ಹೈ ಬಿಪಿ

  • Dec 01, 2023, 12:44 PM IST
1 /6

ಆಲೂಗಡ್ಡೆ ತರಕಾರಿಗಳ ರಾಜ ಮಾತ್ರವಲ್ಲ ಇದು ಪೌಷ್ಟಿಕಾಂಶದ ಗಣಿಯೂ ಹೌದು. ಆಲೂಗಡ್ಡೆ ಸೇವನೆಯಿಂದ ಒತ್ತಡ ನಿವಾರಣೆ, ಉರಿಯೂತದಿಂದ ಪರಿಹಾರ ಸಿಗುವುದರ ಜೊತೆಗೆ ಮೆದುಳಿನ ಆರೋಗ್ಯವೂ ಸುಧಾರಿಸುತ್ತದೆ ಎನ್ನಲಾಗುತ್ತದೆ. ಹಾಗಂತ ಮಿತಿಗಿಂತ ಹೆಚ್ಚು ಆಲೂಗಡ್ಡೆ ಸೇವನೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಆಲೂಗಡ್ಡೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಏಕೆ ತಿನ್ನಬಾರದು ಗೊತ್ತಾ? 

2 /6

ಅತಿಯಾದ ಆಲೂಗಡ್ಡೆ ಸೇವನೆ ದೇಹದಲ್ಲಿ ಸೊಂಟದ ಸುತ್ತ ಮತ್ತು ಹೊಟ್ಟೆಯ ಮಧ್ಯಭಾಗದಲ್ಲಿ ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ. 

3 /6

ಆಲೂಗಡ್ಡೆಯಲ್ಲಿ ಪಿಷ್ಟ ಸಹ ಕಂಡು ಬರುತ್ತದೆ. ಹಾಗಾಗಿ ಇದರ ಅತಿಯಾದ ಸೇವನೆ ಅಲರ್ಜಿ ಸಮಸ್ಯೆಗೂ ಕಾರಣವಾಗಬಹುದು. 

4 /6

ಸಾಮಾನ್ಯವಾಗಿ ನಮ್ಮ ಹಿರಿಯರು ಆಲೂಗಡ್ಡೆ ಆಹಾರದ ರುಚಿ ಹೆಚ್ಚಿಸಿದರೂ ಸಹ ಅದು ವಾಯುಕ್ ಸಂಧಿವಾತಕ್ಕೆ ಕಾರಣವಾಗುತ್ತದೆ ಎಂದು ಹೆಚ್ಚಾಗಿ ಈ ತರಕಾರಿಯನ್ನು ಬಳಸುತ್ತಿರಲಿಲ್ಲ. 

5 /6

ಆಲೂಗಡ್ಡೆಯ ಅತಿಯಾದ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಾಗುವಂತೆ ಮಾಡುತ್ತದೆ. ಹಾಗಾಗಿ ಮಧುಮೇಹಿಗಳು ಆಲೂಗಡ್ಡೆಯ ಸೇವನೆಯನ್ನು ಮಿತಗೊಳಿಸಿದರೆ ಒಳ್ಳೆಯದು ಎನ್ನಲಾಗುತ್ತದೆ. 

6 /6

ನೀವು ನಿಮ್ಮ ದೈನಂದಿನ ಆಹಾರದಲ್ಲಿ ಹೆಚ್ಚಾಗಿ ಆಲೂಗಡ್ಡೆ ಸೇವಿಸುವುದರಿಂದ ಅಧಿಕ ರಕ್ತದೊತ್ತಡ ಸಮಸ್ಯೆ ಉಲ್ಬಣಿಸಬಹುದು ಎಂದು ಹೇಳಲಾಗುತ್ತದೆ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.