Virat Kohli Health Problem: ಕಳೆದ ದಿನ ಅಂದರೆ ನವೆಂಬರ್ 5ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದ ವಿರಾಟ್ ಕೊಹ್ಲಿ ಬಗ್ಗೆ ಆಘಾತಕಾರಿ ಸುದ್ದಿಯೊಂದು ಬಹಿರಂಗಗೊಂಡಿದೆ. ಫಿಟ್ನೆಸ್ಗೆ ಭಾರೀ ಪ್ರಾಮುಖ್ಯತೆ ನೀಡುವ ಕೊಹ್ಲಿ ಅಪಾಯಕಾರಿ ಕಾಯಿಲೆಗೆ ತುತ್ತಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕಳೆದ ದಿನ ಅಂದರೆ ನವೆಂಬರ್ 5ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದ ವಿರಾಟ್ ಕೊಹ್ಲಿ ಬಗ್ಗೆ ಆಘಾತಕಾರಿ ಸುದ್ದಿಯೊಂದು ಬಹಿರಂಗಗೊಂಡಿದೆ. ಫಿಟ್ನೆಸ್ಗೆ ಭಾರೀ ಪ್ರಾಮುಖ್ಯತೆ ನೀಡುವ ಕೊಹ್ಲಿ ಅಪಾಯಕಾರಿ ಕಾಯಿಲೆಗೆ ತುತ್ತಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ವಿರಾಟ್ ಅತ್ಯುತ್ತಮ ಕ್ರಿಕೆಟಿಗ ಎಂಬುದನ್ನು ಮತ್ತೊಮ್ಮೆ ಹೇಳುವ ಅಗತ್ಯವೇ ಇಲ್ಲ. ಇಡೀ ಜಗತ್ತಿಗೆ ತಿಳಿದಿರುವ ಸಾರ್ವಕಾಲಿಕ ಸತ್ಯವದು. ಆದರೆ ಇವೆಲ್ಲದರ ಹೊರತಾಗಿ ಅವರು ಮತ್ತಷ್ಟು ಸುದ್ದಿಯಾಗೋದು ತಮ್ಮ ಫಿಟ್ನೆಸ್ ಕಾರಣದಿಂದ. ಇಷ್ಟೆಲ್ಲಾ ಫಿಟ್ನೆಸ್ ಕಾಯ್ದುಕೊಂಡು, ಆಹಾರ ಕ್ರಮದಲ್ಲಿ ಬದ್ಧತೆ ಅನುಸರಿಸಲು ಮುಖ್ಯ ಕಾರಣವೊಂದಿದೆ ಎಂದು ಹೇಳಲಾಗುತ್ತದೆ.
ಕೆಲವು ಸಮಯದ ಹಿಂದೆ ವಿರಾಟ್ ಕೊಹ್ಲಿಗೆ ಹರ್ನಿಯೇಟೆಡ್ ಡಿಸ್ಕ್ ಎಂಬ ಸಮಸ್ಯೆ ಕಾಣಿಸಿಕೊಂಡಿತ್ತು. ಇದರ ಪರಿಣಾಮದಿಂದಾಗಿ ಕೊಹ್ಲಿ 2018 ರ ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ಸಹ ಆಡಲು ಸಾಧ್ಯವಾಗಿರಲಿಲ್ಲ.
ಅಂದಹಾಗೆ ಹರ್ನಿಯೇಟೆಡ್ ಡಿಸ್ಕ್ ಅನ್ನು ಸ್ಲಿಪ್ಡ್ ಡಿಸ್ಕ್ ಅಥವಾ ಡಿಸ್ಕ್ ಪ್ರೋಲ್ಯಾಪ್ಸ್ ಎಂದೂ ಕರೆಯಲಾಗುತ್ತದೆ. ಬೆನ್ನುಮೂಳೆಯ ತಪ್ಪು ಭಂಗಿಯಿಂದಾಗಿ ಈ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆಯನ್ನು ಗುಣಪಡಿಸಬಹುದು. ಆದರೆ ಒಂದುವೇಳೆ ಕಾಯಿಲೆ ಪ್ರಮಾಣ ತೀವ್ರ ಎನಿಸಿದರೆ ಶಸ್ತ್ರಚಿಕಿತ್ಸೆಯನ್ನೇ ಮಾಡಬೇಕಾಗುತ್ತದೆ.
