ಬೆಂಗಳೂರು: ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಲ್ಲಿಕಾರ್ಜುನ್ ಖರ್ಗೆ, ಎಚ್.ಡಿ.ಕುಮಾರಸ್ವಾಮಿ ಈ ಎಲ್ಲರಿಗೂ ತಮ್ಮ ಮಕ್ಕಳದ್ದೇ ಚಿಂತೆ ಅಂತಾ ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ʼಕರ್ನಾಟಕ ರಾಜಕೀಯದಲ್ಲಿ ಅಡ್ಜಸ್ಟ್ಮೆಂಟ್ ಮತ್ತು ನೆಪೋಟಿಸಂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬರೆಯಲು ಹೋದರೆ ನಾನು ಮೊದಲು BJPಯನ್ನೇ ತೊಳೆಯುತ್ತೇನೆ ಎಂದು ಕಿಡಿಕಾರಿದ್ದಾರೆ.
ʼಕಂಡವರ ಮಕ್ಕಳನ್ನು ಬೆಳೆಸಿದ ದೇವರಾಜ್ ಅರಸು ದೇವರಾದರು. ಆದರೆ ಸಿಎಂ ಸಿದ್ದರಾಮಯ್ಯನವರು, ಯಡಿಯೂರಪ್ಪನವರು, ಮಲ್ಲಿಕಾರ್ಜುನ್ ಖರ್ಗೆ, ಕೇಂದ್ರ ಸಚಿವ ಕುಮಾರಣ್ಣ ಎಲ್ಲರಿಗೂ ತಮ್ಮ ಮಕ್ಕಳದ್ದೇ ಚಿಂತೆಯಾದರೆ ಕಂಡವರ ಮಕ್ಕಳನ್ನು ಬೆಳೆಸುವವರಾರು?.. ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಎಚ್.ಡಿ.ದೇವೇಗೌಡರು, ಹೆಚ್.ಸಿ.ಮಹಾದೇವಪ್ಪ, ಯಡಿಯೂರಪ್ಪ ಸಾಹೇಬರು ನೆಲದಿಂದ ಬೆಳೆದು ಬಂದವರು. ಹಾಗಾಗಿ ಅವರು ನಾಯಕರಾದರು. ಆದರೆ ಇವರು ಮುಂದಿನ ಜನರೇಷನ್ಗೆ ಏನು ಕೊಟ್ಟರು ಅನ್ನೋದೇ ಪ್ರಶ್ನೆಯಾಗಿದೆ. ದೇವರಾಜ್ ಅರಸು ಕಂಡವರ ಮಕ್ಕಳನ್ನು ಬೆಳೆಸಿ ದೇವರಾದರು. ಆದರೆ ಬೇರೆಯವರಿಗೆ ತಮ್ಮ ಮಕ್ಕಳನ್ನು ಬೆಳೆಸುವ ಚಿಂತೆ ಎಂದು ಕುಟುಕಿದರು.
ಇದನ್ನೂ ಓದಿ: ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಏನು ಕೊಟ್ಟಿದೆ? ಸಿಎಂ ಸಿದ್ದರಾಮಯ್ಯ ಪ್ರಶ್ನೆ
ಯಡಿಯೂರಪ್ಪ ವಿರುದ್ಧ ಆಕ್ರೋಶ
ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಇದೇ ಕಥೆಯಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ & ಜೆಡಿಎಸ್ನಲ್ಲಿ ಮಂತ್ರಿಗಳ ಮಕ್ಕಳಿಗೆ ಟಿಕೆಟ್ ಸಿಕ್ಕಿದೆ. ಇದಕ್ಕೆ ಬಿಜೆಪಿ ಸಹ ಹೊರತಾಗಿಲ್ಲ. ನಮ್ಮ ಪಕ್ಷದಲ್ಲೂ ಮಾಜಿ ಸಿಎಂ ಯಡಿಯೂರಪ್ಪ ಸಾಹೇಬರಿಂದ ಹಿಡಿದು ಬೇರೆಯವರ ಮಕ್ಕಳಿಗೆ ಟಿಕೆಟ್ ಸಿಕ್ಕಿದೆ ಎಂದು ಆಕ್ರೋಶ ಹೊರಹಾಕಿದರು.
