Aloe Vera For Healthy and Thick Hair: ಕೆಲವರು ಕೂದಲು ಉದುರುವುವ ಸಮಸ್ಯೆಯನ್ನು ಎದುರಿಸಿ ಬೇಸೋತ್ತಿರುತ್ತಾರೆ.. ಎಷ್ಟೇ ಉತ್ಪನ್ನಗಳನ್ನು ಬಳಸಿದರೂ ಫಲಿತಾಂಶ ಸಿಗುತ್ತಿರುವುದಿಲ್ಲ... ಅಂತಹ ಜನರಿಗೆ, ಅಲೋವೇರಾ ಒಂದು ವರದಾನದಂತೆ ಕೆಲಸ ಮಾಡುತ್ತದೆ. ಅಲೋವೆರಾವನ್ನು ಈ ಕೆಳಗಿನಂತೆ ವಾರಕ್ಕೆ ಎರಡು ಬಾರಿ ಹಚ್ಚಿದರೆ ಕೂದಲು ಪೋಷಣೆ ಪಡೆದು ಚೆನ್ನಾಗಿ ಬೆಳೆಯುತ್ತದೆ.
ಅಲೋವೆರಾ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತ್ವಚೆಯ ಸೌಂದರ್ಯಕ್ಕಾಗಿ ಅಲೋವೆರಾವನ್ನು ಅನೇಕರು ಬಳಸುತ್ತಾರೆ. ಅಲೋವೆರಾ ಚರ್ಮಕ್ಕೆ ಮಾತ್ರವಲ್ಲದೆ ಕೂದಲಿಗೆ ಸಹ ಒಳ್ಳೆಯದು.
ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಅಲೋವೆರಾ ಚರ್ಮ ಮತ್ತು ಕೂದಲಿನ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ಕೂದಲನ್ನು ಆರೋಗ್ಯವಾಗಿಡುವಲ್ಲಿ ಅಲೋವೆರಾಕ್ಕಿಂತ ಮಿಗಿಲಾದ ಪರಿಹಾರವಿಲ್ಲ ಎಂದರೆ ಅತಿಶಯೋಕ್ತಿಯಲ್ಲ.
ಅಲೋವೆರಾದಲ್ಲಿ ಎರಡು ರೀತಿಯ ಉಪಯೋಗಗಳಿವೆ. ಇದು ಆರೋಗ್ಯ ಮತ್ತು ಸೌಂದರ್ಯ ಎರಡನ್ನು ನೋಡಿಕೊಳ್ಳುತ್ತದೆ.. ಇಂದಿನ ಕಾಲದಲ್ಲಿ ಕೂದಲು ಉದುರುವ ಸಮಸ್ಯೆ ಅನೇಕರಲ್ಲಿದೆ. ಆದರೆ ಇದೀಗ ಕೂದಲು ಬೆಳವಣಿಗೆಗೆ ಅಲೋವೆರಾವನ್ನು ಹೇಗೆ ಬಳಸಬೇಕೆಂದು ಇಲ್ಲಿ ತಿಳಿಯೋಣ.
ಒಂದು ಬೌಲ್ ತೆಗೆದುಕೊಳ್ಳಿ.. ಅದಕ್ಕೆ ನಾಲ್ಕು ಚಮಚ ಅಲೋವೇರಾ ತಿರುಳನ್ನು ಹಾಕಿ. ನಂತರ ಎರಡು ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇನ್ನೂ ಎರಡು ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ. ಈಗ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಈ ಮಿಶ್ರಣವನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿಕೊಳ್ಳಿ. ನಿಮ್ಮ ಕೂದಲಿನ ಪ್ರಕಾರಕ್ಕೆ ಅಲೋವೆರಾ ಮತ್ತು ಎಣ್ಣೆಯನ್ನು ಸೇರಿಸಿ. ಕೂದಲಿಗೆ ಹಚ್ಚಿದ ನಂತರ.. ಸ್ವಲ್ಪ ಸಮಯ ಮೃದುವಾಗಿ ಮಸಾಜ್ ಮಾಡಿ. ಈ ರೀತಿ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ.
ಅದರ ನಂತರ, ಒಂದು ಗಂಟೆ ಬಿಟ್ಟು ಶಾಂಪೂವಿನಿಂದ ನಿಮ್ಮ ತಲೆಯನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ತಲೆಹೊಟ್ಟು ಕಡಿಮೆಯಾಗುತ್ತದೆ. ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಕೂದಲು ದಟ್ಟವಾಗಿ ಉದ್ದವಾಗಿ ಬೆಳೆಯುತ್ತದೆ.