Health Tips: ಬೆಂಡೆಕಾಯಿ ಸೇವನೆಯಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ

Health benefits of lady finger: ಬೆಂಡೆಕಾಯಿಯು ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ʼಕೆʼ, ಫೋಲೇಟ್ ಮತ್ತು ಕಬ್ಬಿಣವನ್ನು ಹೊಂದಿರುವುದರಿಂದ, ಇದು ರಕ್ತದ ಆರೋಗ್ಯವನ್ನು ಉತ್ತೇಜಿಸಲು, ರಕ್ತಹೀನತೆಯ ಚಿಕಿತ್ಸೆ ಮತ್ತು ತಡೆಗಟ್ಟುವಿಕೆಗೆ ಉತ್ತಮವಾಗಿದೆ.

Health Benefits Of Lady’s Finger: ಬೆಂಡೆಕಾಯಿ... ಈ ಪೌಷ್ಟಿಕ ತರಕಾರಿಗೆ ಹಲವಾರು ಹೆಸರುಗಳಿವೆ. ಇದನ್ನು ಪ್ರಪಂಚದ ಅನೇಕ ಭಾಗಗಳಲ್ಲಿ ಬೆಳೆಯಲಾಗುತ್ತದೆ. ವಿಶೇಷವಾಗಿ ಸಮಶೀತೋಷ್ಣ ಅಥವಾ ಉಷ್ಣವಲಯದ ಹವಾಮಾನದಲ್ಲಿ ಬೆಳೆಯಲಾಗುತ್ತದೆ. ಬೆಂಡೆಕಾಯಿ ಭಾರತೀಯ ಮನೆಗಳಲ್ಲಿ ವ್ಯಾಪಕವಾಗಿ ಸೇವಿಸಲ್ಪಡುವ ತರಕಾರಿಯಾಗಿದೆ. 100 ಗ್ರಾಂ ಬೆಂಡೆಕಾಯಿಯಲ್ಲಿ 7.03 ಗ್ರಾಂ ಕಾರ್ಬೋಹೈಡ್ರೇಟ್‌ಗಳು, 2 ಗ್ರಾಂ ಪ್ರೋಟೀನ್, 0.1 ಗ್ರಾಂ ಕೊಬ್ಬು ಮತ್ತು 9% ಫೈಬರ್ ಹೊಂದಿರುತ್ತದೆ. ಇದು ಫೋಲೇಟ್, ನಿಯಾಸಿನ್, ವಿಟಮಿನ್ C, E ಮತ್ತು K ಗಳಿಂದ ತುಂಬಿರುತ್ತದೆ. ಇದಲ್ಲದೆ ಇದು ಕ್ಯಾಲ್ಸಿಯಂ, ತಾಮ್ರ, ಕಬ್ಬಿಣ, ಮೆಗ್ನೀಸಿಯಮ್, ಮ್ಯಾಂಗನೀಸ್, ಫಾಸ್ಫರಸ್ ಮತ್ತು ಸತುವುಗಳಲ್ಲಿ ಸಮೃದ್ಧವಾಗಿದೆ. ಇದರ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಬೆಂಡೆಕಾಯಿ ತನ್ನದೇ ಆದ ಕೊಲೆಸ್ಟ್ರಾಲ್ ಅನ್ನು ಹೊಂದಿಲ್ಲ, ವಾಸ್ತವವಾಗಿ ಇದು ಪೆಕ್ಟಿನ್ ಎಂಬ ಅಂಶವನ್ನು ಹೊಂದಿರುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಹೃದ್ರೋಗಗಳಿಗೆ ಕಾರಣವಾಗಿದ್ದು, ಇದರ ಸೇವನೆಯನ್ನು ಹೆಚ್ಚಿಸುವ ಮೂಲಕ ಅದನ್ನು ನಿಯಂತ್ರಿಸಬಹುದು.

2 /5

ಬೆಂಡೆಕಾಯಿಯು ಮಧುಮೇಹಿಗಳಿಗೆ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಇದು ರಕ್ತದ ಸಕ್ಕರೆಯ ಮಟ್ಟವಯನ್ನು ನಿಯಂತ್ರಿಸುತ್ತದೆ. ಇದರಲ್ಲಿರುವ ಹೆಚ್ಚಿನ ಫೈಬರ್ ಅಂಶವು ಜೀರ್ಣಕ್ರಿಯೆಯ ನಿಧಾನಗತಿಯ ಕಾರಣದಿಂದ ಸಕ್ಕರೆಯನ್ನು ನಿಧಾನವಾಗಿ ರಕ್ತಕ್ಕೆ ಬಿಡುಗಡೆ ಮಾಡುತ್ತದೆ. ಇದು ಸಕ್ಕರೆಯ ಸ್ಪೈಕ್ ಇಲ್ಲವೆಂದು ಖಚಿತಪಡಿಸುತ್ತದೆ, ಇದು ಮಧುಮೇಹಿಗಳು ಆಹಾರವನ್ನು ಸೇವಿಸಿದ ನಂತರ ಸಂಭವಿಸುತ್ತದೆ.

3 /5

ಇತರ ತರಕಾರಿಗಳಿಗೆ ಹೋಲಿಸಿದರೆ ಬೆಂಡೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ಆಂಟಿ-ಆಕ್ಸಿಡೆಂಟ್‌ಗಳಿವೆ ಎಂದು ಸಂಶೋಧನೆ ತೋರಿಸಿದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಜೀವಕೋಶಗಳಿಗೆ ಆಕ್ಸಿಡೇಟಿವ್ ಹಾನಿಯನ್ನು ತಡೆಯುತ್ತದೆ. ಆದ್ದರಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಫೈಬರ್ ಅಂಶವು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ನಿರ್ವಹಿಸುತ್ತದೆ & ಕರುಳಿನ ಕ್ಯಾನ್ಸರ್ ಅನ್ನು ತಡೆಯುತ್ತದೆ .

4 /5

ಬೆಂಡೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ʼಸಿʼ ಇದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸಾಮಾನ್ಯ ಸೋಂಕುಗಳನ್ನು ತಡೆಯುತ್ತದೆ. 100 ಗ್ರಾಂ ಬೆಂಡೆಕಾಯಿಯು ನಿಮಗೆ ದೈನಂದಿನ ಶಿಫಾರಸು ಮಾಡಲಾದ ವಿಟಮಿನ್ ʼಸಿʼ ಸೇವನೆಯ ಸುಮಾರು 40% ಅನ್ನು ನೀಡುತ್ತದೆ.

5 /5

ಪ್ರತಿ 100 ಗ್ರಾಂನಲ್ಲಿ ಕೇವಲ 33 ಕ್ಯಾಲೊರಿಗಳನ್ನು ಒಳಗೊಂಡಿರುವ ಬೆಂಡೆಕಾಯಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಉತ್ತಮ ಆಯ್ಕೆಯಾಗಿದೆ. ಹೆಚ್ಚಿನ ಫೈಬರ್ ಅಂಶವು ನಿಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ ಮತ್ತು ಕ್ಯಾಲೊರಿಗಳ ಸೇವನೆಯನ್ನು ಕಡಿಮೆ ಮಾಡುತ್ತದೆ.