ಬೆಂಗಳೂರು: ಹೈಕಮಾಂಡ್ ನಾಯಕರು ಬಿಜೆಪಿ ಪಕ್ಷವನ್ನು ನಿವಾಳಿಸಿ ಬಿಸಾಡಿದ್ದಾರೆ, ಪದಾಧಿಕಾರಿಗಳ ನೇಮಕದಲ್ಲಿ ಹಿರಿಯರನ್ನು, BSY ವಿರೋಧಿ ಬಣದವರನ್ನು ಮೂಲೆಗುಂಪು ಮಾಡಿ ಕೆಜೆಪಿಯನ್ನು ರಚಿಸಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
#BJPvsKJP ಎಂದು ಸೋಮವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ವಿರೋಧ ಪಕ್ಷದ ನಾಯಕ, ರಾಜ್ಯಾಧ್ಯಕ್ಷ ನೇಮಕಕ್ಕೆ ಇದ್ದ ವಿರೋಧದ ಬೆಂಕಿ ಆರುವ ಮುನ್ನವೇ ಪದಾಧಿಕಾರಿಗಳ ನೇಮಕದ ಮತ್ತೊಂದು ಬೆಂಕಿ ಬಿದ್ದಿದೆ. ಇದರಿಂದ ಬಿಜೆಪಿ ಉರಿದು ಭಸ್ಮವಾಗುವುದೊಂದೆ ಬಾಕಿ!’ ಎಂದು ಕುಟುಕಿದೆ.
ಹೆಸರು ಮಾತ್ರ ಬಿಜೆಪಿ, ಹಿಡಿತ ಕೆಜೆಪಿಯದ್ದು!
ಬಿಜೆಪಿಯಲ್ಲಿನ ರಾಜಕಾರಣ ಪ್ರೊ ಕಬ್ಬಡ್ಡಿ ಆಟದಂತೆ,
ಸಂತೋಷ ಕೂಟ vs BSY ಕೂಟದ ನಡುವಿನ ಆಟದಲ್ಲಿ ಒಮ್ಮೊಮ್ಮೆ ಸಂತೋಷ ಕೂಟದ ಆಟ ಮೇಲುಗೈ ಸಾಧಿಸಿದರೆ, ಮತ್ತೊಮ್ಮೆ BSY ಕೂಟದ ಮೇಲುಗೈ!ಸದ್ಯ ನೇಮಕವಾದ ಪದಾಧಿಕಾರಿಗಳನ್ನು ನೋಡಿ ಇದು ಕೆಜೆಪಿ ಪಾರ್ಟ್2 ಎಂದು ಸ್ವತಃ ಬಿಜೆಪಿ ನಾಯಕರೇ…
— Karnataka Congress (@INCKarnataka) December 25, 2023
ಇದನ್ನೂ ಓದಿ: ಹನುಮಮಾಲಾ ಕಾರ್ಯಕ್ರಮಕ್ಕೆ ತೆರೆ
‘ಹೆಸರು ಮಾತ್ರ ಬಿಜೆಪಿ, ಹಿಡಿತ ಕೆಜೆಪಿಯದ್ದು! ಬಿಜೆಪಿಯಲ್ಲಿನ ರಾಜಕಾರಣ ಪ್ರೊ ಕಬ್ಬಡ್ಡಿ ಆಟದಂತೆ. ಸಂತೋಷ ಕೂಟ vs BSY ಕೂಟದ ನಡುವಿನ ಆಟದಲ್ಲಿ ಒಮ್ಮೊಮ್ಮೆ ಸಂತೋಷ ಕೂಟದ ಆಟ ಮೇಲುಗೈ ಸಾಧಿಸಿದರೆ, ಮತ್ತೊಮ್ಮೆ BSY ಕೂಟದ ಮೇಲುಗೈ! ಸದ್ಯ ನೇಮಕವಾದ ಪದಾಧಿಕಾರಿಗಳನ್ನು ನೋಡಿ ಇದು ಕೆಜೆಪಿ ಪಾರ್ಟ್ - 2 ಎಂದು ಸ್ವತಃ ಬಿಜೆಪಿ ನಾಯಕರೇ ರೊಚ್ಚಿಗೆದ್ದಿದ್ದಾರೆ!’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಹೈಕಮಾಂಡ್ ನಾಯಕರು @BJP4Karnataka ಪಕ್ಷವನ್ನು ನಿವಾಳಿಸಿ ಬಿಸಾಡಿದ್ದಾರೆ, ಪದಾಧಿಕಾರಿಗಳ ನೇಮಕದಲ್ಲಿ ಹಿರಿಯರನ್ನು, BSY ವಿರೋಧಿ ಬಣದವರನ್ನು ಮೂಲೆಗುಂಪು ಮಾಡಿ ಕೆಜೆಪಿಯನ್ನು ರಚಿಸಿದ್ದಾರೆ.