ಇನ್ನು ಹರ್ನಿಯೇಟೆಡ್ ಮತ್ತು ಸ್ಲಿಪ್ ಡಿಸ್ಕ್ನಂತಹ ಸಮಸ್ಯೆ ಬರಲು ಅನೇಕ ಕಾರಣಗಳಿವೆ. ಜೊತೆಗೆ ಈ ಸಮಸ್ಯೆ ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂದು ವರದಿಗಳು ಹೇಳುತ್ತವೆ. ಇದರ ಹಿಂದಿನ ಕಾರಣವೆಂದರೆ ದೈಹಿಕ ಚಟುವಟಿಕೆಯ ಕೊರತೆ, ಸರಿಯಾಗಿ ಕುಳಿತುಕೊಳ್ಳದಿರುವುದು ಅಥವಾ ಯಾವಾಗಲೂ ಒರಟಾದ ಸ್ಥಾನದಲ್ಲಿ ಕುಳಿತುಕೊಳ್ಳುವುದು, ಬಾಗುವುದು, ಭಾರವಾದ ವಸ್ತುಗಳನ್ನು ಎತ್ತುವುದು, ಬೆನ್ನುಹುರಿಯ ಗಾಯ ಹೀಗೆ ಹಲವಾರು ಕಾರಣಗಳಿವೆ.
ಹರ್ನಿಯೇಟೆಡ್ ಡಿಸ್ಕ್ ಸಮಸ್ಯೆ ಬಂತೆಂದರೆ, ಸರಿಯಾಗಿ ಕೆಲಸ ಮಾಡಲು ಅಥವಾ ತಿರುಗಾಡಲು ತೊಂದರೆಯಾಗುತ್ತದೆ. ಜೊತೆಗೆ ಅಸಹನೀಯ ಬೆನ್ನು ನೋವು, ಬೆರಳುಗಳು ಮತ್ತು ಕಾಲ್ಬೆರಳುಗಳ ಮರಗಟ್ಟುವಿಕೆ, ಸೊಂಟದ ಸ್ನಾಯುಗಳು ಮತ್ತು ಮೂಳೆಗಳು ದುರ್ಬಲಗೊಳ್ಳುವುದು ಅಥವಾ ನೋವು ಅನುಭವಿಸುವುದು, ಬೆನ್ನುಹುರಿಯ ಮೇಲೆ ಅತಿಯಾದ ಒತ್ತಡ ಬಿದ್ದಂತೆ ಅನಿಸುವುದು ಹೀಗೆ ಆಗುತ್ತದೆ.
ಈ ಸಮಸ್ಯೆಯನ್ನು ಹಲವು ವಿಧಗಳಲ್ಲಿ ಸರಿಪಡಿಸಬಹುದು. ಆದರೆ ಇದಕ್ಕೆ ನೀಡುವ ಚಿಕಿತ್ಸೆಯು, ಸಮಸ್ಯೆ ಎಷ್ಟು ಗಂಭೀರವಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಈ ಸಮಸ್ಯೆ ಇದ್ದಾಗ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದರೆ, ಶಸ್ತ್ರಚಿಕಿತ್ಸೆ ಅಗತ್ಯವಿರುವುದಿಲ್ಲ. ಔಷಧಿಗಳು ಮತ್ತು ಮನೆಮದ್ದುಗಳಿಂದಲೂ ಇದನ್ನು ಗುಣಪಡಿಸಬಹುದು
ಇದರ ಜೊತೆಗೆ ಗರ್ಭಕಂಠದ ಬೆನ್ನುಮೂಳೆಯ ಸಮಸ್ಯೆಯಿಂದಲೂ ವಿರಾಟ್ ಬಳಲುತ್ತಿದ್ದಾರೆ ಎನ್ನಲಾಗಿದೆ. ಇದೇ ಕಾರಣದಿಂದ ವಿರಾಟ್ ಇಷ್ಟಪಟ್ಟು ತಿನ್ನುತ್ತಿದ್ದ ನಾನ್ವೆಜ್ ಆಹಾರಗಳನ್ನು ತ್ಯಜಿಸಿದ್ದಾರೆ. ಈ ಸಮಸ್ಯೆ ಕಾಣಿಸಿಕೊಂಡರೆ, ಕೈಕಾಲುಗಳು ಕೂಡ ಸ್ಥಿರತೆ ಕಳೆದುಕೊಂಡು ನಡುಗಲು ಪ್ರಾರಂಭವಾಗುತ್ತವೆ. ಜೊತೆಗೆ ಹೊಟ್ಟೆ ಸಮಸ್ಯೆ ಮತ್ತು ಯೂರಿಕ್ ಆಸಿಡ್ ಮಟ್ಟದಲ್ಲಿ ಹೆಚ್ಚಳ ಕೂಡ ಇದರಿಂದ ಕಾಣಿಸಿಕೊಳ್ಳುತ್ತವೆ. ಈ ಕಾರಣದಿಂದಾಗೇ ಕೊಹ್ಲಿ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ.