46ನೇ ವಯಸ್ಸಿನಲ್ಲಿ ಸ್ಟಾರ್‌ ನಟಿ ಜೊತೆ 2ನೇ ಮದುವೆಯಾದ ಖ್ಯಾತ ನಟ.! ಇವರ ಅಜ್ಜಿ ಕನ್ನಡದ ಫೇಮಸ್‌ ಹಿನ್ನೆಲೆ ಗಾಯಕಿ

Sai Kiran Ram Second Marriage: ಖ್ಯಾತ ನಟ ತನ್ನ 46 ನೇ ವಯಸ್ಸಿನಲ್ಲಿ ತಮ್ಮ ಸಹನಟಿಯನ್ನು ವರಿಸಲು ರೆಡಿಯಾಗಿದ್ದಾರೆ. ಈ ನಟನ ಎಂಗೇಜ್ಮೆಂಟ್‌ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ. 

1 /7

ಖ್ಯಾತ ನಟ ತನ್ನ 46 ನೇ ವಯಸ್ಸಿನಲ್ಲಿ ತಮ್ಮ ಸಹನಟಿಯನ್ನು ವರಿಸಲು ರೆಡಿಯಾಗಿದ್ದಾರೆ. ಈ ನಟನ ಎಂಗೇಜ್ಮೆಂಟ್‌ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ.   

2 /7

ನಟ ಸಾಯಿಕಿರಣ್ 2010 ರಲ್ಲಿ ವೈಷ್ಣವಿ ಎಂಬ ಯುವತಿಯೊಂದಿಗೆ ಮೊದಲ ಮದುವೆಯಾಗಿದ್ದರು. ಈ ದಂಪತಿಗೆ ಹೆಣ್ಣು ಮಗು ಕೂಡ ಇದೆ. ಆದರೆ ವೈಷ್ಣವಿ ಮತ್ತು ಸಾಯಿಕಿರಣ್ ವಿಚ್ಛೇದನ ಪಡೆದುಕೊಂಡಿದ್ದಾರೆ.

3 /7

ನುವ್ವೇ ಕಾವಲಿ ಸಿನಿಮಾದಲ್ಲಿ ನಟಿಸುವ ಮೂಲಕ ತೆಲುಗು ಸಿನಿಪ್ರಿಯರಿಗೆ ಸಾಯಿಕಿರಣ್‌ ಪರಿಚಯವಾಗಿದ್ದರು. ನಟ ಸಾಯಿ ಕಿರಣ್ ಪ್ರೇಮಿಂಚು ಸಿನಿಮಾ ಮೂಲಕ ಜನರ ಮನಸ್ಸಿಗೆ ಹತ್ತಿರವಾದರು.

4 /7

ಸಾಯಿ ಕಿರಣ್‌ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಎರಡನೇ ಮದುವೆ ಆಗಲು ಸಿದ್ಧರಾಗಿದ್ದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. 

5 /7

ಸಾಯಿಕಿರಣ್ ಅವರು ಖ್ಯಾತ ಗಾಯಕಿ ಪಿ.ಸುಶೀಲಾ ಅವರ ಮೊಮ್ಮಗನಾಗಿದ್ದಾರೆ. ಸಾಯಿಕಿರಣ್ ತಂದೆ-ತಾಯಿಯೂ ಚಿತ್ರರಂಗದಲ್ಲಿ ಸಾಕಷ್ಟು ಖ್ಯಾತಿ ಪಡೆದವರು.

6 /7

ಸಾಯಿ ಕಿರಣ್ ತಮ್ಮ ಜೊತೆ ಕೊಯಿಲಮ್ಮ ಧಾರಾವಾಹಿಯಲ್ಲಿ ನಟಿಸಿದ ಶ್ರವಂತಿ ಎಂಬ ನಟಿಯೊಂದಿಗೆ ಎರಡನೇ ಬಾರಿ ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗಿದೆ.

7 /7

ಸಾಯಿ ಕಿರಣ್  ಮತ್ತು ಶ್ರವಂತಿ ನಿಶ್ಚಿತಾರ್ಥ ಮಾಡಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ.