Nagma Marriage: ಈ ಸ್ಟಾರ್ ಹೀರೋಯಿನ್ ಕನ್ನಡದ ಸಿನಿ ಜನರಿಗೆ ಅತಿ ಹತ್ತಿರದವರು. ತಮ್ಮ ಬ್ಯೂಟಿಯಿಂದಲೇ ಜನರ ಮನಗೆದ್ದ ಈ ಚೆಲುವೆ ಇದೀಗ 49ನೇ ವಯಸ್ಸಿನಲ್ಲಿ ಮದುವೆಗೆ ಆಗಲಿದ್ದಾರೆ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಹಿರಿಯ ನಟಿ ನಗ್ಮಾ ಟಾಲಿವುಡ್, ಬಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳನ್ನು ತಮ್ಮತ್ತ ಸೆಳೆದ ಸುಂದರಿ. ಒಂದು ಕಾಲದಲ್ಲಿ ಗ್ಲಾಮರ್ ವಿಷಯದಲ್ಲಿ ನಗ್ಮಾಗೆ ಪೈಪೋಟಿ ನೀಡುವವರು ಯಾರೂ ಇರಲಿಲ್ಲ. ಸಿನಿಮಾದಲ್ಲಿ ನಗ್ಮಾ ಡೇಟ್ಗಾಗಿ ದಿನಗಟ್ಟಲೆ ಕಾಯುತ್ತಿದ್ದರು.
ರೀಲ್ ಲೈಫ್ ನಲ್ಲಿ ಎಲ್ಲಾ ವರ್ಚಸ್ಸು ಪಡೆದಿದ್ದ ನಟಿ ರಿಯಲ್ ಲೈಫ್ ನಲ್ಲಿ ಎಡವಿದರು ಎಂದು ಹೇಳಲಾಗುತ್ತದೆ. ನಟಿ ನಗ್ಮಾ ಹೆಸರು ನಾಲ್ಕು ಸೆಲಿಬ್ರಿಟಿಗಳ ಜೊತೆ ಸೇರಿಕೊಂಡಿತ್ತು.
ಆರಂಭದಲ್ಲಿ ನಟಿ ನಗ್ಮಾ ಅವರು ಸೌರಭ್ ಗಂಗೂಲಿ ಅವರನ್ನು ಪ್ರೀತಿಸುತ್ತಿದ್ದರು ಎಂಬ ವದಂತಿ ಇತ್ತು. ಆದರೆ ಗಂಗೂಲಿಗೆ ಆಗಲೇ ಮದುವೆಯಾಗಿತ್ತು. ನಗ್ಮಾ ಮತ್ತು ಸೌರಭ್ ಮದುವೆ ಆಗಲೂ ಸಹ ಬಯಸಿದ್ದರು ಎನ್ನಲಾಗುತ್ತದೆ.
ನಗ್ಮಾ ಮತ್ತು ಸೌರಭ್ ತಿರುಪತಿಯಲ್ಲಿ ಮದುವೆಯಾಗಲು ಬಯಸಿದ್ದರು ಎನ್ನಲಾಗಿದೆ. ಆದರೆ ಗಂಗೂಲಿ ಅವರ ಪತ್ನಿಗೆ ಈ ವಿಷಯ ತಿಳಿದಾಗ ಮದುವೆ ರದ್ದಾಗಿದೆ ಎಂಬ ಬಹುದೊಡ್ಡ ವದಂತಿಯೊಂದು ಆ ಕಾಲದಲ್ಲಿ ಹಬ್ಬಿತ್ತು.
ಆ ನಂತರ ಕೆಲಕಾಲ ನಟ ಶರತ್ ಕುಮಾರ್ ಜೊತೆಗೆ ನಟಿ ನಗ್ಮಾ ಸಂಬಂಧದ ವರದಿಗಳು ಶುರುವಾದವು. ಶರತ್ ಕುಮಾರ್ ಕೂಡ ಮದುವೆಯಾದವರೇ ಆಗಿದ್ದರು. ಶರತ್ ಕುಮಾರ್ ಮತ್ತು ನಗ್ಮಾ ಸಂಬಂಧ ಅರ್ಧಕ್ಕೆ ಮುರಿದುಬಿತ್ತು. ಶರತ್ ಕುಮಾರ್ ರಾಧಿಕಾ ಅವರನ್ನು ಎರಡನೇ ಮದುವೆಯಾದರು.
ನಗ್ಮಾ ಹೆಸರು ಬಳಿಕ ನಟ ರವಿಕಿಶನ್ ಜೊತೆ ತಳಕು ಹಾಕಿಕೊಂಡಿತು. ಇಬ್ಬರೂ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಾರೆ ಎನ್ನಲಾಗಿತ್ತು. ಆದರೆ ಅವರ ನಡುವೆ ಜಗಳ ನಡೆದಿತ್ತು. ಬ್ರೇಕಪ್ ಆಯೊತು ಎನ್ನಲಾಗುತ್ತದೆ. ಬಳಿಕ ಭೋಜ್ಪುರಿ ಸ್ಟಾರ್ ಮನೋಜ್ ತಿವಾರ್ಗೆ ನಗ್ಮಾ ಹತ್ತಿರವಾದರು. ಈ ಸಂಬಂಧ ಕೂಡ ಮದುವೆಗೆ ಬರಲಿಲ್ಲ.
ಇತ್ತೀಚೆಗೆ ನಟಿ ನಗ್ಮಾ ಬಾಲಿವುಡ್ ಹೀರೋ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬುತ್ತಿದೆ. ಸದ್ಯದಲ್ಲೇ ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ವರದಿಗಳು ಬರುತ್ತಿವೆ. (ಈ ಸುದ್ದಿ ವೈರಲ್ ಸಂಗತಿಗಳ ಆಧಾರಿತವಾಗಿದೆ. ನಗ್ಮಾ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.)