ಬೋಲ್ಡ್ ಸೀನ್ ಶೂಟಿಂಗ್ ವೇಳೆ ಡೈರೆಕ್ಟರ್‌ ಕಟ್‌ ಹೇಳಿದ್ರೂ ಆ ನಟ ಮಾಡುತ್ತಲೇ ಇದ್ದ..! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ನಟಿ

Sayani Gupta on casting couch : ಬಾಲಿವುಡ್ ನಟಿ ಸಯಾನಿ ಗುಪ್ತಾ ಇತ್ತೀಚೆಗೆ ಚಿತ್ರವೊಂದರ ಶೂಟಿಂಗ್ ವೇಳೆ ನಡೆದ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಚಿತ್ರೀಕರಣದ ವೇಳೆ ತಾವು ಅನುಭವಿಸಿದ ನೋವುಗಳನ್ನು ಹಂಚಿಕೊಂಡರು. ಈ ಪೈಕಿ ನಟರೊಬ್ಬರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾಗಿ ಹೇಳಿಕೊಂಡಿದ್ದಾರೆ...

1 /6

ಕ್ಯಾಮೆರಾ, ಶೂಟಿಂಗ್, ಸಿನಮಾ.. ಈ ಮಾಯಾನಗರಿ ನಾವು ಅಂದುಕೊಂಡಷ್ಟು ಕೆಟ್ಟದ್ದೂ ಅಲ್ಲ, ಒಳ್ಳೆಯದೂ ಅಲ್ಲ.. ಅನೇಕ ಬಾರಿ ಈ ಉದ್ಯಮದಲ್ಲಿ ನಟಿಯರು ಹೆಸರು ಮಾಡಬೇಕು ಅಂದ್ರೆ, ಬಹಳಷ್ಟು ಸಹಿಸಿಕೊಳ್ಳಬೇಕು ಮತ್ತು ಕೆಟ್ಟ ದಿನಗಳನ್ನ ಕೆಟ್ಟವರನ್ನ ಎದರಿಸಬೇಕು.. ಸಧ್ಯ ನಟಿ ಸಯಾನಿ ಗುಪ್ತಾ ಹಂಚಿಕೊಂಡಿರುವ ವಿಚಾರವೊಂದು ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸುತ್ತಿದೆ..  

2 /6

ಒಮ್ಮೆ ಚಿತ್ರವೊಂದರ ಶೂಟಿಂಗ್ ಸಮಯದಲ್ಲಿ ನಡೆದ ಪ್ರಸಂಗವೊಂದರ ಕುರಿತು ನಟಿ ಸಯಾನಿ ಗುಪ್ತಾ ಹೇಳಿದ್ದಾರೆ. ಕಿಸ್ಸಿಂಗ್‌ ಸೀನ್‌ ಚಿತ್ರೀಕರಿಸುವೆ ವೇಳೆ, ಶಾಟ್‌ ಮುಗಿದು, ನಿರ್ದೇಶಕರು ಕಟ್ ಹೇಳಿದರೂ ಆ ನಟ ಮಾತ್ರ ಕಿಸ್‌ ಮಾಡುವುದನ್ನು ನಿಲ್ಲಿಸಲಿಲ್ಲ.. ಆ ಭಯಾನಕ ಸಂಗತಿಯನ್ನು ನಾನು ಇಂದಿಗೂ ಮರೆಯಲ್ಲ ಅಂತ ಹೇಳಿಕೊಂಡಿದ್ದಾರೆ...  

3 /6

'ರೇಡಿಯೋ ನಶಾ'ಗೆ ನೀಡಿದ ಸಂದರ್ಶನದಲ್ಲಿ ಸಯಾನಿ ಗುಪ್ತಾ ಈ ವಿಚಾರವನ್ನು ರಿವೀಲ್‌ ಮಾಡಿದ್ದಾರೆ.. ಕಾಲ ಬದಲಾದ ನಂತರ ಹಲವು ಸುಧಾರಣೆಯಾಗುತ್ತಿವೆ, ಈಗ ಒಂದು ಇಂಟಿಮೇಟ್ ಸೀನ್ ಅಥವಾ ಬೋಲ್ಡ್ ಸೀನ್ ಶೂಟಿಂಗ್ ಮಾಡುವಾಗ ಸೆಟ್‌ನಲ್ಲಿ ಇಂಟಿಮೆಸಿ ಕೋಆರ್ಡಿನೇಟರ್ ಮತ್ತು ಡೈರೆಕ್ಟರ್ ಇರುತ್ತಾರೆ. ಇಂತಹ ಸೀನ್‌ಗಳನ್ನು ಅತ್ಯಂತ ವೃತ್ತಿಪರವಾಗಿ ಚಿತ್ರೀಕರಿಸಲಾಗುತ್ತದೆ.  

4 /6

ನಾನು 2013ರಲ್ಲಿ ಮಾರ್ಗರಿಟಾ ವಿತ್ ಎ ಸ್ಟ್ರಾ ಚಿತ್ರದಲ್ಲಿ ನಟಿಸಿದ್ದೆ. ಕೆಲವರ ಪ್ರಕಾರ ಇಂಟಿಮೇಟ್ ಸೀನ್ ಗಳನ್ನು ತುಂಬಾ ಟೆಕ್ನಿಕಲ್ ಆಗಿ ಮಾಡಿರುವುದರಿಂದ ಮಾಡಲು ಸುಲಭವಾಯಿತು ಎನ್ನುತ್ತಾರೆ. ಆದರೆ ಇದರ ನೆಪದಲ್ಲಿ ಕೆಲವರು ಇದರ ಲಾಭವನ್ನೂ ಪಡೆಯುತ್ತಾರೆ.. ಎಂದರು..   

5 /6

ನಟಿ, 'ನಾನು ಆ ಮುಖವನ್ನೂ ನೋಡಿದ್ದೇನೆ. ಒಮ್ಮೆ ಒಬ್ಬ ನಟ ಕಟ್ ಹೇಳಿದ ಮೇಲೂ ಮುತ್ತು ಕೊಡುತ್ತಲೇ ಇದ್ದ.. ಇದರಿಂದ ನನಗೆ ಸಿಟ್ಟು ಬಂತು. ಕೆಲವೊಮ್ಮೆ ಈ ವಿಷಯಗಳು ತುಂಬಾ ಚಿಕ್ಕದಾಗಿ ಕಾಣಿಸಿದರೂ ಅವುಗಳು ತುಂಬಾ ಅಸಭ್ಯ ವರ್ತನೆಯಾಗಿತ್ತು.  

6 /6

"ಮಾರ್ಗರಿಟಾ ವಿತ್ ಎ ಸ್ಟ್ರಾ" ಸಿನಿಮಾದಲ್ಲಿ ಗೋವಾದಲ್ಲಿ ಶೂಟ್‌ ಆದ ಒಂದು ದೃಶ್ಯ ಇರಲಿದೆ. ನಾನು ಚಿಕ್ಕ ಡ್ರೆಸ್ ಹಾಕಿಕೊಂಡು ಬೀಚ್ ನಲ್ಲಿ ಮಲಗಿದ್ದೆ. ಚಿತ್ರೀಕರಣದ ವೇಳೆ ನನಗೆ ತುಂಬಾ ಅನಾನುಕೂಲವಾಗಿತ್ತು. ಅಲ್ಲಿ 70ಕ್ಕೂ ಹೆಚ್ಚು ಜನ ನಿಂತಿದ್ದರು. ಸುರಕ್ಷತೆಯೂ ಇತ್ತು..