್ ಹಾಗೂ ಪತ್ನಿ ಸೈರಾ ವಿಚ್ಚೇದನ ಪಡೆದುಕೊಂಡಿದ್ದಾರೆ, ಈ ಜೋಡಿ ಡಿವೋರ್ಸ್ ಪಡೆಯುವುದರ ಹಿಂದಿನ ಕಾರಣವನ್ನು ಅವರ ಪುತ್ರ ಇದೀಗ ಬಿಚ್ಚಿಟ್ಟಿದ್ದಾನೆ.
ಮಂಗಳವಾರ ರಾತ್ರಿ ಎ. ಆರ್. ರೆಹಮಾನ್ ಅವರು ಪತ್ರಿಕಾ ಹೇಳಿಕೆಯನ್ನು ಪ್ರಕಟಿಸುವ ಮೂಲಕ ತಮ್ಮ ಪತ್ನಿಗೆ ವಿಚ್ಚೇದನ ನೀಡುತ್ತಿರುವುದಾಗಿ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
29 ವರ್ಷಗಳ ದಾಂಪತ್ಯ ಜೀವನದ ನಂತರ ಈ ಜೋಡಿ ವಿಚ್ಚೇದನ ಪಡೆಯಲು ನಿರ್ಧರಿಸಿರುವುದು ಎಲ್ಲರಿಗೂ ಶಾಕ್ ತಂದು ಕೊಟ್ಟಿದೆ. ಹೀಗಿರುವಾಗ ಎರಡು ದಶಕಗಳ ನಂತರ ಈ ಜೋಡಿ ದೂರವಾಗಲು ಕಾರಣವಾದರೂ ಏನಿರಬಹುದು ಎಂದು ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದಾರೆ.
ಇನ್ನೂ, ತಮ್ಮ ವಿಭಜನೆಯ ಕುರಿತು ಮಾಹಿತಿ ಹಂಚಿಕೊಂಡಿರುವ ಎ. ಆರ್. ರೆಹಮಾನ್ ಪತ್ನಿ ಸೈರಾ.." ಸೈರಾ ಅವರು ತಮ್ಮ ಪತಿಯಿಂದ ಬೇರ್ಪಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ, ಸರಿಪಡಿಸಲಾಗದ ಸಮಸ್ಯೆಗಳು ಹಾಗೂ ಒತ್ತಡ ಪ್ರೀತಿಯನ್ನು ಸೋಲಿಸಿ ಈ ಜೋಡಿಯ ನಡುವೆ ವಿಭಜನೆಯನ್ನುಂಟು ಮಾಡಿದೆ. ಈ ಕಠಿಣ ನಿರ್ಧಾರವನ್ನು ಸೈರಾ ತುಂಬಾ ನೋವಿನಿಂದ ತೆಗೆದುಕೊಂಡಿದ್ದಾರೆ, ಆದ ಕಾರಣದಿಂದ ಈ ನಿರ್ಧಾರವನ್ನು ಗೌಪ್ಯವಾಗಿಟ್ಟು, ಅದನ್ನು ಗೌರವಿಸಬೇಕು ಎಂದು ಕೋರುತ್ತಾ" ಸೈರಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ದಂಪತಿ ದೂರವಾಗುತ್ತಿರುವ ಮಾಹಿತಿಯನ್ನು ಸೈರಾ ಅವರ ವಕೀಲರಾದ ವಂದನಾ ಶಾ ಅವರು ಅಧಿಕೃತವಾಗಿ ಘೋಷಿಸಿದ್ದಾರೆ.
1995 ರಲ್ಲಿ ಎ. ಆರ್. ರೆಹಮಾನ್ ಅವರು ಸೈರಾ ಅವರನ್ನು ಮದುವೆಯಾಗಿದ್ದರು, ಇಬ್ಬರದ್ದು ಅರೇಂಜ್ಡ್ ಮ್ಯಾರೇಜ್ ಆಗಿತ್ತು.
ಎ. ಆರ್. ರೆಹಮಾನ್ ಹಾಗೂ ಸೈರಾ ಅವರ ವಿಚ್ಚೀದನ ಸುದ್ದಿ ಎಲ್ಲೆಡೆ ಹರಡಲು ಆರಂಭಿಸಿದ ತಕ್ಷಣ ಅವರ ಮಗ ಎ. ಆರ್. ಅಮೀನ್, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ "ಇಂತಹ ಸಂದರ್ಭದಲ್ಲಿ ನಮ್ಮ ವೈಯಕ್ತಿಕ ನಿರ್ಧಾರವನ್ನು ಗೌರವಿಸುವಂತೆ ನಿಮ್ಮಲ್ಲರಲ್ಲೂ ನಾವೂ ವಿನಂತಿಸುತ್ತಿದ್ದೇವೆ. ಇದೆಲ್ಲವನ್ನು ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದ" ಎಂದು ಬರೆದುಕೊಂಡಿದ್ದಾರೆ.