ಮೊದಲು BJPಯನ್ನೇ ತೊಳೆಯುತ್ತೇನೆ
ಕಂಡವರ ಮಕ್ಕಳನ್ನು ಬೆಳೆಸಿದ ದೇವರಾಜ್ ಅರಸ್ ದೇವರಾದರು. ಆದರೆ ಸಿದ್ದರಾಮಯ್ಯನವರು, ಯಡಿಯೂರಪ್ಪನವರು, ಖರ್ಗೆ ಕುಮಾರಣ್ಣ ಎಲ್ಲರಿಗೂ ತಮ್ಮ ಮಕ್ಕಳದ್ದೇ ಚಿಂತೆಯಾದರೆ ಕಂಡವರ ಮಕ್ಕಳನ್ನು ಬೆಳೆಸುವವರಾರು?! pic.twitter.com/tb1liXDd3b
— Prathap Simha (@mepratap) July 29, 2024
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎಂಪಿ ಟಿಕೆಟ್ ಯಾರಿಗೆ ಕೊಟ್ಟರು..? ಎಲ್ಲಾ ಅವರವರ ಮಕ್ಕಳಿಗೇ ಕೊಟ್ಟರು. ನಮ್ಮ ಬಿಜೆಪಿ ಪಾರ್ಟಿಯಲ್ಲೂ ಆಗಿದ್ದೂ ಇದೆ. ಎಲ್ಲರಿಗೂ ಅವರವರ ಮಕ್ಕಳದ್ದೇ ಚಿಂತೆ. ಹೀಗೇ ಮುಂದುವರೆದರೆ ಕಂಡವರ ಮಕ್ಕಳು ಹೇಗೆ ಮುಂದೆ ಬರುತ್ತಾರೆ. ಸಮಾಜದ ಬಗ್ಗೆ ಕಾಳಜಿ ಹೊಂದಿರುವವರು ಹೇಗೆ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು. ಇದನ್ನು ಪತ್ರಕರ್ತರು ತಮ್ಮ ಬರವಣಿಗೆಯ ಮೂಲಕ ತಿದ್ದಬೇಕು. ನನ್ನನ್ನೂ ತುಂಬಾ ಜನರು ಬರವಣಿಗೆ ಮುಂದುವರೆಸಿ ಎಂದು ಸಲಹೆ ನೀಡುತ್ತಿದ್ದಾರೆ. ಆದರೆ ನಾನು ಬರೆಯೋಕೆ ಹೋದ್ರೆ ಮೊದಲು ಬಿಜೆಪಿಯನ್ನೇ ತೊಳೆಯುತ್ತೇನೆ. ನನಗೆ ಎಲ್ಲಾ ಪಕ್ಷಗಳ ಬಗ್ಗೆಯೂ ಗೊತ್ತು.. ಎಲ್ಲರ ವ್ಯವಹಾರಗಳೂ ಗೊತ್ತು. ಅವರ ಜೊತೆ ಪಾರ್ಟಿಗೆ ಹೋದ್ರೆ ನಮಗೂ ಅದೇ ಬುದ್ದಿ ಬರುತ್ತೆ. ಹೀಗಾಗಿ ನಾನು ಅವರೊಂದಿಗೆ ಪಾರ್ಟಿಗೆ ಹೋಗಲ್ಲ ಎಂದು ಟೀಕಿಸಿದರು.
ಇದನ್ನೂ ಓದಿ: PM Kisan: ಈ ಬಾರಿ ರೈತರ ಖಾತೆಗೆ ಬರಲಿದೆ ₹13,500
ಐದಾರು ಕುಟುಂಬಗಳಿಂದ ನಿಯಂತ್ರಣ
ರಾಜ್ಯದ ರಾಜಕೀಯವನ್ನು ಐದಾರು ಕುಟುಂಬಗಳು ಮಾತ್ರ ನಿಯಂತ್ರಿಸುತ್ತಿವೆ. ಇದರಿಂದ ಕಂಡವರ ಮಕ್ಕಳು ಬೆಳೆಯಲು ಸಾಧ್ಯವಾಗುತ್ತಿಲ್ಲ. ರಾಜಕೀಯ ಹೊರತುಪಡಿಸಿ ಸಾಹಿತ್ಯ, ನಟನೆ ಸೇರಿದಂತೆ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದವರ ಮಕ್ಕಳ ಸಾಧನೆ ಅಷ್ಟಕಷ್ಟೇ.. ಆದರೆ ರಾಜಕೀಯದಲ್ಲಿ ಮಾತ್ರ ದೊಡ್ಡ ರಾಜಕಾರಣಿಗಳ ಮಕ್ಕಳೂ ಸಹ ದೊಡ್ಡ ರಾಜಕಾರಣಿಗಳಾಗುತ್ತಿದ್ದಾರೆ. ಅವರನ್ನು ದೊಡ್ಡ ರಾಜಕಾರಣಿಗಳನ್ನಾಗಿ ಮಾಡುತ್ತಿದ್ದಾರೆ ಎಂದು ಇದೇ ವೇಳೆ ಪ್ರತಾಪ್ ಸಿಂಹ ಬೇಸರ ವ್ಯಕ್ತಪಡಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.