ದೀಪಾವಳಿ ದಾನ

  • Oct 28, 2024, 11:51 AM IST
1 /6

ಕಾರ್ತಿಕ ಕೃಷ್ಣನ ತ್ರಯೋದಶಿ ದಿನ ಅಂದರೆ ಧನ ತ್ರಯೋದಶಿ ದಿನ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಿಸಿಕೊಳ್ಳುವ ಶುಭ ದಿನ ಎನ್ನಲಾಗಿದೆ.ಈ ವರ್ಷ ಅಕ್ಟೋಬರ್ 29, 2024 ರಂದು ಧನತ್ರಯೋದಶಿಯನ್ನು ಆಚರಿಸಲಾಗುತ್ತದೆ.ಈ ದಿನ ಆರೋಗ್ಯದ ದೇವರು ಧನ್ವಂತರಿ, ಸಂಪತ್ತು ಕುಬೇರ ಮತ್ತು  ಲಕ್ಷ್ಮೀಯನ್ನು ಪೂಜಿಸಲಾಗುತ್ತದೆ.

2 /6

ಧನತ್ರಯೋದಶಿ ದಿನ ಚಿನ್ನ, ಬೆಳ್ಳಿ, ಪಾತ್ರೆಗಳು, ಬಟ್ಟೆ, ಆಭರಣಗಳು ಮತ್ತು ಪೊರಕೆಯನ್ನು ಖರೀದಿಸುವುದು ತುಂಬಾ ಮಂಗಳಕರವಾಗಿದೆ. ಇದರೊಂದಿಗೆ ಧನತ್ರಯೋದಶಿ ದಿನದಂದು ದಾನ ಮಾಡುವುದು ಕೂಡಾ ಅಷ್ಟೇ ಮುಖ್ಯ.  

3 /6

ಧನತ್ರಯೋದಶಿ ದಿನವನ್ನು ಲಕ್ಷ್ಮಿ ದೇವಿಗೆ ಸಮರ್ಪಿಸಲಾಗಿದೆ. ಲಕ್ಷ್ಮಿ ಮತ್ತು ಶುಕ್ರ ಗ್ರಹವು ಬಿಳಿ ವಸ್ತುಗಳಿಗೆ ಸಂಬಂಧಿಸಿದ್ದಾಗಿದೆ. ಆದ್ದರಿಂದ, ಧನತ್ರಯೋದಶಿ ದಿನ  ಸಾಮರ್ಥ್ಯಕ್ಕೆ ಅನುಗುಣವಾಗಿ ಅಕ್ಕಿ, ಸಕ್ಕರೆ, ಹಾಲು ಮತ್ತು ಹಿಟ್ಟು ಮುಂತಾದ ಬಿಳಿ ವಸ್ತುಗಳನ್ನು ದಾನ ಮಾಡಿ.

4 /6

ಧನತ್ರಯೋದಶಿ ದಿನದಂದು ದೇವಾಲಯದಲ್ಲಿ ಪೊರಕೆ ಖರೀದಿಸುವುದು ಮತ್ತು ದಾನ ಮಾಡುವುದು ತುಂಬಾ ಶ್ರೇಯಸ್ಕರ.ಧನತ್ರಯೋದಶಿ ದಿನದಂದು  ಪೊರಕೆಯನ್ನು ದೇವಾಲಯಕ್ಕೆ ದಾನ ಮಾಡಿದರೆ ಸಿರಿವಂತರಾಗುವುದು ಖಚಿತ ಎನ್ನಲಾಗಿದೆ. ದೇವಾಲಯಕ್ಕೆ ಪೊರಕೆ ದಾನ ಮಾಡುವವರು ಎಂದಿಗೂ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವುದಿಲ್ಲ.

5 /6

ಧನತ್ರಯೋದಶಿ ದಿನದಂದು ಬಡವರು ಮತ್ತು ನಿರ್ಗತಿಕರಿಗೆ ಆಹಾರವನ್ನು ದಾನ ಮಾಡಿ. ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿ ಸಂತೋಷಗೊಳ್ಳುತ್ತಾಳೆ. ಇದರಿಂದ  ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.

6 /6

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. sZEE NEWS ಇದನ್ನು ಖಚಿತಪಡಿಸುವುದಿಲ್ಲ.