ಹೇಗಿರುತ್ತೆ ಗೊತ್ತಾ 3D ಪ್ರಿಂಟೆಡ್ ಕಟ್ಟಡ?

  • Aug 18, 2023, 16:05 PM IST
1 /4

ಗುಣಮಟ್ಟದ ಕಾಮಗಾರಿಗೆ ಹೆಸರುವಾಸಿಯಾಗಿರುವ ಎಲ್ ಅಂಡ್ ಟಿ ಸಂಸ್ಥೆಯು 3D ಅಂಚೆ ಕಚೇರಿಯನ್ನು ನಿರ್ಮಿಸಿದೆ. ವರದಿಗಳ ಪ್ರಕಾರ 1,100 ಚದರಡಿ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ಕಟ್ಟಡಕ್ಕೆ ತೆರಿಗೆ ಸೇರಿ 26 ಲಕ್ಷ ರೂ. ವೆಚ್ಚವಾಗಿದೆ. ಆದರೆ ನೀರು, ಒಳಚರಂಡಿ ಇತ್ಯಾದಿಗಳಿಗೆ ಹೆಚ್ಚುವರಿ 40 ಲಕ್ಷ ರೂ. ವೆಚ್ಚವಾಗಿದೆ.

2 /4

3D ಪ್ರಿಂಟೆಡ್ ಪೋಸ್ಟ್ ಆಫೀಸ್ ಕಟ್ಟಡವನ್ನು ಕೇವಲ 44 ದಿನದಲ್ಲಿ ನಿರ್ಮಾಣ ಮಾಡಲಾಗಿದೆ. ಮಾರ್ಚ್ 21ರಂದು ಕಾಮಕಾರಿ ಶುರುವಾಗಿ ಮೇ 3ಕ್ಕೆ ಮುಗಿದಿತ್ತು. ಇದರ ಚರಂಡಿ ಮತ್ತು ನೀರಿನ ವ್ಯವಸ್ಥೆಗೆ 2 ತಿಂಗಳಾಗಿದೆ. ಕಟ್ಟಡ ನಿರ್ಮಾಣಕ್ಕೆ 3D ಪ್ರಿಂಟಿಂಗ್ ತಂತ್ರಜ್ಞಾನ ಬಳಸಿರುವುದರಿಂದ ನಿರ್ಮಾಣ ವೆಚ್ಚ ಶೇ.30ರಿಂದ 40ರಷ್ಟು ಉಳಿತಾಯವಾಗಿದೆ. ಇದನ್ನು ನಿರ್ಮಿಸಲು ಹಣದ ಜೊತೆಗೆ ಸಮಯವೂ ಸಾಕಷ್ಟು ಉಳಿತಾಯವಾಗಿದೆ.

3 /4

ಭಾರತದಲ್ಲಿ ಈ ಮೊದಲೇ 3D ಪ್ರಿಂಟೆಡ್ ಟೆಕ್ನಾಲಜಿಯಲ್ಲಿ ಕಟ್ಟಡಗಳು ನಿರ್ಮಾಣವಾಗಿದ್ದವು. 2020ರಲ್ಲಿ ಎಲ್ ಅಂಡ್ ಟಿ ಮೊದಲ ಬಾರಿಗೆ ಈ ತಂತ್ರಜ್ಞಾನದಲ್ಲಿ ಕಟ್ಟಡ ನಿರ್ಮಿಸಿತ್ತು. ಆದರೆ ಇದೇ ಮೊದಲ ಬಾರಿಗೆ ಸಾರ್ವಜನಿಕ ಕಟ್ಟಡವನ್ನು 3D ಪ್ರಿಂಟಿಂಗ್​ನಲ್ಲಿ ನಿರ್ಮಿಸಲಾಗಿದೆ. ಕೇಂಬ್ರಿಡ್ಜ್ ಲೇಔಟ್ ಪೋಸ್ಟ್ ಆಫೀಸ್ ಭಾರತದ ಮೊದಲ 3D ಮುದ್ರಿತ ಸರ್ಕಾರಿ ಕಟ್ಟಡ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

4 /4

3D ಪ್ರಿಂಟೆಡ್ ಕಟ್ಟಡದ ಎಲ್ಲಾ ನಿರ್ಮಾಣ ಕಾರ್ಯವೂ ಕಂಪ್ಯೂಟರ್ ನಿಯಂತ್ರಿತವಾಗಿರುತ್ತದೆ. ಕ್ಯಾಡ್ ಮಾಡೆಲ್ ಅಥವಾ ಡಿಜಿಟಲ್ 3D ಮಾಡಲ್ ರೂಪಿಸಿ ಕಂಪ್ಯೂಟರ್ ನಿರ್ದೇಶನದಲ್ಲಿ ಕಾಂಕ್ರೀಟ್ ಇತ್ಯಾದಿ ಸಾಮಗ್ರಿಗಳನ್ನು ಸೇರಿಸಲಾಗುತ್ತದೆ.