ಆ ಖ್ಯಾತ ನಟಿಯೊಂದಿಗೆ ಅಭಿಷೇಕ್‌ ಬಚ್ಚನ್‌ ಸೀಕ್ರೆಟ್ ಅಫೇರ್?! ಇದೇ ಕಾರಣಕ್ಕೆ ಐಶ್ವರ್ಯ ರೈ ಪತಿಯಿಂದ ದೂರವಾಗಿದ್ದಾರಾ!?

Abhishek Bachchan-Aishwarya Rai: ಅಭಿಷೇಕ್ ಮತ್ತು ಐಶ್ವರ್ಯ ರೈ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿಲ್ಲ.. ಜೋಡಿಯಾಗಿ ಎಲ್ಲಿಯೂ ಹೋಗುತ್ತಿಲ್ಲ. ಬಚ್ಚನ್ ಫ್ಯಾಮಿಲಿ ಫೋಟೋಗಳಲ್ಲಿ ಐಶ್ವರ್ಯಾ ಇಲ್ಲ. ಇವರಿಬ್ಬರ ಸಂಬಂಧ ಹಳಸಿದ್ದು, ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದಾರೆ ಎಂಬ ವರದಿಗಳೂ ಇವೆ.

1 /10

ಸಿನಿಮಾ ಸೆಲೆಬ್ರಿಟಿಗಳು ಮದುವೆಯಾಗಿ ವಿಚ್ಛೇದನ ಪಡೆಯುವುದು ಕೂಡ ಸಾಮಾನ್ಯ. ಸಮಂತಾ-ನಾಗಚೈತನ್ಯ ಮತ್ತು ಧನುಷ್-ಐಶ್ವರ್ಯ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದರೂ ಕೊನೆಗೆ ವಿಚ್ಛೇದನ ಪಡೆಯುವ ಮೂಲಕ ಶಾಕ್ ಕೊಟ್ಟ ಜೋಡಿಗಳು.   

2 /10

ಇಂತಹ ಸೆಲೆಬ್ರಿಟಿ ಜೋಡಿಗಳು ಬೇರ್ಪಡುವ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಅನ್ ಫಾಲೋ ಮಾಡಲಾಗುತ್ತಿದ್ದು, ಮೊದಲಿನಂತೆ ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ. ಬಾಲಿವುಡ್ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಕೂಡ ಈಗ ಅಂತಹ ಸುಳಿವು ನೀಡುತ್ತಿದ್ದಾರೆ.  

3 /10

ಅಭಿಷೇಕ್ ಮತ್ತು ಐಶ್ವರ್ವ ಒಟ್ಟಿಗೆ ಕಾಣಿಸಿಕೊಂಡಿಲ್ಲ.. ಜೋಡಿಯಾಗಿ ಎಲ್ಲಿಯೂ ಹೋಗುತ್ತಿಲ್ಲ. ಬಚ್ಚನ್ ಫ್ಯಾಮಿಲಿ ಫೋಟೋಗಳಲ್ಲಿ ಐಶ್ವರ್ಯಾ ಇಲ್ಲ. ಇವರಿಬ್ಬರ ಸಂಬಂಧ ಹಳಸಿದ್ದು, ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದಾರೆ ಎಂಬ ವರದಿಗಳೂ ಇವೆ.   

4 /10

ಆದರೆ ಈ ಗ್ಯಾಪ್‌ಗೆ ಅಭಿಷೇಕ್ ಅವರ ಇನ್ನೊಂದು ವಿಚಾರವೇ ಕಾರಣ ಎನ್ನುತ್ತಿವೆ ವದಂತಿ. ಐಶ್ ಬದುಕಿಗೆ ಮತ್ತೊಬ್ಬ ನಾಯಕಿ ಎಂಟ್ರಿ ಕೊಟ್ಟಿರುವುದರಿಂದ ಅವರ ಜತೆಗಿನ ಅಂತರ ಹೆಚ್ಚಿದೆ ಎಂಬ ಮಾತು ಕೇಳಿ ಬರುತ್ತಿದೆ.  

5 /10

ಇತ್ತೀಚಿನ ರೆಡ್ಡಿಟ್ ಪೋಸ್ಟ್ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವದಂತಿಗಳಿವೆ... ಈ ಪೋಸ್ಟ್‌ನಿಂದ ಐಶ್ವರ್ಯಾ ತನ್ನ ತಾಯಿ ಮತ್ತು ಮಗಳು ಆರಾಧ್ಯ ಅವರೊಂದಿಗೆ ಬೇರೆ ಮನೆಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ..   

6 /10

ಆದರೆ ಇಬ್ಬರೂ ಕಾನೂನುಬದ್ಧವಾಗಿ ವಿಚ್ಛೇದನ ಪಡೆಯುವ ಉದ್ದೇಶವನ್ನು ಹೊಂದಿಲ್ಲ. ಇದಕ್ಕೆ ಕಾರಣ ಅಭಿಷೇಕ್ ತಾಯಿ ಜಯಾ ಬಚ್ಚನ್ ಅಥವಾ ಸಹೋದರಿ ಶ್ವೇತಾ ಬಚ್ಚನ್ ಅಲ್ಲ ಎಂದೂ ಪೋಸ್ಟ್ ನಲ್ಲಿ ಹೇಳಲಾಗಿದೆ. ಹಾಗಾದ್ರೆ ಕಾರಣ ಯಾರು?  

