Diabetes foot care : ಜೀವನ ಶೈಲಿ, ಕಳಪೆ ಆಹಾರ ಪದ್ದತಿಯಿಂದಾಗಿ ಇಂದು ಮಧುಮೇಹ ಕೋಟ್ಯಂತರ ಜನರನ್ನು ಕಾಡುತ್ತಿದೆ. ಸಕ್ಕರೆ ಕಾಯಿಲೆ ಅಂತ ಕರೆಯಿಸಿಕೊಳ್ಳುವ ಈ ರೋಗ, ರಕ್ತದಲ್ಲಿನ ಇನ್ಸುಲಿನ್ ಕಡಿಮೆಯಾದಾಗ ಆವರಿಸಿಕೊಳ್ಳುತ್ತದೆ. ಈ ರೋಗದಿಂದ ಸಂಪೂರ್ಣವಾಗಿ ಗುಣಮುಖರಾಗಲು ಸಾಧ್ಯವಿಲ್ಲ ಅದರೆ, ನಿಯಂತ್ರಿಸಬಹುದು.
Foods for diabetes : ಮಧುಮೇಹಕ್ಕೆ ಸಾಕಷ್ಟು ಔಷಧಿಗಳು ಇವೆ, ಈ ಪೈಕಿ ಆಯುರ್ವೇದ ಪದ್ದತಿಯೂ ಒಂದು. ಅಡುಗೆ ಮನೆಯಲ್ಲಿ ಸಿಗುವ ಹಲವಾರು ಆಹಾರ ಪದಾರ್ಥಗಳು ಮಧುಮೇಹವನ್ನು ನಿಯಂತ್ರಿಸುವ ಗುಣಗಳನ್ನು ಹೊಂದಿದೆ. ಇಂದು ಆ ಪದಾರ್ಥಗಳು ಯಾವುವು ಅಂತ ತಿಳಿಯೋಣ..
ಹಾಗಲ ಕಾಯಿ : ಮಧುಮೇಹಿಗಳಿಗೆ ಹಾಗಲ ಕಾಯಿ ಉತ್ತಮ ಔಷಧಿ. ಇದರಲ್ಲಿರುವ ಪೋಷಕಾಂಶಗಳು ಇನ್ಸುಲಿನ್ನಂತಹ ಗುಣಗಳನ್ನು ಹೊಂದಿದ್ದು, ಸಕ್ಕರೆಯನ್ನು ಬಳಸಿಕೊಂಡು ಶಕ್ತಿಯನ್ನಾಗಿ ಪರಿವರ್ತಿಸಿ, ಡಯಾಬಿಟಿಸ್ ಅನ್ನು ನಿಯಂತ್ರಣಕ್ಕೆ ತರುವಲ್ಲಿ ಸಹಾಯ ಮಾಡುತ್ತದೆ.
ಮೆಂತೆ ಕಾಳುಗಳು : ಮೆಂತೆಯಲ್ಲಿ ಮಧುಮೇಹ ನಿಯಂತ್ರಿಸುವ ಗುಣಗಳಿವೆ. ಇದರಲ್ಲಿರುವ ನಾರು ಮತ್ತು ಇತರ ಆರೋಗ್ಯಕರ ಪೋಷಕಾಂಶಗಳು ರಕ್ತದಲ್ಲಿ ಸಕ್ಕರೆಯ ಮಟ್ಟಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿ ಮೆಂತೆಯಿಂದ ಮಾಡಲ್ಪಟ್ಟ ಅಹಾರಗಳನ್ನು ಸೇವಿಸುವುದು ಒಳ್ಳೆಯದು..
ಚೆಕ್ಕೆ ಅಥವಾ ದಾಲ್ಚಿನ್ನಿ : ಇವುಗಳು ದೇಹದಲ್ಲಿ ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿ ಸಕ್ಕರೆಯ ಮಟ್ಟಗಳು ಕಡಿಮೆ ಮಾಡಲು ಸಹಾಯ ಮಾಡುತ್ತವೆ.. ನಿತ್ಯದ ಅಡುಗೆಯಲ್ಲಿ ದಾಲ್ಚಿನ್ನಿಯನ್ನು ಸೇರಿಸುವ ಮೂಲಕ ಇದರ ಲಾಭ ಪಡೆಯಬಹುದು.
ನೆಲ್ಲಿಕಾಯಿ : ನೆಲ್ಲಿಕಾಯಿ ಆಂಟಿ ಆಕ್ಸಿಡೆಂಟುಗಳು ಮತ್ತು ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ಈ ತರಕಾರಿ ರಕ್ತದಲ್ಲಿ ಇನ್ಸುಲಿನ್ ಸಂವೇದನೆ ಯನ್ನು ಹೆಚ್ಚಿಸುತ್ತದೆ ಹಾಗೂ ರಕ್ತದಲ್ಲಿ ಸಕ್ಕರೆಯ ಮಟ್ಟಗಳು ಕಡಿಮೆಯಾಗಲು ನೆರವಾಗುತ್ತದೆ. ನೆಲ್ಲಿಕಾಯಿಯನ್ನು ಹಸಿಯಾಗಿ ತಿಂದಷ್ಟೂ ಒಳ್ಳೆಯದು.
ಅರಿಶಿನ ಪುಡಿ : ಆಯುರ್ವೇದದಲ್ಲಿ ಅರಿಶಿನ ಪುಡಿಗೆ ಮಹತ್ವವಿದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ರಕ್ತದಲ್ಲಿ ಅಧಿಕ ಸಕ್ಕರೆಯ ಮಟ್ಟಗಳನ್ನು ನಿಯಂತ್ರಿಸಲು ನೆರವಾಗುತ್ತವೆ. ಇದರಿಂದಾಗಿ ಮಧುಮೇಹವನ್ನು ನಿಯಂತ್ರಿಸಲು ನೆರವಾಗುತ್ತದೆ.
ಕಹಿಬೇವಿನ ಎಲೆಗಳು : ಕಹಿಬೇವು ಇನ್ಸುಲಿನ್ ಪ್ರಮಾಣವನ್ನು ಉತ್ತಮಗೊಳಿಸುತ್ತದೆ. ಈ ಮೂಲಕ ರಕ್ತದಲ್ಲಿನ ಸಕ್ಕರೆಯ ಮಟ್ಟಗಳನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ. ಕಹಿಬೇವನ್ನು ಕುದಿಸಿದ ನೀರನ್ನು ಟೀ ರೂಪದಲ್ಲಿ ಸೇವಿಸಬಹುದು.