ನವದೆಹಲಿ: ಹಲವು ದಶಕಗಳ ನಂತರ ದೇಶವು ಸ್ಪಷ್ಟವಾದ ಜನಾದೇಶವನ್ನು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
ಭಾಷಣದ ವೇಳೆ ತುರ್ತು ಪರಿಸ್ಥಿತಿಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ “ಇಂದು ಜೂನ್ 25, ಈ ರಾತ್ರಿ ದೇಶದ ಆತ್ಮವನ್ನು ಪುಡಿಮಾಡಲಾಯಿತು. ಭಾರತದ ಪ್ರಜಾಪ್ರಭುತ್ವವು ಸಂವಿಧಾನದಿಂದ ಹುಟ್ಟಿಲ್ಲ, ಆದರೆ ಅದು ಭಾರತದ ಆತ್ಮದಿಂದ ಹುಟ್ಟಿದೆ. ಇಡೀ ಭಾರತವನ್ನು ಜೈಲಿಗೆ ತಳ್ಳಲಾಯಿತು, ಎಲ್ಲಾ ಕಾನೂನುಗಳು ಮತ್ತು ಸಂವಿಧಾನಗಳನ್ನು ಜೂನ್ 25 ರಂದು ಹತ್ತಿಕ್ಕಲಾಯಿತು, ”ಎಂದು ಪ್ರಧಾನಿ ಮೋದಿ 1975 ರಲ್ಲಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಉಲ್ಲೇಖಿಸಿ ಹೇಳಿದರು.
"ನಾವು ತುರ್ತುಸ್ಥಿತಿಯನ್ನು ನೆನಪಿಸಿಕೊಳ್ಳುತ್ತೇವೆ, ಆದರೆ ಇದನ್ನು ಯಾರನ್ನೋ ಟೀಕಿಸುವುದಕ್ಕಾಗಿ ಅಲ್ಲ , ನಾವು ಈ ಹಿಂದೆ ಏನಾಯಿತು ಎನ್ನುವುದನ್ನು ಮರೆಯಬಾರದು, ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಇದು ನಮ್ಮ ಪ್ರಜಾಪ್ರಭುತ್ವದ ಈ ಕಪ್ಪು ಚುಕ್ಕೆ ಶಾಶ್ವತವಾಗಿ ಉಳಿಯುತ್ತದೆ, ಎಂದು ಪ್ರಧಾನಿ ಮೋದಿ ಹೇಳಿದರು.
ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳು ನೀಡಿದ ನಿರಸ ಪ್ರದರ್ಶನಕ್ಕೆ ವ್ಯಂಗ್ಯವಾಡಿದ ಪ್ರಧಾನಿ ಮೋದಿ “ ಜನರ ಪ್ರಯಾಣವು ಅವರು ಯಾಕೆ ಅದನ್ನು ಮಾಡಬಾರದು (ವಿದ್ಯುತ್, ಇಂಧನ, ಮನೆಗಳು, ರಸ್ತೆಗಳು) ಎನ್ನುವುದರಿಂದ ಹಿಡಿದು ಅವರು ಅದನ್ನು ಏಕೆ ಮಾಡುತ್ತಾರೆ ಎನ್ನುವವರೆಗೆ ಇದೆ. ಕೆಲವು ಜನರು ತುಂಬಾ ಎತ್ತರದಲ್ಲಿದ್ದಾರೆ, ಅವರು ಇನ್ನು ಮುಂದೆ ನೆಲವನ್ನು ನೋಡುವುದಿಲ್ಲ, ಅವರು ತುಂಬಾ ಎತ್ತರದಲ್ಲಿದ್ದಾರೆ, ಅವರು ಈಗ ಬೇರು ಸಹಿತವಾಗಿದ್ದಾರೆ, ಅವರು ಈಗ ತುಂಬಾ ಎತ್ತರದಲ್ಲಿದ್ದಾರೆ, ಅವರು ನೆಲದ ಮೇಲೆ ಇರುವವರನ್ನು ತಿರಸ್ಕಾರದಿಂದ ನೋಡುತ್ತಾರೆ ' ಎಂದು ಕಾಂಗ್ರೆಸ್ ಪಕ್ಷವನ್ನು ವ್ಯಂಗ್ಯವಾಡಿದರು.
"ಈ ಲೋಕಸಭಾ ಚುನಾವಣೆ ತಮಗಿಂತ ಹೆಚ್ಚಾಗಿ, ಜನರು ದೇಶದ ಸುಧಾರಣೆಯ ಬಗ್ಗೆ ಯೋಚಿಸುತ್ತಿದ್ದಾರೆಂದು ತೋರಿಸಿದೆ, ಈ ಮನೋಭಾವ ಶ್ಲಾಘನೀಯ" ಎಂದು ಲೋಕಸಭೆಯನ್ನು ಉದ್ದೇಶಿಸಿ ಮೋದಿ ಹೇಳಿದರು. ಅಲ್ಲದೆ ತಾವು ಎಂದಿಗೂ ಕೂಡ ಚುನಾವಣೆಯನ್ನು ಗೆಲುವು ಸೋಲಿನ ಆಧಾರದ ಮೇಲೆ ಯೋಚಿಸಿಲ್ಲ ಎಂದು ಹೇಳಿದರು.
“130 ಕೋಟಿ ಭಾರತೀಯರಿಗೆ ಸೇವೆ ಸಲ್ಲಿಸಲು ಮತ್ತು ನಮ್ಮ ನಾಗರಿಕರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಕೆಲಸ ಮಾಡುವ ಅವಕಾಶ ನನಗೆ ವಿಶೇಷವಾಗಿದೆ. ಜನರು ಐದು ವರ್ಷಗಳ ಕಾಲ ನಾವು ಕೆಲಸ ಮಾಡುವುದನ್ನು ನೋಡಿ, ನಮ್ಮ ಕಠಿಣ ಪರಿಶ್ರಮದ ಫಲವನ್ನು ನಮಗೆ ನೀಡಿದ್ದಾರೆ ”ಎಂದು ಮೋದಿ ಹೇಳಿದರು.