ಬಿಯರ್ ಕುಡಿದು, ಬೆಟ್ಟದಂತ ಹೊಟ್ಟೆ ಬೆಳೆಸಿಕೊಂಡಿದ್ದೀರಾ..? ಎಣ್ಣೆ ಬಿಡದೇ ಹೊಟ್ಟೆ ಕರಗಿಸಲು ಹೀಗೆ ಮಾಡಿ..

Beer Belly reduce tips : ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಹಾನಿಕರ, ಅಲ್ಲದೆ, ಇದು ಮಧುಮೇಹ ಮತ್ತು ಹೃದ್ರೋಗದ ಅಪಾಯ ಹೆಚ್ಚಿಸುತ್ತದೆ. ಹೊಟ್ಟೆಯ ಸುತ್ತಲೂ ಹೆಚ್ಚುವರಿ ಕೊಬ್ಬು ಸಂಗ್ರಹಗೊಳ್ಳಲು ಕಾರಣವಾಗುತ್ತದೆ. ಅತಿಯಾದ ಬಿಯರ್ ಸೇವನೆ ದಪ್ಪ ಹೊಟ್ಟೆಗೆ ಕಾರಣವಾಗುತ್ತದೆ. ಹೊಟ್ಟೆ ಬೆಳೆಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. 
 

1 /6

ಮದ್ಯಪಾನ ಮಾಡುವುದರಿಂದ ಮಧುಮೇಹ ಮತ್ತು ಹೃದ್ರೋಗದ ಅಪಾಯ ಹೆಚ್ಚು. ಅಲ್ಲದೆ, ಇದು ಹೊಟ್ಟೆಯ ಸುತ್ತಲೂ ಹೆಚ್ಚುವರಿ ಕೊಬ್ಬು ಸಂಗ್ರಹಗೊಳ್ಳಲು ಕಾರಣವಾಗುತ್ತದೆ. ಈ ಹೊಟ್ಟೆಯನ್ನು ಕಡಿಮೆ ಮಾಡುವುದು ಸುಲಭದ ಕೆಲಸವೂ ಅಲ್ಲ.. ಕುಡಿಯದೇ ಇರುವುದು ನಿಮಗೂ ಆಗಲ್ಲ.. ಹಾಗಿದ್ರೆ ಏನ್‌ ಮಾಡ್ಬೇಕು.. ಇಲ್ಲಿವೆ ಕೆಲವು ಟಿಪ್ಸ್‌..

2 /6

ನಿತ್ಯ ಮದ್ಯಪಾನ ಮಾಡದಿದ್ದರೂ ಕೆಲವರು ಈವೆಂಟ್ ಅಥವಾ ಗೆಟ್ ಟುಗೆದರ್ ಇಲ್ಲವೇ ಸ್ನೇಹಿತರೊಂದಿಗೆ ಔಟಿಂಗ್‌ಗೆ ಹೋಗುವಾಗ ಆಗಾಗ ಮದ್ಯ ಸೇವಿಸುತ್ತಾರೆ.  ಇನ್ನೂ ಕೆಲವರು ಅದನ್ನೇ ಜೀವನವನ್ನಾಗಿಸಿಕೊಂಡಿರುತ್ತಾರೆ.. ಅಂತಹವರ ಹೊಟ್ಟೆ ಬೆಟ್ಟದಷ್ಟು ಬೆಳೆದಿರುತ್ತದೆ.. ಆ ಹೊಟ್ಟೆಯನ್ನು ಕಡಿಮೆ ಮಾಡಿಕೊಳ್ಳಲು ಆರೋಗ್ಯ ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ.. 

3 /6

ಆಲ್ಕೊಹಾಲ್ ಕುಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸುವ ಅಗತ್ಯವಿಲ್ಲ. ವಾರಕ್ಕೊಮ್ಮೆ ಆಲ್ಕೋಹಾಲ್ ಕುಡಿಯಲು ಅಭ್ಯಾಸ ಮಾಡಿ. ಕಡಿಮೆ ಕ್ಯಾಲೋರಿ ಹೊಂದಿರುವ ಆಲ್ಕೋಹಾಲ್ ಅನ್ನು ಮಾತ್ರ ಸೇವಿಸಬೇಕು. ಇಲ್ಲವೆ ದೈನಂದಿನ ಆಹಾರದಲ್ಲಿ ಕೊಬ್ಬು ಕಡಿಮೆ ಇದೆಯೇ ಎಂದು ಖಚಿತಪಡಿಸಿಕೊಳ್ಳಿ. 

4 /6

ತರಕಾರಿಗಳು, ಹಣ್ಣುಗಳು, ಧಾನ್ಯಗಳು ಮತ್ತು ಬೀಜಗಳನ್ನು ತಿನ್ನಿರಿ. ಸಕ್ಕರೆ ಮತ್ತು ಕ್ಯಾಲೋರಿಗಳು ಹೆಚ್ಚಿರುವ ಆಹಾರಗಳನ್ನು ತಿನ್ನಬೇಡಿ.. ಆಹಾರದಲ್ಲಿ ಉಪ್ಪು, ಸಕ್ಕರೆ ಮತ್ತು ಕೊಬ್ಬಿನಂಶ ತುಂಬಾ ಕಡಿಮೆ ಇರುವಂತೆ ನೋಡಿಕೊಳ್ಳಿ. ಡಿಟಾಕ್ಸ್ ವಾಟರ್, ಹರ್ಬಲ್ ಟೀಗಳಿಂದ ತಯಾರಿಸಿದ ಸ್ಮೂಥಿಗಳು, ಹಣ್ಣುಗಳು ಮತ್ತು ತರಕಾರಿಗಳು ಸೇವಿಸಿ..

5 /6

ನೀವು ವ್ಯಾಯಾಮ ಮಾಡದಿದ್ದರೆ, ಕೊಬ್ಬು ಕಳೆದುಕೊಳ್ಳುವುದಿಲ್ಲ. ಹಾಗಾಗಿ ಪ್ರತಿದಿನ 30 ನಿಮಿಷಗಳ ಕಾಲ ಯೋಗ ಮಾಡುವುದನ್ನು ರೂಢಿಸಿಕೊಳ್ಳಿ. ಇದು ಯಕೃತ್ತಿನ ಆರೋಗ್ಯವನ್ನು ಸುಧಾರಿಸುತ್ತದೆ. ಅಲ್ಲದೆ ನಿಮ್ಮ ತೂಕವನ್ನೂ ಕಡಿಮೆ ಮಾಡುತ್ತದೆ. ಇದಲ್ಲದೆ, ಇತರ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. 

6 /6

ಹೆಚ್ಚು ಆಲ್ಕೋಹಾಲ್ ಕುಡಿಯುವುದರಿಂದ ದೇಹವು ನಿರ್ಜಲೀಕರಣಗೊಳ್ಳುತ್ತದೆ. ನಿದ್ರಾಹೀನತೆಯ ಸಮಸ್ಯೆಯ ಜೊತೆಗೆ ಖಿನ್ನತೆಯು ಹೆಚ್ಚಾಗುತ್ತದೆ. ತೂಕ ಹೆಚ್ಚಳಕ್ಕೂ ಕಾರಣವಾಗುತ್ತವೆ. ಹಾಗಾಗಿ ಆಲ್ಕೋಹಾಲ್ ಕಡಿಮೆ ಮಾಡಿ ರಾತ್ರಿ ಚೆನ್ನಾಗಿ ನಿದ್ದೆ ಮಾಡುವ ಅಭ್ಯಾಸ ಮಾಡಿಕೊಳ್ಳಿ.