ಈ ಮನೆ ಮದ್ದನ್ನು ಪ್ರಯತ್ನಿಸಿದರೆ ಬ್ಲಡ್ ಶುಗರ್ ಅನ್ನು ಶಾಶ್ವತವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
ಬೆಂಗಳೂರು : ಮಧುಮೇಹ ಎನ್ನುವುದು ದೀರ್ಘ ಸಮಯದವರೆಗೆ ಕಾಡುವ ಕಾಯಿಲೆ.ಸಲ್ಪ ಕಾಳಜಿ ತಪ್ಪಿದರೂ ಅದು ಬೇರೆ ಬೇರೆ ರೋಗಗಳಿಗೆ ಆಹ್ವಾನ ನೀಡುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮಧುಮೇಹಕ್ಕೆ ನಿತ್ಯ ಔಷಧಿ ತೆಗೆದುಕೊಳ್ಳಲೇ ಬೇಕು. ಒಂದು ದಿನ ತಪ್ಪಿದರೂ ಶುಗರ್ ಲೆವೆಲ್ ಹೆಚ್ಚಾಗಿ ಬಿಡುತ್ತದೆ.ಇದರ ಬದಲು ಈ ಮನೆ ಮದ್ದನ್ನು ಪ್ರಯತ್ನಿಸಿದರೆ ಬ್ಲಡ್ ಶುಗರ್ ಅನ್ನು ಶಾಶ್ವತವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
ನಾವಿಲ್ಲಿ ಹಿತ್ತಲ ತುಂಬಾ ಬೆಳೆಯುವ ಒಂದೆಲಗ ಸೊಪ್ಪಿನ ಬಗ್ಗೆ ಹೇಳುತ್ತಿದ್ದೇವೆ. ಒಂದೆಲಗ ಸೊಪ್ಪು ಬ್ಲಡ್ ಶುಗರ್ ರೋಗಿಗಳಿಗೆ ಅಮೃತವಿದ್ದ ಹಾಗೆ.
ಒಂದೆಲಗ ಸೊಪ್ಪು ಸೇವಿಸಿದ ಕೂಡಲೇ ಬ್ಲಡ್ ಶುಗರ್ ಇಳಿಕೆಯಾಗುತ್ತದೆ.ಈ ಸೊಪ್ಪು ಇನ್ಸುಲಿನ್ ಮಟ್ಟವನ್ನು ಸುಧಾರಿಸುತ್ತದೆ.ಈ ಮೂಲಕ ಬ್ಲಡ್ ಶುಗರ್ ನಿಯಂತ್ರಣದಲ್ಲಿ ಇರಲು ಸಹಾಯ ಮಾಡುತ್ತದೆ.
ಒಂದೆಲಗ ಸೊಪ್ಪನ್ನು ಬೆಳಿಗ್ಗೆ ಹಾಗೆಯೇ ಬಾಯಿಗೆ ಹಾಕಿಕೊಂಡು ಜಗಿದು ರಸ ಹೀರಬಹುದು. ಅಥವಾ ಈ ಎಲೆಯನ್ನು ಚೆನ್ನಾಗಿ ಜಜ್ಜಿ ರಸ ತೆಗೆದು ಸೇವಿಸಬಹುದು.
ಇನ್ನೊಂದು ವಿಧಾನವೆಂದರೆ ಈ ಎಲೆಯನ್ನು ಸ್ವಲ್ಪ ಉಜ್ಜಿ ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು.ತಣ್ಣಗಾದ ಮೇಲೆ ಈ ನೀರನ್ನು ಸೇವಿಸಬಹುದು.
ಸ್ವಲ್ಪ ರುಚಿಕರವಾಗಿ ಇರಬೇಕೆಂದರೆ ಎಲೆಗೆ ಮೆಣಸು, ಜೀರಿಗೆ, ಉಪ್ಪು, ನಿಂಬೆ ರಸ ಸೇರಿಸಿ ಚಟ್ನಿ ಮಾಡುವ ಮೂಲಕ ಕೂಡಾ ತಿನ್ನಬಹುದು. ಹೇಗೆ ಸೇವಿಸಿದರೂ ಇದು ಮಧುಮೇಹವನ್ನು ಶಾಶ್ವತವಾಗಿ ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