ವೃಶ್ಚಿಕ ರಾಶಿ

  • Sep 30, 2024, 08:51 AM IST
1 /9

ಗುರು ಗ್ರಹವು ಒಂದೇ ರಾಶಿಯಲ್ಲಿ 12 ತಿಂಗಳ ಕಾಲ ಇರುತ್ತದೆ. ಸದ್ಯ ಗುರುವು ವೃಷಭ ರಾಶಿಯಲ್ಲಿ ಕುಳಿತಿದ್ದಾನೆ. ಮೇ 13, 2025 ರ ನಂತರ ರಾಶಿಯನ್ನು ಬದಲಾಯಿಸುತ್ತಾನೆ.

2 /9

ಅಕ್ಟೋಬರ್‌ನಲ್ಲಿ ಗುರು ಗ್ರಹವು ಹಿಮ್ಮುಖ ಚಲನೆ ಆರಂಭಿಸಲಿದೆ. ವೈದಿಕ ಕ್ಯಾಲೆಂಡರ್ ಪ್ರಕಾರ, ಬುಧವಾರ 9 ಅಕ್ಟೋಬರ್ 2024 ರಂದು ವೃಷಭ ರಾಶಿಯಲ್ಲಿ ಗುರು ವಕ್ರಿ ನಡೆಯಲಿದೆ. 

3 /9

ಗುರು ವಕ್ರಿ ಕೆಲವು ರಾಶಿಗಳಿಗೆ ಸಂತೋಷ, ಅದೃಷ್ಟ, ಜ್ಞಾನ ಮತ್ತು ಖ್ಯಾತಿಯನ್ನು ನೀಡಲಿದೆ. ಈ ಬಾರಿ ನವರಾತ್ರಿಯ ಸಮಯದಲ್ಲಿ ನಡೆಯುವ ಗುರು ವಕ್ರಿ  6 ರಾಶಿಗಳ ಅದೃಷ್ಟದ ಬಾಗಿಲನ್ನು ತೆರೆಯಲಿದೆ. 

4 /9

ಗುರು ವಕ್ರಿ ವೃಶ್ಚಿಕ ರಾಶಿಯವರನ್ನು ಶ್ರೀಮಂತರನ್ನಾಗಿ ಮಾಡಬಹುದು. ವ್ಯಾಪಾರವನ್ನು ವಿಸ್ತರಿಸಲು ಅವಕಾಶವಿರುತ್ತದೆ. ಕಾನೂನು ವಿಷಯಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ. ವಿದೇಶ ಪ್ರವಾಸದ ಅವಕಾಶವೂ ಇರುತ್ತದೆ.

5 /9

ಮಿಥುನ ರಾಶಿಯವರಿಗೆ ಗುರು ವಕ್ರಿ ತುಂಬಾ ಮಂಗಳಕರವಾಗಲಿದೆ. ಅದೃಷ್ಟವು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಉದ್ಯೋಗದಲ್ಲಿ ಬಡ್ತಿಯೊಂದಿಗೆ ಸಂಬಳ ಹೆಚ್ಚಾಗುವ ಸಾಧ್ಯತೆಗಳಿವೆ. ವೈವಾಹಿಕ ಜೀವನ ಸುಧಾರಿಸುತ್ತದೆ ಮತ್ತು ಕುಟುಂಬದಲ್ಲಿ ಸಂತೋಷ ಇರುತ್ತದೆ.

6 /9

ಗುರುಗ್ರಹದ ಹಿಮ್ಮುಖ ಚಲನೆಯಿಂದ ಕರ್ಕ ರಾಶಿಯ ಜನರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಅನಾವಶ್ಯಕ ಖರ್ಚು-ವೆಚ್ಚಗಳಿಂದ ಮುಕ್ತಿ ಪಡೆಯುವಿರಿ. ಆದಾಯ ಹೆಚ್ಚಾಗುವುದು. ನ್ಯಾಯಾಲಯದ ಪ್ರಕರಣಗಳಲ್ಲೂ ಪರಿಹಾರ ದೊರೆಯಲಿದೆ.

7 /9

ಕನ್ಯಾ ರಾಶಿಯ ಜನರು ಉದ್ಯೋಗ ಮತ್ತು ವ್ಯವಹಾರದಲ್ಲಿ ಅಪೇಕ್ಷಿತ ಯಶಸ್ಸನ್ನು ಪಡೆಯುತ್ತಾರೆ. ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ. ವ್ಯಾಪಾರ-ವ್ಯವಹಾರದಲ್ಲಿ ಅಧಿಕ ಲಾಭ ದೊರೆಯಲಿದೆ.  

8 /9

ಧನು ರಾಶಿಯವರಿಗೆ ಗುರುವಿನ ಈ ಚಲನೆ ತುಂಬಾ ಪ್ರಯೋಜನಕಾರಿಯಾಗಿದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಪಡೆಯುತ್ತಾರೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. 

9 /9

ಸೂಚನೆ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.