7 /10

ಇತ್ತೀಚೆಗೆ ಅಭಿಷೇಕ್ ತಮ್ಮ ವೃತ್ತಿಜೀವನದ ಬಗ್ಗೆ ತುಂಬಾ ಚಿಂತಿತರಾಗಿದ್ದಾರೆ, ಅವರು 'ದಸ್ವಿ' ಚಿತ್ರದ ಶೂಟಿಂಗ್ ಸಮಯದಲ್ಲಿ ಭೇಟಿಯಾದ ನಿಮ್ರತ್ ಕೌರ್ ಜೊತೆಗೂ ಸಂಬಂಧವನ್ನು ಪ್ರಾರಂಭಿಸಿದರು. ಇಬ್ಬರಿಗೂ ರಿಲೇಶನ್ ಶಿಪ್ ಇದೆ ಎಂದು ತಿಳಿದು ಐಶ್ವರ್ಯಾ ಜಗಳ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅದರ ನಂತರ, ಇತ್ತೀಚಿನ ರೆಡ್ಡಿಟ್ ಪೋಸ್ಟ್‌ನಲ್ಲಿ, ಅವರ ವೈವಾಹಿಕ ಸಂಬಂಧದಲ್ಲಿನ ಸಮಸ್ಯೆಗಳು ಹೆಚ್ಚು ಗಂಭೀರವಾಗಿದೆ ಎಂದು ಹೇಳಲಾಗ್ತಿದೆ..   

8 /10

ರೆಡ್ಡಿಟ್ ಬಳಕೆದಾರರ ಪ್ರಕಾರ, ಅಭಿಷೇಕ್‌ಗೆ ಐಶ್ವರ್ಯಾ ಮೇಲೆ ತುಂಬಾ ಅನುಮಾನವಿತ್ತು. ಅಲ್ಲದೇ ನಟ ತನ್ನ ಸಿನಿಮಾಗಳು ಸೋಲುವ ಕಾರಣಕ್ಕೆ ಅವರು ಯಾವಾಗಲೂ ಅಸಮಾಧಾನಗೊಂಡಿದ್ದಾರೆ. ಪ್ರತಿ ಚಿತ್ರದಿಂದ ತಾನೂ ಸ್ಟಾರ್ ಆಗುತ್ತೇನೆ ಎಂದು ಭಾವಿಸುತ್ತಾನೆ ಆದರೆ ಅದು ಆಗಲಿಲ್ಲ. ‘ದಸ್ವಿ’ ಸಿನಿಮಾದ ಶೂಟಿಂಗ್ ವೇಳೆ ನಿಮ್ರತ್ ಕೌರ್ ಜೊತೆ ಅಫೇರ್ ಶುರುವಾದಾಗ ವಿಷಯಗಳು ಜಟಿಲವಾಗಿದ್ದವು..   

9 /10

ನಿಮ್ರತ್ ಈ ಸಂಬಂಧವನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದರೂ, ಅಭಿಷೇಕ್ ತನ್ನ ತಪ್ಪನ್ನು ಅರಿತು ಅವಳೊಂದಿಗೆ ಬ್ರೇಕಪ್‌ ಮಾಡಿಕೊಂಡಿದ್ದರು ಎಂದು ರೆಡ್ಡಿಟ್ ಬಳಕೆದಾರರ ಹೇಳಿಕೊಂಡಿದ್ದಾರೆ... ಈಗ ಅವರು ಐಶ್ವರ್ಯಾ ಅವರಿಂದ ಬೇರ್ಪಟ್ಟಿದ್ದಾರೆ. ಆದರೆ ಇಬ್ಬರೂ ವಿಚ್ಛೇದನ ಪಡೆಯುವುದು ಸುಲಭದ ಮಾತಲ್ಲ ಎಂದು ಬಳಕೆದಾರರು ಹೇಳಿದ್ದಾರೆ.  

10 /10

ಆದರೆ, ಈ ವದಂತಿಗಳ ಬಗ್ಗೆ ಅಭಿಷೇಕ್ ಆಗಲಿ ಅಥವಾ ಐಶ್ವರ್ಯಾ ಆಗಲಿ ಮಾತನಾಡಿಲ್ಲ. ಇಬ್ಬರೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ. ಈ ವದಂತಿಗಳ ಬಗ್ಗೆ ದಂಪತಿಗಳು ಮಾತನಾಡದ ಕಾರಣ, ಅಭಿಮಾನಿಗಳು ಇನ್ನೂ ಸತ್ಯ ಏನು ಎಂದು ಗೊಂದಲದಲ್ಲಿದ್ದಾರೆ. ಇದಲ್ಲದೆ, ಇನ್ನೊಬ್ಬ ರೆಡ್ಡಿಟ್ ಬಳಕೆದಾರರು ಐಶ್ವರ್ಯಾ ಆರೋಗ್ಯ ಸಮಸ್ಯೆಗಳಿಂದ ತೂಕ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆಯೂ ಐಶ್ವರ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.