20 ವರ್ಷಗಳ ನಂತರ ಮತ್ತೆ ಒಂದಾಗಲಿದ್ದಾರೆ ವಿಜಯ್- ಜ್ಯೋತಿಕಾ..!

Vijay and Jyothika movie : ʼತಿರುಮಲೈʼ ಸಿನಿಮಾದ ನಂತರ ಸುಮಾರು 20 ವರ್ಷಗಳ ಬಳಿಕ ಕಾಲಿವುಡ್‌ ಸೂಪರ್‌ ಸ್ಟಾರ್‌ ನಟ ಇಳಯದಳಪತಿ ವಿಜಯ್‌ ಜೊತೆ ನಟಿ ಜ್ಯೋತಿಕಾ ಸೂರ್ಯ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಈಗಾಗಲೇ ಜ್ಯೋತಿಕಾ ಅವರ ಡೇಟ್ಸ್‌ ಕೇಳಲಾಗಿದೆ ಎಂದು ತಿಳಿದು ಬಂದಿದೆ..
 

1 /7

ಲೋಕೇಶ್ ಕನಕರಾಜ್ ನಿರ್ದೇಶನದ 'ಲಿಯೋ' ಚಿತ್ರದ ಕೆಲಸ ಮುಗಿಸಿ ದಳಪತಿ ವಿಜಯ್ ಯುರೋಪ್‌ನಲ್ಲಿ ರಜೆಯಲ್ಲಿದ್ದಾರೆ ಎನ್ನಲಾಗಿದೆ.   

2 /7

ಅನಿರುದ್ಧ್ ಅವರ ಸಂಗೀತದಲ್ಲಿ ತ್ರಿಶಾ, ಸಂಜಯ್ ದತ್ ಮತ್ತು ಇತರರು ನಟಿಸಿರುವ ಲಿಯೋ ಅಕ್ಟೋಬರ್ 19 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.  

3 /7

ಈ ಮಧ್ಯ ನಿರ್ದೇಶಕ ವೆಂಕಟ್ ಪ್ರಭು ಅವರು ತಮ್ಮ ಮುಂದಿನ ಚಿತ್ರ 'ತಲಪತಿ 68' ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ.   

4 /7

ಎಜಿಎಸ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರಕ್ಕೆ ಯುವನ್ ಶಂಕರ್ ರಾಜಾ ಸಂಗೀತ ನೀಡಲಿದ್ದಾರೆ. ಕೆಲವು ತಿಂಗಳ ಹಿಂದೆ ಜ್ಯೋತಿಕಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲು ವಿಪಿ ಆಸಕ್ತಿ ಹೊಂದಿದ್ದಾರೆ ಎಂದು ವರದಿಯಾಗಿತ್ತು.  

5 /7

ಇದೀಗ ಚಿತ್ರತಂಡ ನಟಿ ಜ್ಯೋತಿಕಾ ಅವರನ್ನು ಸಂಪರ್ಕಿಸಿ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಡೇಟ್ಸ್ ಕೇಳಿದೆ ಎನ್ನುತ್ತಿವೆ ಚಿತ್ರತಂಡ.  

6 /7

ಸೂಪರ್ ಹಿಟ್ ಚಿತ್ರಗಳಾದ 'ಖುಷಿ' ಮತ್ತು 'ತಿರುಮಲೈ' ಚಿತ್ರದಲ್ಲಿ ನಟಿಸಿದ್ದ ವಿಜಯ್ ಮತ್ತು ಜ್ಯೋತಿಕಾ 20 ವರ್ಷಗಳ ನಂತರ ಮತ್ತೆ ತೆರೆ ಮೇಲೆ ಒಂದಾಗಲಿದ್ದಾರೆ.   

7 /7

'ಮೆರ್ಸಲ್' ಚಿತ್ರದಲ್ಲಿ ವಿಜಯ್‌ಗೆ ಜೋಡಿಯಾಗಲು ಅಟ್ಲಿ ಜ್ಯೋತಿಕಾ ಅವರನ್ನು ಸಂಪರ್ಕಿಸಿದ್ದರಂತೆ, ಆದರೆ ನಂತರ ನಿತ್ಯಾ ಮೆನನ್ ಅವರು ನಟಿಸಿದರು. ಈ ಬಾರಿ ಹೇಗಾಗುತ್ತೋ ಕಾದು ನೋಡೋಣ.