ವಿರೋಧ ಪಕ್ಷದ ನಾಯಕ,ರಾಜ್ಯಾಧ್ಯಕ್ಷ ನೇಮಕಕ್ಕೆ ಇದ್ದ ವಿರೋಧದ ಬೆಂಕಿ ಆರುವ ಮುನ್ನವೇ ಪದಾಧಿಕಾರಿಗಳ ನೇಮಕದ ಮತ್ತೊಂದು ಬೆಂಕಿ ಬಿದ್ದಿದೆ.
ಬಿಜೆಪಿ…
— Karnataka Congress (@INCKarnataka) December 25, 2023
ರೈತ ವಿರೋಧಿ ಬಿಜೆಪಿ!
ಬಿಜೆಪಿ ರೈತರನ್ನು ಅವಹೇಳನ ಮಾಡಿದಷ್ಟು ಬೇರೆ ಇನ್ಯಾವ ಪಕ್ಷವೂ ಮಾಡಿಲ್ಲ.
◆ರೈತರನ್ನು ಹೇಡಿಗಳು ಎಂದಿದ್ದು ಬಿಜೆಪಿ.
◆ರೈತರನ್ನು ಭಯೋತ್ಪಾದಕರು, ಖಲಿಸ್ತಾನಿಗಳು ಎಂದಿದ್ದು ಬಿಜೆಪಿ.
◆ರೈತರನ್ನು ಗುಂಡಿಟ್ಟು ಕೊಂದಿದ್ದು ಬಿಜೆಪಿ.
◆ರೈತರು ಅಕ್ಕಿ ಕೇಳಿದಾಗ ಅವಮಾನಿಸಿದ್ದು ಬಿಜೆಪಿ.
◆ರೈತ ಮಹಿಳೆಗೆ ರಾಸ್ಕಲ್ ಎಂದಿದ್ದು ಬಿಜೆಪಿ.
◆ನೆರೆ…— Karnataka Congress (@INCKarnataka) December 25, 2023
‘ಬಿಜೆಪಿ ರೈತರನ್ನು ಅವಹೇಳನ ಮಾಡಿದಷ್ಟು ಬೇರೆ ಇನ್ಯಾವ ಪಕ್ಷವೂ ಮಾಡಿಲ್ಲ. ರೈತರನ್ನು ಹೇಡಿಗಳು ಎಂದಿದ್ದು ಬಿಜೆಪಿ, ರೈತರನ್ನು ಭಯೋತ್ಪಾದಕರು, ಖಲಿಸ್ತಾನಿಗಳು ಎಂದಿದ್ದು ಬಿಜೆಪಿ, ರೈತರನ್ನು ಗುಂಡಿಟ್ಟು ಕೊಂದಿದ್ದು ಬಿಜೆಪಿ, ರೈತರು ಅಕ್ಕಿ ಕೇಳಿದಾಗ ಅವಮಾನಿಸಿದ್ದು ಬಿಜೆಪಿ, ರೈತ ಮಹಿಳೆಗೆ ರಾಸ್ಕಲ್ ಎಂದಿದ್ದು ಬಿಜೆಪಿ ಮತ್ತು ನೆರೆ ಬಂದಾಗ ರೈತರನ್ನು ಅನಾಥರನ್ನಾಗಿಸಿದ್ದು ಬಿಜೆಪಿ’ ಎಂದು ಕಾಂಗ್ರೆಸ್ ಟೀಕಿಸಿದೆ.
ಇದನ್ನೂ ಓದಿ: ಕೊಪ್ಪಳ: ಹೊಸ ಇತಿಹಾಸ ಬರೆದ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.